ರಾಜ್ಯ

ಪಾಕಿಸ್ತಾನದ ಎರಡು ವರ್ಷದ ಮಗುವಿಗೆ ಬೆಂಗಳೂರಿನಲ್ಲಿ ಬೋನ್ ಮ್ಯಾರೊ ಕಸಿ

Lingaraj Badiger

ಬೆಂಗಳೂರು: ಪಾಕಿಸ್ತಾನದ ಎರಡು ವರ್ಷದ ಮಗು ಅಮೈರಾ ಸಿಕಂದರ್ ಖಾನ್ ಗೆ ನಗರದ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿ(ಬಿಎಂಟಿ)ಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಕರಾಚಿಯಿಂದ ಬಂದಿರುವ ಕ್ರಿಕೆಟ್ ವೀಕ್ಷಕ ವಿವರಣೆಗಾರ ಸಿಕಂದರ್ ಬಖ್ತ್ ಅವರ ಮಗಳು ಅಮೈರಾ ಅವರು ಇತ್ತೀಚೆಗೆ ನಾರಾಯಣ ಹೆಲ್ತ್‌ನಲ್ಲಿ ಬಿಎಂಟಿ ಸಹಾಯದಿಂದ ಮ್ಯೂಕೋಪೊಲಿಸ್ಯಾಕರಿಡೋಸಿಸ್ ಟೈಪ್ 1 (ಎಂಪಿಎಸ್ I) ನಿಂದ ಗುಣಮುಖಳಾಗಿದ್ದಾಳೆ.

"ಮ್ಯೂಕೋಪೊಲಿಸ್ಯಾಕರಿಡೋಸಿಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಕಣ್ಣುಗಳು ಮತ್ತು ಮೆದುಳು ಸೇರಿದಂತೆ ಅನೇಕ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಹೆಲ್ತ್‌ಕೇರ್ ಚೈನ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ದೇವಿ ಶೆಟ್ಟಿ ಬುಧವಾರ ಹೇಳಿದ್ದಾರೆ.

ಅಮೈರಾ(2.6 ವರ್ಷ) ದಾನಿಯಾಗಿದ್ದ ತನ್ನ ತಂದೆಯ ಮೂಳೆ ಮಜ್ಜೆಯನ್ನು ಬಳಸಿ ಉಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

SCROLL FOR NEXT