ಸುವರ್ಣ ಸೌಧ, ಬೆಳಗಾವಿ 
ರಾಜ್ಯ

ದಶಕ ಪೂರೈಸಿದ ಬೆಳಗಾವಿ ಸುವರ್ಣಸೌಧ: 10 ವರ್ಷಗಳಲ್ಲಿ ನಡೆದದ್ದು ಕೇವಲ 80 ದಿನಗಳ ಅಧಿವೇಶನ!

ಬೆಳಗಾವಿಯ ಸುವರ್ಣ ವಿಧಾನಸೌಧ ಅಸ್ತಿತ್ವಕ್ಕೆ ಬಂದು ಮಂಗಳವಾರಕ್ಕೆ 10 ವರ್ಷಗಳು ಪೂರ್ಣಗೊಂಡಿದೆ. ಕರ್ನಾಟಕದ ಎರಡನೇ ಶಕ್ತಿ ಕೇಂದ್ರವಾಗಿ ಸ್ಥಾಪಿತವಾದ ಬೃಹತ್ ರಚನೆಯು ರಾಜ್ಯ ಸರ್ಕಾರಕ್ಕೆ ಬಿಳಿ ಆನೆಯಾಗಿದೆ.

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧ ಅಸ್ತಿತ್ವಕ್ಕೆ ಬಂದು ಮಂಗಳವಾರಕ್ಕೆ 10 ವರ್ಷಗಳು ಪೂರ್ಣಗೊಂಡಿದೆ. ಕರ್ನಾಟಕದ ಎರಡನೇ ಶಕ್ತಿ ಕೇಂದ್ರವಾಗಿ ಸ್ಥಾಪಿತವಾದ ಬೃಹತ್ ರಚನೆಯು ರಾಜ್ಯ ಸರ್ಕಾರಕ್ಕೆ ಬಿಳಿ ಆನೆಯಾಗಿದೆ.

ಪ್ರತಿ ವರ್ಷ ಇದರ ನಿರ್ವಹಣೆಗೆ 5 ಕೋಟಿ ರೂ. ವೆಚ್ಚ ಮಾಡುತ್ತಿದ್ದರೂ ಕಳೆದ 10 ವರ್ಷಗಳಲ್ಲಿ ಕೇವಲ 80 ದಿನ ಮಾತ್ರ ಇಲ್ಲಿ ವಿಧಾನಮಂಡಲ ಅಧಿವೇಶನ ನಡೆದಿರುವುದು ದುರಾದೃಷ್ಟ.

ಸರ್ಕಾರವು ವರ್ಷಕ್ಕೆ ಕೇವಲ 10 ದಿನಗಳ ಕಾಲ ಸುವರ್ಣ ಸೌಧದಲ್ಲಿ ವಿಧಾನಮಂಡಲದ ಅಧಿವೇಶನಗಳನ್ನು ನಡೆಸುತ್ತಿದೆ. ವರ್ಷವಿಡೀ ಸುವರ್ಣ ಸೌಧವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಉತ್ತರ ಕರ್ನಾಟಕದಾದ್ಯಂತ ವಿವಿಧ ಭಾಗಗಳಿಂದ ನಿರಂತರವಾಗಿ ಒತ್ತಾಯಿಸುತ್ತಿದ್ದರೂ ಸರ್ಕಾರ ಮಾತ್ರ ಜಾಣ ಕಿವುಡುತನ ಪ್ರದರ್ಶಿಸುತ್ತಿದೆ.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಿಸಲು ನಿರ್ಧರಿಸಿತು. ಪ್ರತಿ ವರ್ಷ ರಾಜ್ಯ ವಿಧಾನಮಂಡಲದ ಪೂರ್ಣ ಪ್ರಮಾಣದ ಚಳಿಗಾಲದ ಅಧಿವೇಶನವನ್ನು ನಡೆಸುವ ಏಕೈಕ ಉದ್ದೇಶದಿಂದ ಹಲವಾರು ಪ್ರಮುಖ ಕಚೇರಿಗಳು ಮತ್ತು ಇಲಾಖೆಗಳನ್ನು ಕಟ್ಟಡಕ್ಕೆ ಸ್ಥಳಾಂತರಿಸಿತು.

ಹಲಗಾದ 127 ಎಕರೆ ಜಾಗದಲ್ಲಿ 2007ರಿಂದ 2012ರ ಅವಧಿಯಲ್ಲಿ ಸುವರ್ಣಸೌಧ ನಿರ್ಮಿಸಲು ಸುಮಾರು 450 ಕೋಟಿ ರು ಖರ್ಚು ಮಾಡಲಾಯಿತು.

ಮೂಲಗಳ ಪ್ರಕಾರ, ಸೌಧದಲ್ಲಿ ಇದುವರೆಗೆ ಎಂಟು ವಿಧಾನಮಂಡಲ ಅಧಿವೇಶನಗಳು ನಡೆದಿದೆ. ಪ್ರತಿಯೊಂದೂ 10 ದಿನಗಳಿಗಿಂತ ಹೆಚ್ಚು ನಡೆದಿಲ್ಲ.  ಕೋವಿಡ್ ಬಿಕ್ಕಟ್ಟಿನಿಂದಾಗಿ ಸುವರ್ಣ ಸೌಧ ಎರಡು ವರ್ಷಗಳ ಕಾಲ ಮುಚ್ಚಲ್ಪಟ್ಟಿತ್ತು. ಮಾಹಿತಿ ಆಯುಕ್ತರ ಕಚೇರಿ ಸೌಧದಲ್ಲಿರುವ ಏಕೈಕ ರಾಜ್ಯ ಮಟ್ಟದ ಕಚೇರಿಯಾಗಿದೆ.

ವಿದ್ಯುತ್ ದರದ ಜೊತೆಗೆ ಅದರ ಆವರಣದಲ್ಲಿರುವ ಉದ್ಯಾನಗಳ ನಿರ್ವಹಣೆಗೆ ಭಾರಿ ಮೊತ್ತವನ್ನು ವ್ಯಯಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.  ಸುವರ್ಣ ಸೌಧವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ.  ಸಾರ್ವಜನಿಕ ಹಣವನ್ನು ಸರ್ಕಾರವು ಸೌಧದ ನಿರ್ವಹಣೆಗೆ ವ್ಯರ್ಥವಾಗಿ ಪೋಲು ಮಾಡುತ್ತಿದೆ. ವಿಧಾನಮಂಡಲದ ಪೂರ್ಣ ಪ್ರಮಾಣದ ಚಳಿಗಾಲದ ಅಧಿವೇಶನ ನಡೆಸುವುದರ ಜೊತೆಗೆ, ಜನರ ಹಣ  ವ್ಯರ್ಥವಾಗುವುದನ್ನು ತಡೆಯಲು ಸರ್ಕಾರ ನಿಯಮಿತ ಯೋಜನೆ ರೂಪಿಸಬೇಕು  ಎಂದು ಬರಹಗಾರ ಡಿ ಎಸ್ ಚೌಗಲೆ ಹೇಳಿದ್ದಾರೆ.

ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನಗಳನ್ನು ಪರಿಣಾಮಕಾರಿಯಾಗಿ ನಡೆಸುವಂತೆ ರಾಜಕಾರಣಿ ಎಂಎಸ್ ಬಾಗವಾನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸುವುದರ ಜೊತೆಗೆ, ಉತ್ತರ ಕರ್ನಾಟಕವನ್ನು ಸಮಾನವಾಗಿ ಅಭಿವೃದ್ಧಿಪಡಿಸಲು ಅಧಿವೇಶನಗಳು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಸೌಧವನ್ನು ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳುವಂತೆ ಆಗ್ರಹಿಸಿ ಕಳೆದ ಕೆಲವು ವರ್ಷಗಳಿಂದ ಸರಣಿ ಆಂದೋಲನ ನಡೆಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೂಲಗಳ ಪ್ರಕಾರ ಈ ಬಿಳಿ ಆನೆಯ ನಿರ್ವಹಣೆಗೆ ಕಳೆದ 10 ವರ್ಷಗಳಲ್ಲಿ 50 ಕೋಟಿ ರೂ. ವ್ಯಯಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT