ಹೊಸ ಸಫಾರಿ ಮಾರ್ಗ ಯೋಜನೆ 
ರಾಜ್ಯ

ಗೇಟ್‌ ಬಂದ್ ಮಾಡುತ್ತೇವೆ: ನಾಗರಹೊಳೆ ಹೊಸ ಸಫಾರಿ ಮಾರ್ಗ ತೆರೆಯದಂತೆ ಕೊಡಗಿನ ರೈತರ ಎಚ್ಚರಿಕೆ

ಕೊಡಗಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹೊಸ ಸಫಾರಿ ಮಾರ್ಗ ಆರಂಭಿಸುವ ಕಾಮಗಾರಿ ಭರದಿಂದ ಸಾಗಿದೆ. 

ಮಡಿಕೇರಿ: ಕೊಡಗಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹೊಸ ಸಫಾರಿ ಮಾರ್ಗ ಆರಂಭಿಸುವ ಕಾಮಗಾರಿ ಭರದಿಂದ ಸಾಗಿದೆ. ಆದರೆ, ಸ್ಥಳೀಯ ಗ್ರಾಮಸ್ಥರ ಬೆಂಬಲದೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಮಾರ್ಗ ಆರಂಭಿಸಿದರೆ ಗೇಟ್‌ ಬಂದ್ ಮಾಡಿ ಪ್ರವಾಸಿಗರನ್ನು ತಡೆಯವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಸಾವಿರಾರು ಪ್ರವಾಸಿಗರ ಸಫಾರಿಗೆ ಹೆಸರುವಾಸಿಯಾಗಿದೆ. ಕೆಲವು ವರ್ಷಗಳ ಹಿಂದೆ ಕೋರ್ ಫಾರೆಸ್ಟ್ ಪ್ರದೇಶದಲ್ಲಿ ಸಫಾರಿ ನಡೆಸಿದ್ದರೆ, ಪ್ರಸ್ತುತ ಕೊಡಗಿನ ಕುಟ್ಟ ಬಳಿಯ ನಂಚಿ ಗೇಟ್ ಮತ್ತು ಕಬಿನಿ ಬಳಿಯ ವೀರನ ಹೊಸಹಳ್ಳಿ ಗೇಟ್‌ನಲ್ಲಿ ಸಫಾರಿ ನಡೆಸಲಾಗುತ್ತಿದೆ.

ಅರಣ್ಯ ಇಲಾಖೆಯು ಸಫಾರಿ ಚಟುವಟಿಕೆಗಳನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ಈಗ ಕೊಡಗಿನ ಆನೆಚೌಕೂರಿನ ಮಜ್ಜಿಗೆಹಳ್ಳ ಮತ್ತು ಪಿರಿಯಾಪಟ್ಟಣ ತಾಲೂಕಿನ ಮತ್ತೂರು ಎಂಬಲ್ಲಿ ಎರಡು ಹೊಸ ಸಫಾರಿ ಮಾರ್ಗಗಳನ್ನು ಸ್ಥಾಪಿಸಲು ಮುಂದಾಗಿದೆ.

“ಈ ಪ್ರದೇಶದಲ್ಲಿ ವನ್ಯಜೀವಿ ಸಂಘರ್ಷ ಉತ್ತುಂಗದಲ್ಲಿದೆ. ಹುಲಿ ಸಂರಕ್ಷಿತ ಪ್ರದೇಶದೊಳಗೆ ಹೊಸ ಸಫಾರಿ ಮಾರ್ಗವನ್ನು ತೆರೆಯುವುದರಿಂದ ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗುತ್ತದೆ. ಏಕೆಂದರೆ ವಾಹನಗಳ ಹೆಚ್ಚಿನ ಸಂಚಾರದಿಂದಾಗಿ ವನ್ಯಜೀವಿಗಳು ಅರಣ್ಯದಿಂದ ಹೊರ ಹೋಗುತ್ತವೆ. ವನ್ಯಜೀವಿಗಳನ್ನು ಕೋರ್ ಫಾರೆಸ್ಟ್ ಪ್ರದೇಶದ ಹೊರಗೆ ಮತ್ತು ಬಫರ್ ಜೋನ್‌ಗೆ ಆಕರ್ಷಿಸಲು ಅರಣ್ಯ ಇಲಾಖೆಯು ಬಫರ್ ಝೋನ್‌ನಲ್ಲಿರುವ ಉಪ್ಪು ಲಿಕ್ಸ್ ಅಥವಾ ಖನಿಜ ಲಿಕ್ಸ್ ಅನ್ನು ಅಗೆಯುತ್ತದೆ ಎಂದು ನಮಗೆ ತಿಳಿದು ಬಂದಿದೆ ” ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮತ್ತು ರಾಜ್ಯ ಕಾರ್ಯದರ್ಶಿ ಕೆ ಮನು ಸೋಮಯ್ಯ ಹೇಳಿದ್ದಾರೆ.

ಜಿಂಕೆಗಳನ್ನು ಆಕರ್ಷಿಸಲು ಅರಣ್ಯದ ಅಂಚಿನಲ್ಲಿ ಲಂಟಾನಗಳನ್ನು ನೆಡುತ್ತಾರೆ, ಇದು ವನ್ಯಜೀವಿಗಳು ಅರಣ್ಯದ ಗಡಿಗೆ ಸೆಳೆಯಲ್ಪಟ್ಟು ಗ್ರಾಮಸ್ಥರ ಮತ್ತು ರೈತರ ಜೀವಗಳಿಗೆ ಅಪಾಯ ಇದೆ ಎಂದು ಅವರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!