ಬಿಡಿಎ 
ರಾಜ್ಯ

ಅರ್ಕಾವತಿ ಲೇಔಟ್ ಸಂಪೂರ್ಣ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿ: ಬಿಡಿಎ ಗೆ ಹೈಕೋರ್ಟ್ ಸೂಚನೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು  ಎಂದು ಸೂಚಿಸಿರುವ  ಹೈಕೋರ್ಟ್, ಅರ್ಕಾವತಿ ಲೇಔಟ್‌ನ ಎಲ್ಲಾ ವಿವರಗಳನ್ನು ಸ್ಯಾಟ್ ಲೈಟ್ ಚಿತ್ರಣದೊಂದಿಗೆ ವೆಬ್ ಸೈಟ್ ನಲ್ಲಿ ಸಂಪೂರ್ಣ ವಿವರದೊಂದಿಗೆ ಪ್ರಕಟಿಸಬೇಕೆಂದು ನಿರ್ದೇಶನ ನೀಡಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಸೂಚಿಸಿರುವ  ಹೈಕೋರ್ಟ್, ಅರ್ಕಾವತಿ ಲೇಔಟ್‌ನ ಎಲ್ಲಾ ವಿವರಗಳನ್ನು ಸ್ಯಾಟ್ ಲೈಟ್ ಚಿತ್ರಣದೊಂದಿಗೆ ವೆಬ್ ಸೈಟ್ ನಲ್ಲಿ ಸಂಪೂರ್ಣ ವಿವರದೊಂದಿಗೆ ಪ್ರಕಟಿಸಬೇಕೆಂದು ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಅರ್ಕಾವತಿ ಲೇಔಟ್ ವಿವರಗಳನ್ನು ವೆಬ್ ಸೇಟ್ ನಲ್ಲಿ ಪ್ರಕಟಿಸಲು ಬಿಡಿಎಗೆ ನಿರ್ದೇಶನ ನೀಡಿತು, ಬಿಡಿಎ  ಪಾರದರ್ಶಕತೆಗೆ ಸಂಬಂಧಿಸಿದಂತೆ, ಆಗಸ್ಟ್ 2, 2022 ರ ಏಕ ನ್ಯಾಯಾಧೀಶರು ನೀಡಿದ ಆದೇಶದ ವಿರುದ್ಧ ಬಿಡಿಎ ಸಲ್ಲಿಸಿದ ಎರಡು ಮೇಲ್ಮನವಿಗಳನ್ನು ವಿಲೇವಾರಿ ಮಾಡಿತು.

ಬಿಡಿಎ ಸಾರ್ವಜನಿಕರೊಂದಿಗೆ ವ್ಯವಹರಿಸುವ ಶಾಸನಬದ್ಧ ಸಂಸ್ಥೆಯಾಗಿದೆ, ಏಕ ನ್ಯಾಯಾಧೀಶರು ಹೊರಡಿಸಿದ ನಿರ್ದೇಶನಗಳು ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಗೆ ಸಂಬಂಧಿಸಿದಂತೆ ಮೂಲಭೂತ ಪ್ರಾಮುಖ್ಯತೆಯ ಸಮಸ್ಯೆಯನ್ನು ತೋರಿಸಿವೆ.

ಬಿಡಿಎ ತನ್ನ ಕಾರ್ಯಚಟುವಟಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಹೀಗಾಗಿ ರೂಪುಗೊಂಡ ಲೇಔಟ್‌ಗಳ ಎಲ್ಲಾ ವಿವರಗಳನ್ನು ವೆಬ್-ಹೋಸ್ಟ್ ಮಾಡುವುದು ಅಗತ್ಯವಿದೆ. ಬಿಡಿಎ ರಚಿಸಿರುವ ವಿವಿಧ ಬಡಾವಣೆಗಳಿಗೆ ಸಂಬಂಧಿಸಿದಂತೆ ಆದೇಶದಲ್ಲಿರುವ ವಿವರಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

ಸಾರ್ವಜನಿಕ ಪ್ರಮುಖ ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ, "ಈ ವಿಷಯವನ್ನು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ ನೋಂದಾಯಿಸಿಕೊಳ್ಳುವುದಾಗಿ ತಿಳಿಸಿತು.

* ಅರ್ಕಾವತಿ ಲೇಔಟ್ ಗಾಗಿ ಹೊರಟಿಸಿರುವ ನೊಟೀಸ್ ಗಳು, ಯಾವ್ಯಾವ ಗ್ರಾಮಗಳಿಗೆ ನೊಟೀಸ್ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿ

* ಡಿನೊಟಿಫೈ ಮಾಡಿರುವ ಒಟ್ಟು ಭೂಮಿ, ಮಾಡಲು ಕಾರಣವನ್ನು ಗೂಗಲ್ ಮ್ಯಾ ಪ್ ನೊಂದಿಗೆ ಪ್ರಕಟಿಸಬೇಕು.

* ಸ್ವಾಧೀನಕ್ಕೆ ತೆಗೆದುಕೊಂಡಿರುವ ಭೂಮಿ ಹಾಗೂ ಎಂಜಿನೀಯರಿಂಗ್ ಇಲಾಖೆಗೆ ನೀಡಿರುವ ಭೂಮಿಯ ಬಗ್ಗೆ ಮಾಹಿತಿ

* ಲೇಔಟ್ ನಲ್ಲಿ ನಿರ್ಮಿಸಿರುವ ನಿವೇಶನಗಳ ಒಟ್ಟು ಸಂಖ್ಯೆ ಅಳತೆಯಲ್ಲಿ ಪ್ರಕಟಿಸಬೇಕು.

* ಮೂಲೆ ನಿವೇಶನಗಳ ಸಂಖ್ಯೆ ಅದರಲ್ಲಿ ಅಲಾಟ್ ಆಗಿರುವ ನಿವೇಶನಗಳ ಸಂಖ್ಯೆ

* ಹರಾಜಾಗಿರುವ ನಿವೇಶನಗಳ ಸಂಖ್ಯೆ ಜೊತೆಗೆ ಅದರ ಬೆಲೆ ಕೂಡ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್-ಅಮೆರಿಕವನ್ನ ಕ್ಷಮಿಸೋ ಮಾತೇ ಇಲ್ಲ.. ಆದರೆ...': ನೆರೆಹೊರೆ ರಾಷ್ಟ್ರಗಳ ಕ್ಷಮೆ ಕೋರಿದ Iran

ಒಮ್ಮೆ ಆದ್ರೂ ಭಾರತೀಯ ಅಭಿಮಾನಿಗಳ ಹೃದಯ ಹೊಡೆಯಬೇಕು ಅನಿಸುತ್ತಿದೆ: ಫೈನಲ್ ಪಂದ್ಯಕ್ಕೂ ಮುನ್ನ ಪ್ಯಾಟ್ ಕಮ್ಮಿನ್ಸ್!

10ನೇ ತರಗತಿ ಪಾಸಾದ ನಿರುದ್ಯೋಗಿಗಳಿಗೆ ಇಂದಿನಿಂದಲೇ 1,500 ರೂ. ಭತ್ಯೆ: ದೀದಿ ಭರ್ಜರಿ ಗಿಫ್ಟ್

ನೇಪಾಳ ಚುನಾವಣೆ: ಪ್ರಚಂಡ ಗೆಲುವಿನತ್ತ RSP; ಬೆಂಗಳೂರಿನಲ್ಲಿ ಪದವಿ ಪಡೆದಿದ್ದ ಬಲೇನ್ ಶಾ, 35 ವರ್ಷಕ್ಕೆ ಪ್ರಧಾನಿ ಪಟ್ಟ!

'ಅದು ಮಾನವೀಯ ಕೆಲಸ.. ನಾವು ಸರಿಯಾದ್ದನ್ನೇ ಮಾಡಿದ್ದೆವು': Iran ನೌಕೆಗೆ ಪ್ರವೇಶ ನೀಡಿದ ಕುರಿತು EAM Jaishankar ಹೇಳಿಕೆ! Video

SCROLL FOR NEXT