ರಾಜ್ಯ

ಪೊಲೀಸ್ ಸಿಬ್ಬಂದಿ ಬೌದ್ಧಿಕ, ದೈಹಿಕ ಕ್ಷಮತೆ ಹೆಚ್ಚಿಸಲು ಅಗತ್ಯ ಕ್ರಮ: ಸಚಿವ ಆರಗ ಜ್ಞಾನೇಂದ್ರ

Nagaraja AB

ಬೆಂಗಳೂರು: ಅಪರಾಧಿ ಗಳಿಗೆ ಶಿಕ್ಷೆ ವಿಧಿಸುವ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ವಿಶೇಷ ಪ್ರಯತ್ನ ಮಾಡಬೇಕು ಹಾಗೂ ಇದಕ್ಕಾಗಿ ಕೌಶಲ್ಯ  ಹೆಚ್ಚಿಸಿಕೊಳ್ಳಲು ಇಲಾಖೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ. 

ಬೆಂಗಳೂರಿನ ಥನಿಸಂದ್ರ ಪೊಲೀಸ್ ತರಬೇತಿ ಶಾಲಾ ಆವರಣದಲ್ಲಿ ನಿರ್ಮಿಸಲಾದ ವಿವಿದ್ದೋದ್ದೇಶ ಉಪಯುಕ್ತತಾ ಸಂಕೀರ್ಣ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದ ಅವರು,  ಆಧುನಿಕ ಪ್ರಪಂಚ ದಲ್ಲಿ ಮನುಷ್ಯ ಎಷ್ಟೇ ಎತ್ತರಕ್ಕೆ ಏರಿದರೂ, ಮೃಗೀಯ ಸ್ವಭಾವಗಳೂ  ಹೆಚ್ಚಾಗಿವೆ. ದೈಹಿಕ ಕ್ಷಮತೆ ಗಳಿಸಿಕೊಳ್ಳುವುದರ, ಜತೆಗೆ ಸಾಕ್ಷ್ಯ ಸಂಗ್ರಹ, ಆಗೂ ನ್ಯಾಯಾಲಯದ ಮುಂದೆ, ಪ್ರತಿಪಾದನೆ ಮಾಡಲೂ ಕೌಶಲ್ಯ ಹೆಚ್ಚಿಸಿಕೊಳ್ಳಲು ಶ್ರದ್ಧೆ ವಹಿಸಬೇಕೆಂದು ಕಿವಿಮಾತು ಹೇಳಿದರು.

ಜನರ ಅಮೂಲ್ಯವಾದ ಪ್ರಾಣ, ಆಸ್ತಿ ಪಾಸ್ತಿಗಳನ್ನು ಸಂರಕ್ಷಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ, ಪೊಲೀಸ್ ಸಿಬ್ಬಂದಿಗಳು, ಹೊಸ ಹೊಸ ಸವಾಲುಗಳನ್ನು ಎದುರಿಸಲು, ಸರಕಾರ ಎಲ್ಲಾ ನೆರವು ನೀಡುತ್ತಿದೆ ಎಂದು ಅವರು ತಿಳಿಸಿದರು."ಒಬ್ಬ ಯಶಸ್ವಿ ಸಿಬ್ಬಂದಿಯನ್ನು ತಯಾರು ಮಾಡಲು ಹಾಗೂ ಯಾವುದೇ ಸವಾಲುಗಳನ್ನು ಎದುರಿಸಲು ಸಜ್ಜ್ಜಾಗುವಂತೆ,  ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಚಿವರು ಹೇಳಿದರು.

ರಾಜ್ಯಕ್ಕೆ, ಕೇಂದ್ರ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಸ್ಥಾಪಿಸಲು ರಾಜ್ಯ ಮಾಡಿದ ಮನವಿಗೆ ಕೇಂದ್ರಸರ್ಕಾರ ಅನುಮೋದನೆ ನೀಡಿದ್ದು, ವಿಶ್ವ ವಿದ್ಯಾಲಯದ ಕೇಂದ್ರ ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ ಎಂದು ಸಚಿವರು ಪ್ರಕಟಿಸಿದರು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಶಾಸಕ ಶ್ರೀ ಕೃಷ್ಣ ಬೈರೇಗೌಡ,  ಪೊಲೀಸ್ ಮಹಾನಿರ್ದೇಶಕ Dr ರವೀಂದ್ರನಾಥ್,  ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರಿ ಅರುಣ್ ಚಕ್ರವರ್ತಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

SCROLL FOR NEXT