ಮುರುಘಾ ಶ್ರೀಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 
ರಾಜ್ಯ

ಮುರುಘಾ ಶ್ರೀಗಳನ್ನ ಪೀಠದಿಂದ ಕೆಳಗಿಳಿಸುವ ವಿಚಾರದಲ್ಲಿ ಕಾನೂನು ಪ್ರಕಾರ ಮುಂದಿನ ಕ್ರಮ: ಸಿಎಂ ಬೊಮ್ಮಾಯಿ

ಚಿತ್ರದುರ್ಗದಲ್ಲಿ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮತ್ತೆ ಕೇಸು ದಾಖಲಾಗಿದ್ದು ಅವರ ಪದಚ್ಯುತಿಗಾಗಿ ಒತ್ತಡ, ಆಗ್ರಹ ಹೆಚ್ಚಾಗುತ್ತಿದೆ.

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮತ್ತೆ ಕೇಸು ದಾಖಲಾಗಿದ್ದು ಅವರ ಪದಚ್ಯುತಿಗಾಗಿ ಒತ್ತಡ, ಆಗ್ರಹ ಹೆಚ್ಚಾಗುತ್ತಿದೆ. ಮುರುಘಾ ಪೀಠಾಧ್ಯಕ್ಷ ಬದಲಾವಣೆಗೆ ಒತ್ತಡ ಹೆಚ್ಚಿದ್ದು, ಕಳಂಕ ಹೊತ್ತ ಶ್ರೀಗಳು ಪೀಠಾಧ್ಯಕ್ಷರಾಗಿ ಮುಂದುವರಿಯಬಾರದು, ಕೇಸ್​ಗಳ ಮೇಲೆ ಕೇಸ್​ ದಾಖಲಾಗ್ತಿದ್ರೂ ಬದಲಾವಣೆ ಯಾಕಿಲ್ಲ ಎಂದು ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಮುರುಘಾ ಮಠದ ಬಗ್ಗೆ ಈಗ ದಿನಕ್ಕೊಂದು ವಿಷಯಗಳು ಹೊರಬರುತ್ತಿವೆ. ಈ ಮಧ್ಯೆ ಮುರುಘಾ ಶ್ರೀಗಳನ್ನು ಪೀಠದಿಂದ ಕೆಳಗಿಳಿಸಬೇಕೆಂದು ಮಠದ ಭಕ್ತರು, ಮಾಜಿ ಶಾಸಕರು, ಮಾಜಿ ಸಚಿವರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುರುಘಾ ಮಠದ ವಿಚಾರಗಳು, ಅಲ್ಲಿನ ಆಡಳಿತಕ್ಕೆ ಆಗುತ್ತಿರುವ ತೊಂದರೆಗಳನ್ನು ಹೇಳಿದ್ದಾರೆ. ಕಾನೂನು ಪ್ರಕಾರ ಟ್ರಸ್ಟ್ ಇದೆ, ಕಾನೂನಿನಡಿಯಲ್ಲಿ ಮುಂದಿನ ಕ್ರಮಗಳು ಏನು ಮಾಡಬೇಕೆಂದು, ಕಾನೂನು ಪ್ರಕಾರ ಏನೆಲ್ಲಾ ಅವಕಾಶ ಇದೆ ಎಂದು ಚರ್ಚೆ, ಪರಿಶೀಲನೆ ನಡೆಸುತ್ತಿದ್ದೇವೆ, ಏನೇ ಮಾಡಿದರೂ ಕಾನೂನಿನ ಚೌಕಟ್ಟಿನಡಿಯಲ್ಲಿಯೇ ಮಾಡುತ್ತೇವೆ ಎಂದರು.

ಈ ಮಧ್ಯೆ, ಮುರುಘಾ ಮಠದಲ್ಲಿ ನಿನ್ನೆ 4 ವರ್ಷದ ಹೆಣ್ಣು ಮಗುವೊಂದು ಪತ್ತೆಯಾಗಿದ್ದು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆ ಮಗು ದಿಢೀರನೆ ಪತ್ತೆಯಾಗಿದ್ದು ಹೇಗೆ, ಮಠದಲ್ಲಿ ತಂದು ಬಿಟ್ಟವರ್ಯಾರು ಎಂಬ ಪ್ರಶ್ನೆ ಉಂಟಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT