ರಾಜ್ಯ

ಮಲ್ಪೆ: ಹೂಡೆ ಬೀಚ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

Srinivas Rao BV

ಮಲ್ಪೆ: ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೂಡೆ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. 

ಸಂಜೆ 5:30 ರಿಂದ 6 ಗಂಟೆ ನಡುವೆ ಬೀಚ್ ನಲ್ಲಿ ಈ ಘಟನೆ ನಡೆದ್ದು, ಈ ಬೀಚ್ ಮಲ್ಪೆ, ಕಾಪು ಬೀಚ್ ನಂತೆ ಹೆಚ್ಚು ಜನರನ್ನು ಆಕರ್ಷಿಸುವುದಿಲ್ಲ. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದಾಗಿ ಬೀಚ್ ಗೆ ಇಳಿದಿದ್ದು, ಯಾವುದೇ ರೀತಿಯ ಸುರಕ್ಷತಾ ಸಾಧನಗಳನ್ನು ಹೊಂದಿರಲಿಲ್ಲ. ಇಬ್ಬರು ವಿದ್ಯಾರ್ಥಿಗಳ ಶವಗಳನ್ನು ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ ಮತ್ತೋರ್ವ ವಿದ್ಯಾರ್ಥಿಗಾಗಿ ಪೊಲೀಸರು ನುರಿತ ಈಜುಗಾರರ ಸಹಾಯವನ್ನು ಪಡೆದಿದ್ದಾರೆ. 

15 ವಿದ್ಯಾರ್ಥಿಗಳ ತಂಡ ಬೀಚ್ ಗೆ ತೆರಳಿತ್ತು. ವಿದ್ಯಾರ್ಥಿಗಳು  ಬಲವಾದ ಅಲೆಗಳಿಗೆ ಸಿಲುಕಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ. 
ಬೆಂಗಳೂರಿನ ಮೂಲದ ಇಬ್ಬರು ಯುವಕರಾದ 19 ವರ್ಷದ ನಿಶಾಂತ್ ಹಾಗೂ ಷಣ್ಮುಗ ಅವರ ಮೃತದೇಹ ಪತ್ತೆಯಾಗಿದ್ದು, ಹೈದರಾಬಾದ್ ನ ಶ್ರೀಕರ ಅವರ ಮೃತದೇಹ ಇನ್ನಷ್ಟೇ ಪತ್ತೆಯಾಗಿದೆ. ವಿದ್ಯಾರ್ಥಿಗಳ ಪೋಷಕರಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ.

SCROLL FOR NEXT