ರಾಜ್ಯ

ಪ್ರಾಜೆಕ್ಟ್ ಚೀತಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ: ಸಾಮಾಜಿಕ ಕಾರ್ಯಕರ್ತನ ಬಂಧನ, ಜಾಮೀನು

Nagaraja AB

ಮಂಗಳೂರು: ಚಿರತೆ ತಲೆಯೊಂದಿಗೆ  ಗರ್ಭಿಣಿ ಮಹಿಳೆ ಚಿತ್ರದೊಂದಿಗೆ  ಸೇರಿಸಿ ‘ಬೇಬಿ ಶವರ್ ಯಾವಾಗ’ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಮಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಾಜಿಲಕೇರಿ ವಿರುದ್ಧ ಮಹಿಳಾ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 

ನಮೀಬಿಯಾದಿಂದ ತರೆತಂದಿರುವ ಚಿರತೆ ಗರ್ಭಿಣಿಯಾಗಿದೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಬಾಜಿಲಕೇರಿ ಪ್ರತಿಕ್ರಿಯಿಸಿದ್ದರು. ಆದರೆ, ತದನಂತರ ಆ ಸುದ್ದಿ ಸುಳ್ಳಾಗಿತ್ತು. ಈ ಮಧ್ಯೆ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ನೋಟಿಸ್ ನೀಡಲು ಬಜ್ಪೆ ಪೊಲೀಸರು ಸುನೀಲ್ ಬಾಜಿಲಕೇರಿ ಅವರಿದ್ದ ಸ್ಥಳಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿದಾಗ ಗಲಾಟೆ ಮಾಡಿದ್ದರಿಂದ ಅವರನ್ನು ಬಂಧಿಸಲಾಗಿತ್ತು. 

ಉರ್ವಾ ಪೊಲೀಸರು ಆತನ ಮೇಲೆ ಐಪಿಸಿ ಸೆಕ್ಷನ್ 353 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶನಿವಾರ ಬಾಜಿಲಕೇರಿ ಅವರನ್ನು  ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಬಜ್ಪೆ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 153 (ಎ) 505 (1) (ಬಿ), 509 ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯು ಬಾಜಿಲಕೇರಿ ಅವರ ಬಂಧನವನ್ನು ದಕ್ಷಿಣ ಕನ್ನಡ ಡಿವೈಎಫ್ ಐ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರವು ತನ್ನ ಜನವಿರೋಧಿ ನೀತಿಗಳು ಮತ್ತು ಅಕ್ರಮಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಲು ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ. 
 

SCROLL FOR NEXT