ರಾಜ್ಯ

ಸೆಂಟ್ರಲ್ ಅನಿಮಲ್ ಫೆಸಿಲಿಟಿಯಲ್ಲಿ ಪ್ರಾಣಿ ಹಿಂಸೆ: ಐಐಎಸ್ ಸಿ ಮುಖ್ಯಸ್ಥರಿಗೆ ಮನೇಕಾ ಗಾಂಧಿ ಪತ್ರ

Lingaraj Badiger

ಬೆಂಗಳೂರು: ಸೆಂಟ್ರಲ್ ಅನಿಮಲ್ ಫೆಸಿಲಿಟಿ(ಸಿಎಎಫ್) ನಲ್ಲಿ ನಡೆಯುತ್ತಿರುವ ಪ್ರಾಣಿ ಹಿಂಸೆಗೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯೆ ಮನೇಕಾ ಗಾಂಧಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಗೆ ಪತ್ರ ಬರೆದಿದ್ದಾರೆ.

ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್‌ ಅವರಿಗೆ ಮನೇಕಾ ಗಾಂಧಿ ಗುರುವಾರ ಪತ್ರ ಬರೆದಿದ್ದು, ಅದರ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ. ಸಿಎಎಫ್ ನಲ್ಲಿ ಪ್ರತಿದಿನ 300 ಪ್ರಯೋಗಾಲಯ ಪ್ರಾಣಿಗಳನ್ನು ಸಾಮೂಹಿಕವಾಗಿ ಕೊಲ್ಲುತ್ತಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ 18 ತಿಂಗಳಿಂದ ಸಿಎಎಫ್‌ನಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಮನೇಕಾ ಅವರು ಆರೋಪಿಸಿದ್ದಾರೆ ಮತ್ತು ಅಕ್ರಮಗಳು ಹಾಗೂ ಲೈಂಗಿಕ ಕಿರುಕುಳದ ಆರೋಪಕ್ಕೆ ಡಾ ಸತೀಸ್ ಸಿ ರಾಘವನ್ ಅವರನ್ನು ದೂರಿದ್ದಾರೆ.

ಪ್ರಾಣಿಗಳನ್ನು ಕಳಪೆ ಸ್ಥಿತಿಯಲ್ಲಿ ಇರಿಸಲಾಗುತ್ತದೆ, ನಿಯಮಿತವಾಗಿ ಆಹಾರವನ್ನು ನೀಡಲಾಗುವುದಿಲ್ಲ ಮತ್ತು ವಿರಳವಾಗಿ ತೊಳೆಯಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಪ್ರಾಣಿಗಳು ಅಪೌಷ್ಟಿಕತೆಯಿಂದ ಮತ್ತು ಚರ್ಮದ ಕಾಯಿಲೆಗಳಿಂದ ಬಳಲುತ್ತಿವೆ. ಈ ಕಾರಣದಿಂದಾಗಿ ಐಐಎಸ್ ಸಿಯ ಸೆಂಟರ್ ಫಾರ್ ನ್ಯೂರೋ ಸೈನ್ಸ್‌  ವಿಭಾಗ ಸಿಎಎಫ್ ನಿಂದ ಸಂಶೋಧನೆಗಾಗಿ ಪ್ರಾಣಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ ಎಂದಿದ್ದಾರೆ.

SCROLL FOR NEXT