ಬಿವೈ ರಾಘವೇಂದ್ರ 
ರಾಜ್ಯ

ಸಂಸದ ಬಿ.ವೈ ರಾಘವೇಂದ್ರ ಖಾತೆಯಿಂದ 15 ಲಕ್ಷ ರೂ. ಎಗರಿಸಿದ್ದ ಕ್ರಿಮಿನಲ್: ಹಣ ಕಳೆದುಕೊಂಡಿದ್ದೇಗೆ ಮಾಜಿ ಸಿಎಂ ಪುತ್ರ?

ಕೆಲವು ತಿಂಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ನ ನಕಲಿ ಚೆಕ್‌ನಲ್ಲಿ ತಮ್ಮ ಸಹಿಯನ್ನು ನಕಲಿ ಮಾಡಿ 14-15 ಲಕ್ಷ ರೂಪಾಯಿಗಳನ್ನು ನನ್ನ ಬ್ಯಾಂಕ್ ಖಾತೆಯಿಂದ ಲಪಟಾಯಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಶಿವಮೊಗ್ಗ: ಕೆಲವು ತಿಂಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ನ ನಕಲಿ ಚೆಕ್‌ನಲ್ಲಿ ತಮ್ಮ ಸಹಿಯನ್ನು ನಕಲಿ ಮಾಡಿ 14-15 ಲಕ್ಷ ರೂಪಾಯಿಗಳನ್ನು ನನ್ನ ಬ್ಯಾಂಕ್ ಖಾತೆಯಿಂದ ಲಪಟಾಯಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಶಿವಮೊಗ್ಗದ ಕಾರ್ಯಾಗಾರವೊಂದರಲ್ಲಿ ಮಾತನಾಡಿದ ಅವರು ಸೈಬರ್, ಭದ್ರತೆಯನ್ನು ಬಲಪಡಿಸುವ ಮತ್ತು ದೇಶದಲ್ಲಿ ಶೂನ್ಯ ಸೈಬರ್ ಕ್ರೈಮ್ ವಾತಾವರಣ ಸೃಷ್ಟಿಸುವ ಅಗತ್ಯತೆಯ ಬಗ್ಗೆ ತಿಳಿಸಿದರು.45 ಕೋಟಿ ಜನ್ ಧನ್ ಖಾತೆಗಳನ್ನು ರಚಿಸಿ ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತಿರುವುದರಿಂದ ನೆಟ್ ಬ್ಯಾಂಕಿಂಗ್ ಬಳಸುವವರ ಸಂಖ್ಯೆ ಹೆಚ್ಚಿದೆ. ಪ್ರತಿಯೊಬ್ಬರ ಹಣವೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸೈಬರ್ ಭದ್ರತೆಯ ವಾತಾವರಣವನ್ನು ಬಿಗಿಗೊಳಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಪಿಇಎಸ್  ಎಂಜಿನಿಯರಿಂಗ್ ಕಾಲೇಜಿನ ಅಕೌಂಟ್ ನಿಂದ ಕಿಡಿಗೇಡಿ 16 ಲಕ್ಷ ಹಣವನ್ನು  ಲಪಟಾಯಿಸಿದ್ದನು. ಬಳಿಕ ಪೊಲೀಸರ ಸಹಾಯದಿಂದ ಹಣವನ್ನು ಹಿಂಪಡೆದುಕೊಂಡಿರುವುದಾಗಿ ಸಂಸದರು ತಿಳಿಸಿದರು.

ಸಹಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅದು ಮೂಲ ಸಹಿಗಿಂತ ಸ್ವಲ್ಪ ಭಿನ್ನವಾಗಿದೆ ಎಂದು ತನಿಖಾಧಿಕಾರಿಗಳಿಗೆ ತಿಳಿಯಿತು. ಚೆಕ್ ಲೀಫ್ ಕೂಡ ಅಸಲಿ ಅಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಮುಂಬೈ ಮೂಲದ ಅಪರಾಧಿಗಳು ವಂಚನೆ ಮಾಡಿದ್ದಾರೆ ಮತ್ತು ನಾವು ಅವರೆಲ್ಲರನ್ನು ಪತ್ತೆಹಚ್ಚಿ, ಹಣವನ್ನು ಮರುಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಅವರು ಹೇಗೆ ಸಹಿ ಪಡೆದು ನಕಲಿ ಚೆಕ್ ಲೀಫ್ ಸೃಷ್ಟಿಸಿದರು ಎಂಬುದು ಇನ್ನೂ ನಿಗೂಢವಾಗಿದೆ ಎಂದರು.

ಸೈಬರ್‌ ಕ್ರೈಮ್‌ಗಳು ಹೆಚ್ಚಾಗುತ್ತಿದ್ದು, ಹೆಚ್ಚಿನ ಜನರು ಬಲಿಯಾಗುವ ಮುನ್ನ ಸೈಬರ್‌ ಸುರಕ್ಷತೆಯನ್ನು ನಿರ್ವಹಿಸಲು ಏಜೆನ್ಸಿಯ ಅಗತ್ಯವಿದೆ ಎಂದು ಸೈಬರ್ ಸಿಟಿ ತಜ್ಞ ಡಾ.ಸಿ.ಶುಭಮಂಗಳ ಸುನಿಲ್ ಹೇಳಿದ್ದಾರೆ.

"ಸೈಬರ್ ಭದ್ರತೆಯು ಸ್ಥೂಲ ಆರ್ಥಿಕ ಕುಸಿತವನ್ನು ಹೊಂದಿದ್ದು, ರಾಷ್ಟ್ರದ ಆರ್ಥಿಕತೆಯ ಮೇಲೆ ಸಹ ಪರಿಣಾಮ ಬೀರಬಹುದು. ಕೆಲವು ರೀತಿಯಲ್ಲಿ, ದೇಶದ ಜಿಡಿಪಿ ಬೆಳವಣಿಗೆಯು ಸೈಬರ್ ಅಪರಾಧಗಳನ್ನು ಎದುರಿಸಲು ಒಟ್ಟಾರೆ ಪರಿಸರದ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT