ರಾಹುಲ್ ಗಾಂಧಿ 
ರಾಜ್ಯ

ನಮ್ಮಮ್ಮ ಸನ್ ಸ್ಕ್ರೀನ್ ಲೋಷನ್ ಕಳ್ಸಿದ್ದಾರೆ, ಆದರೆ... ರಾಹುಲ್ ಗಾಂಧಿ ವಿಡಿಯೋ ವೈರಲ್!

ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿದಿನ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ವೇಳೆ ಅವರು ತಮ್ಮ ಬೆಂಬಲಿಗರ ಜೊತೆ ನಡೆಸಿದ ಮಾತುಕತೆಯಲ್ಲಿ ವಿಷಯವೊಂದನ್ನು ಸ್ಪಷ್ಟ ಪಡಿಸಿದ್ದಾರೆ.

ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿದಿನ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ವೇಳೆ ಅವರು ತಮ್ಮ ಬೆಂಬಲಿಗರ ಜೊತೆ ನಡೆಸಿದ ಮಾತುಕತೆಯಲ್ಲಿ ವಿಷಯವೊಂದನ್ನು ಸ್ಪಷ್ಟ ಪಡಿಸಿದ್ದಾರೆ.

ಬಿಸಿಲಿನಲ್ಲಿ ನಡೆಯುತ್ತಿದ್ದೀರಲ್ಲಾ, ಚರ್ಮದ ಬಣ್ಣ ಕಪ್ಪಾಗದಂತೆ ತಡೆಯಲು ಯಾವ ಸನ್ ಸ್ಕ್ರೀನ್ ಲೋಷನ್ ಬಳಸುತ್ತೀರಿ ಎಂದು ಕಾರ್ಯಕರ್ತರು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ನಮ್ಮಮ್ಮ ಸನ್ ಸ್ಕ್ರೀನ್ ಲೋಷನ್ ಕಳುಹಿಸಿದ್ದಾರೆ. ಆದರೆ ನಾನು ಯಾವುದನ್ನು ಬಳಸುತ್ತಿಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

ರಾಹುಲ್ ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಯಾತ್ರೆಗೆ ವಿರಾಮ ನೀಡಲಾಗಿತ್ತು. ಕರ್ನಾಟಕದ ಬಳ್ಳಾರಿಯಲ್ಲಿ ಯಾತ್ರೆಯ ಕ್ಯಾಂಪ್‌ಸೈಟ್‌ನಲ್ಲಿಯೂ ರಾಹುಲ್ ಮತ ಚಲಾಯಿಸಿದರು. ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರು 24 ವರ್ಷಗಳ ನಂತರ ಮೊದಲ ಗಾಂಧಿಯೇತರ ಕುಟುಂಬದ ವ್ಯಕ್ತಿ ಪಕ್ಷದ ಮುಖ್ಯಸ್ಥರಾಗುವ ರೇಸ್‌ನಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾನು ಸೇರಿದಂತೆ 14 ಮಿಲಿಯನ್ ಇರಾನಿಯನ್ನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ- ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್!

ಜಯಮೃತ್ಯುಂಜಯ ಶ್ರೀ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಅವರು ಸ್ವಾಮೀಜಿಗಳಾಗಿ ಉಳಿದಿಲ್ಲ; ಕಾಶಪ್ಪನವರ್ ಕಿಡಿ

Iran ಸರ್ವಾಧಿಕಾರಿ ಈಗ 'ಜೀವಂತ ಶವ', 'ಪ್ರಜ್ಞಾಹೀನ'.. ಯುದ್ಧವೂ ಗೊತ್ತಿಲ್ಲ.. ಕದನ ವಿರಾಮದ ಅರಿವೂ ಇಲ್ಲ: ವರದಿ

'ಹೇಳಿ ಇಲ್ಲದಿದ್ದರೆ ಜೈಲಿಗೆ ಹೋಗಿ': F-15 ಜೆಟ್‌ ಸೂಕ್ಷ್ಮ ಮಾಹಿತಿ 'ಸೋರಿಕೆದಾರನ' ಪತ್ತೆಗೆ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ, ಮಾಧ್ಯಮಗಳಿಗೆ ಬೆದರಿಕೆ!

Drink And Drive Case: ಆಸ್ಟ್ರೇಲಿಯಾದ ಲೆಜೆಂಡ್ ಡೇವಿಡ್ ವಾರ್ನರ್ ಬಂಧನ! ಕರಾಚಿ ಕಿಂಗ್ಸ್ ಗೆ ಹೊಡೆತ!

SCROLL FOR NEXT