ರಾಜ್ಯ

ಬೆಂಗಳೂರಿನ ಆಸ್ಪತ್ರೆಗಳ ನಿರ್ವಹಣೆ ಕಳಪೆ: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಟೀಕೆ

Srinivasamurthy VN

ಬೆಂಗಳೂರು: ಬೆಂಗಳೂರಿನ ಆಸ್ಪತ್ರೆಗಳ ನಿರ್ವಹಣೆ ಕಳಪೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಟೀಕಿಸಿದ್ದಾರೆ.

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಮತ್ತು ಕೆಸಿ ಜನರಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ ವೀರಪ್ಪ ಅವರು ಸ್ವಚ್ಛತೆ, ನೈರ್ಮಲ್ಯ ಮತ್ತು ಕಳಪೆ ನಿರ್ವಹಣೆಯ ಕೊರತೆಯನ್ನು ಗಮನಿಸಿದರು. ಬೆಂಗಳೂರಿನಲ್ಲಿ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಮೌಲ್ಯಮಾಪನ ಮಾಡಲು ಭೇಟಿ ನೀಡಲಾಯಿತು. ಆಸ್ಪತ್ರೆಯ ವ್ಯವಸ್ಥೆ, ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರು.

ಬೌರಿಂಗ್ ಆಸ್ಪತ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಸರ್ಕಾರದಿಂದ ಬೆಂಬಲ ನೀಡಲಾಗಿದ್ದರೂ, ನಿರ್ವಹಣೆಯ ಕೊರತೆಯಿದೆ. ಸ್ವಚ್ಛ ಬೆಡ್‌ಗಳಿಲ್ಲ, ವೈದ್ಯಕೀಯ ಸಾಮಗ್ರಿಗಳ ಸರಿಯಾದ ಶೇಖರಣೆ, ತ್ಯಾಜ್ಯ ತೆರವು ಮತ್ತು ವೈದ್ಯರ ಗೈರುಹಾಜರಿಯ ಸಮಸ್ಯೆಗಳು ಗಮನಕ್ಕೆ ಬಂದವು. ಒಂದು ವಿಭಾಗದ ಆರು ವೈದ್ಯರಲ್ಲಿ ಐವರು ರಜೆಯಲ್ಲಿರುವುದು ಕಂಡುಬಂದಿದ್ದು, ಬೆಳಗ್ಗೆ 10:30 ಗಂಟೆಯಾದರೂ ಸೂಪರಿಂಟೆಂಡೆಂಟ್ ಆಸ್ಪತ್ರೆಗೆ ತಲುಪಿರಲಿಲ್ಲ ಎಂದು ಹೇಳಿದರು.

ಕೆಸಿ ಜನರಲ್ ಆಸ್ಪತ್ರೆಯಲ್ಲಿ, ಬೌರಿಂಗ್ ಆಸ್ಪತ್ರೆಗೆ ಹೋಲಿಸಿದರೆ ಪರಿಸ್ಥಿತಿ ಉತ್ತಮವಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಮುಂಜಾನೆ 5.30ರಿಂದ ರೋಗಿಯೊಬ್ಬರ ಶವ ಬಿದ್ದಿರುವುದನ್ನು ನ್ಯಾಯಮೂರ್ತಿ ವೀರಪ್ಪ ಗಮನಿಸಿದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಸ್ಪತ್ರೆ ತಿಳಿಸಿದೆ. ಅವರ ಭೇಟಿಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಮೂರ್ತಿ ವೀರಪ್ಪ ಅವರೊಂದಿಗೆ ಸಂವಾದ ನಡೆಸಿದ ಡಾ.ಸತೀಶ್ ಪಿ, ಸ್ವಚ್ಛತೆ ಮತ್ತು ಗ್ರೂಪ್ ಡಿ ಸಿಬ್ಬಂದಿ ಕೊರತೆಯ ಸಮಸ್ಯೆಗಳು ಗಮನಕ್ಕೆ ಬಂದಿವೆ.
 

SCROLL FOR NEXT