ಸಂಗ್ರಹ ಚಿತ್ರ 
ರಾಜ್ಯ

ರೂ.1.74 ಲಕ್ಷ ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ

ರಾಜ್ಯದಲ್ಲಿ ರೂ.1.74 ಲಕ್ಷ ಕೋಟಿ ಮೌಲ್ಯದ ಒಟ್ಟು 11 ಯೋಜನೆಗಳಿಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಶನಿವಾರ ಒಪ್ಪಿಗೆ ನೀಡಿದೆ.

ಬೆಂಗಳೂರು: ರಾಜ್ಯದಲ್ಲಿ ರೂ.1.74 ಲಕ್ಷ ಕೋಟಿ ಮೌಲ್ಯದ ಒಟ್ಟು 11 ಯೋಜನೆಗಳಿಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಶನಿವಾರ ಒಪ್ಪಿಗೆ ನೀಡಿದೆ. 

ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು ರೂ. 1,74,381.44 ಕೋಟಿ ಮೌಲ್ಯದ 11 ಯೋಜನೆಗಳಿಗೆ ಅನುಮೋದನೆ ನೀಡಿತು. 

ಯೋಜನೆಗಳಿಗೆ ಒಪ್ಪಿಗೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಹಸಿರು ಇಂಧನವೇ ಭವಿಷ್ಯ, 2026ರಿಂದ ಗ್ರೀನ್‌ ಹೈಡ್ರೋಜನ್‌ ರಫ್ತು ಆರಂಭವಾಗಲಿದ್ದು, ದೇಶದ ಒಟ್ಟು ಗ್ರೀನ್‌ ಹೈಡ್ರೋಜನ್‌ ರಫ್ತಿನಲ್ಲಿ ರಾಜ್ಯದ ಪಾಲು ಅಧಿಕವಾಗಿರಲಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಗ್ರೀನ್ ಹೈಡ್ರೋಜನ್‌ ಉತ್ಪಾದನೆಗೆ ಮುಂದಾಗಿರುವ ಆಕ್ಮೆ ಕ್ಲೀನ್‌ ಟೆಕ್‌ ಸಲ್ಯೂಷನ್ಸ್‌ ಪ್ರೈ. ಲಿ., ಜೆಎಸ್‌ಡಬ್ಲ್ಯು ಗ್ರೀನ್‌ ಹ್ರೈಡ್ರೋಜನ್‌ ಲಿ., ಅವದಾ ವೆಂಚರ್ಸ್‌ ಪ್ರೈ. ಲಿ ಹಾಗೂ ರಿನ್ಯೂ ಇ-ಫ್ಯೂಯೆಲ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಪ್ರಸ್ತಾವನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮೊದಲೇ ಇಷ್ಟು ಮೊತ್ತದ ಬಂಡವಾಳ ರಾಜ್ಯದಲ್ಲಿ ಹೂಡಿಕೆ ಆಗುತ್ತಿರುವುದು ವಿಶೇಷ. ಇದು ನಮ್ಮ ಉತ್ಸಾಹ ಮತ್ತು ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಪ್ರಮುಖ ಹೂಡಿಕೆಗಳು ಇಂತಿವೆ...
ಆಕ್ಮೆಕ್ಲೀನ್‌ ಟೆಕ್‌ ಸಲ್ಯೂಷನ್‌ ಪ್ರೈ.ಲಿ. ರೂ.51,865 ಕೋಟಿ
ಅವದಾ ವೆಂಚರ್ಸ್‌ ಪ್ರೈ.ಲಿ. ರೂ.45 ಸಾವಿರ ಕೋಟಿ
ಜೆಎಸ್‌ಡಬ್ಲ್ಯೂ ಗ್ರೀನ್‌ ಹೈಡ್ರೋಜನ್‌ ಲಿ. ರೂ.40148 ಕೋಟಿ
ರಿನ್ಯೂ ಇ-ಫ್ಯೂಯೆಲ್ಸ್‌ ಪ್ರೈ. ಲಿ. ರೂ.20 ಸಾವಿರ ಕೊಟಿ
ಏಟ್ರಿಯಾ ಪವರ್‌ ಹೋಲ್ಡಿಂಗ್ಸ್ ರೂ.9454 ಕೋಟಿ
ಕಿರ್ಲೋಸ್ಕರ್‌ ಫೆರೋಸ್‌ ಇಂಡಸ್ಟ್ರೀಸ್‌ ಲಿ.ರೂ.3,025ಕೋಟಿ
ಜೆಎಸ್‌ಡಬ್ಲ್ಯೂ ನಿಯೋ ಎನರ್ಜಿ ಲಿ. ರೂ 2,579 ಕೋಟಿ
ಕಾಂಟಿನೆಂಟಲ್‌ ಅಟೋಮೇಟಿವ್‌ ಕಾಂಪೋನೆಂಟ್ಸ್‌ ರೂ.920 ಕೋಟಿ

ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು...
ಟೊಯೋಟ ಕಿರ್ಲೋಸ್ಕರ್‌ ಮೋಟಾರ್‌ ಪ್ರೈ.ಲಿ. ರೂ.511 ಕೋಟಿ
ಜಿ.ಎಂ.ಶುಗರ್‌ ಮತ್ತು ಎನರ್ಜಿ ಲಿ. ರೂ.49.44 ಕೋಟಿ
ರಿಸೋರ್ಸ್‌ ಪೆಲ್ಲೆಟ್ಸಸ್‌ ಕಾನ್ಸನ್ಟೆ್ರೕಟ್ಸ್‌ ಪ್ರೈ.ಲಿ. ರೂ.830 ಕೋಟಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT