ರಾಜ್ಯ

ಗೋವಾ, ಕೇರಳ ಕಡಲ ಪ್ರವಾಸೋದ್ಯಮಕ್ಕೆ ಪೈಪೋಟಿ ನೀಡಲು ಹಲವು ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದು: ವಿವರ ಹೀಗಿದೆ...

Srinivas Rao BV

ಬೆಂಗಳೂರು: ಬೀಚ್ ಟೂರಿಸಂ ಅಥವಾ ಕಡಲ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಹಲವು ಬದಲಾವಣೆಗಳಿಗೆ ಮುಂದಾಗಿದೆ. 
    
ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) ಹಾಗೂ ಮಾರ್ಪಡಿಸಿದ ಕರಾವಳಿ ನಿಯಂತ್ರಣ ವಲಯ (ಸಿಆರ್ ಝೆಡ್) ನಿಯಮಗಳಿಗೆ ಪ್ರವಾಸೋದ್ಯಮ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯ ಅನುಮೋದನೆ ನೀಡಿದೆ. 

ಕರಾವಳಿ ವಲಯ ಮಾರ್ಗಸೂಚಿಗಳಲ್ಲಿ ಮಹತ್ತರ ಬದಲಾವಣೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಕೆಲಸ ಮಾಡುತ್ತಿದ್ದು, ಜಾರಿಯಾದಲ್ಲಿ ತಾತ್ಕಾಲಿಕ ರಚನೆಗಳಲ್ಲಿ ಕಡಲತೀರದ ಉದ್ದಕ್ಕೂ ಪ್ರವಾಸಿಗರಿಗೆ ಆಕರ್ಷಣೆಯಾಗಿರಲಿರುವ ಗುಡಿಸಲುಗಳು ತೆಲೆ ಎತ್ತಲಿವೆ. ಈ ಹಿಂದೆ ಈ ರೀತಿಯ ನಿರ್ಮಾಣಗಳಿಗೆ ಅವಕಾಶವಿರಲಿಲ್ಲ. ಆದರೆ ಈಗ ಇದಕ್ಕೆ ಅವಕಾಶ ನೀಡಲಾಗಿದ್ದು, ಕೇರಳ, ಗೋವಾ ಗೆ ಪೈಪೋಟಿ ನೀಡುವುದಕ್ಕೆ ಸಾಧ್ಯವಾಗಲಿದೆ.

ನಿಯಮಗಳು ಸಂರಕ್ಷಣಾ ಪ್ರದೇಶಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದ್ದು, ವಿಶೇಷ ವರ್ಗಗಳಲ್ಲಿ ದುರ್ಬಲ ವಿಭಾಗಗಳ ಪಟ್ಟಿಯನ್ನು ನೀಡಲಾಗಿದೆ. ನಾವು ಈ ಹಿಂದೆ ಗೋವಾ, ಕೇರಳದ ಮಾದರಿಯಲ್ಲೇ ಪ್ರವಾಸೋದ್ಯಮ ಯೋಜನೆ ರೂಪಿಸಿದ್ದೆವು. ಆದರೆ ಈಗ ನಾವು ಅವರಿಗಿಂತಲೂ ಬಹಳ ಮುಂದಿರಲಿದ್ದೇವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರವಾಸೋದ್ಯಮ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

SCROLL FOR NEXT