ರಾಜ್ಯ

ಬೆಂಗಳೂರು: ಪ್ರವಾಹದ ನಂತರ 696 ಒತ್ತುವರಿಗಳನ್ನು ಗುರುತಿಸಿ ನೋಟಿಸ್ ಜಾರಿದ ಬಿಬಿಎಂಪಿ

Ramyashree GN

ಬೆಂಗಳೂರು: ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ತೀವ್ರ ಪ್ರವಾಹದ ನಂತರ, ಮಳೆನೀರು ಹೋಗುವ ಚರಂಡಿಗಳನ್ನು ಅತಿಕ್ರಮಿಸಿಕೊಂಡಿರುವ ಪ್ರಮುಖ ಅಡಚಣೆಗಳನ್ನು ಗುರುತಿಸಿ ನೋಟಿಸ್ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಅವರು ನೀಡಿರುವ ಮಾಹಿತಿಯಂತೆ ಬಿಬಿಎಂಪಿ 696 ಅತಿಕ್ರಮಣಗಳನ್ನು ಗುರುತಿಸಿದೆ. ಈ ಪೈಕಿ ಮಹದೇವಪುರದಲ್ಲಿ ಅತಿ ಹೆಚ್ಚು ಅಂದರೆ 175 ಒತ್ತುವರಿಯಾಗಿದ್ದು, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ದಾಸರಹಳ್ಳಿ ವಲಯದಲ್ಲಿ ಕ್ರಮವಾಗಿ 110, 59, 20 ಮತ್ತು 126 ಒತ್ತುವರಿಗಳು ನಡೆದಿವೆ.

ಆಯುಕ್ತರ ಪ್ರಕಾರ, ಜಲಾವೃತ ಪ್ರದೇಶಗಳಲ್ಲಿ ಚರಂಡಿಗಳನ್ನು ಅತಿಕ್ರಮಿಸಿದ 32 ಜನರಿಗೆ ನೋಟಿಸ್ ನೀಡಲಾಗಿದೆ.

'ಸುಮಾರು 500 ಒತ್ತುವರಿಗಳು ಹಾಗೆಯೇ ಉಳಿದಿದ್ದು, ನಮ್ಮ ಅಧಿಕಾರಿಗಳು ಅತಿಕ್ರಮಣ ತೆರವು ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಾರೆ. ಎಲ್ಲ ರೀತಿಯ ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ದೊಡ್ಡ ಬೊಮ್ಮಸಂದ್ರದಲ್ಲಿ ಒತ್ತುವರಿ ತೆರವಿಗೆ ಕಾರ್ಯಾಚರಣೆ ನಡೆದಿದೆ. ಜಿಡಿ ಲೇಔಟ್ ಬಳಿ ಒತ್ತುವರಿ ತೆರವು ಮಾಡಲಾಗುತ್ತಿದೆ' ಎಂದು ತಿಳಿಸಿದರು.

SCROLL FOR NEXT