ಕೆ ಎಸ್ ಈಶ್ವರಪ್ಪ 
ರಾಜ್ಯ

ಮುರುಘಾ ಶರಣರ ಪ್ರಕರಣ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ, ಮಾತನಾಡಿದರೆ ಅನಿಷ್ಟ: ಕೆ ಎಸ್ ಈಶ್ವರಪ್ಪ

ಪೋಕ್ಸೋ ಪ್ರಕರಣದಡಿ ಬಂಧಿತರಾಗಿ ಜೈಲುಪಾಲಾಗಿರುವ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರ ಪ್ರಕರಣ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತದೆ, ಅದರ ಬಗ್ಗೆ ನನಗೆ ಮಾತನಾಡಲು ಮನಸ್ಸಿಲ್ಲ ಎಂದು ಮಾಜಿ ಸಚಿವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ: ಪೋಕ್ಸೋ ಪ್ರಕರಣದಡಿ ಬಂಧಿತರಾಗಿ ಜೈಲುಪಾಲಾಗಿರುವ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರ ಪ್ರಕರಣ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತದೆ, ಅದರ ಬಗ್ಗೆ ನನಗೆ ಮಾತನಾಡಲು ಮನಸ್ಸಿಲ್ಲ ಎಂದು ಮಾಜಿ ಸಚಿವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂ ಧರ್ಮಕ್ಕೆ ಪ್ರೇರಣೆ ಆಗುವುದು ಸಾಧು ಸಂತರು, ಮಠದ ಬಗ್ಗೆ ನನಗೆ ಹಿಂದಿನಿಂದಲೂ ಗೌರವವಿದೆ, ಈಗಲೂ ಇದೆ ಮುಂದೆಯೂ ಇರುತ್ತದೆ, ಪ್ರಕರಣ ಕೇಳಿಬಂದಾಗಿನಿಂದ ಇದು ಸುಳ್ಳಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸಿದ್ದೇನೆ, ಪ್ರಕರಣದ ತನಿಖೆ ನ್ಯಾಯಾಲಯದಲ್ಲಿ ನಡೆಯುತ್ತಿದೆ, ತೀರ್ಪು ಬರಲಿ ಆಮೇಲೆ ಪ್ರತಿಕ್ರಿಯಿಸುತ್ತೇನೆ ಎಂದರು.

ಈ ಪ್ರಕರಣ ಬಗ್ಗೆ ಮಾತನಾಡಲು ನನಗೆ ಮನಸ್ಸಿಲ್ಲ, ವಾಕರಿಕೆ ಬರುತ್ತದೆ, ಅದರ ಬಗ್ಗೆ ಮಾತನಾಡಿದರೆ ಅನಿಷ್ಟ ಬರುತ್ತದೆ. ನನಗೆ ಮಠಾಧೀಶರು ಎಂದರೆ ದೇವರಿದ್ದ ಹಾಗೆ, ಕೇಸು ನಡೆಯುತ್ತಿರುವಾಗ ಮಾತನಾಡುವುದು ಏಕೆ ಎಂದರು. 

ಮುರುಘಾ ಮಠಾಧೀಶರ ಬಗ್ಗೆ ನನಗೆ ಗೌರವವಿದೆ, ಅವರ ಬಗ್ಗೆ ತನಿಖೆ ನಡೆದು ಸತ್ಯವೇ, ಸುಳ್ಳೇ ಎಂದು ಹೊರಗೆ ಬರಲಿ, ಒಂದೇ ಸಲಕ್ಕೆ ತೀರ್ಮಾನಕ್ಕೆ ಬರುವುದು ಬೇಡ, ಇಡೀ ದೇಶದಲ್ಲಿ ಮಠಮಂದಿರಗಳು ಜನರಲ್ಲಿ ಭಕ್ತಿಯನ್ನು ಹೆಚ್ಚಿಸುವ ಧಾರ್ಮಿಕ ಕೇಂದ್ರಗಳು, ಮುರುಘಾ ಮಠಾಧೀಶರ ಬಗ್ಗೆ ಕೇಳಿಬಂದಿರುವ ಆರೋಪ ಸುಳ್ಳಾಗಲಿ ಎಂದು ಆಶಿಸುತ್ತೇನೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT