ರಾಜ್ಯ

ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಎಸ್‌ಸಿ-ಎಸ್‌ಟಿ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶೇ.41ರಷ್ಟು ಏರಿಕೆ!

Manjula VN

ಮೈಸೂರು: ಕರ್ನಾಟಕದಲ್ಲಿ ಎಸ್‌ಟಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಇತರ ಉಪಕ್ರಮಗಳ ಹೊರತಾಗಿಯೂ ಕಳೆದ ಐದು ವರ್ಷಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ.

ಕರ್ನಾಟಕ ರಾಜ್ಯ ಪೊಲೀಸರ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿಗೆ ಸೇರಿದ ಜನರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಶೇ.41ರಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

2018 ರಲ್ಲಿ ರಾಜ್ಯದಲ್ಲಿ 1,536 ಪ್ರಕರಣಗಳು ದಾಖಲಾಗಿದ್ದು, 2019 ರಲ್ಲಿ 1,585ರಷ್ಟು ಪ್ರಕರಣಗಳು ಕಂಡು ಬಂದಿದ್ದವು. ಇದೇ ಪ್ರವೃತ್ತಿಯು ಮುಂದಿನ ಮೂರು ವರ್ಷಗಳಲ್ಲಿಯೂ ಮುಂದುವರೆದಿದೆ.

ರಾಜ್ಯದಲ್ಲಿ 2020 ರಲ್ಲಿ 1,691 ಪ್ರಕರಣಗಳು (ಕೋವಿಡ್ 19 ರ ಹೊರತಾಗಿಯೂ) ದಾಖಲಾಗಿದ್ದರೆ, 2021 ರಲ್ಲಿ 1,744 ಮತ್ತು 2022 ರಲ್ಲಿ 2167 ಪ್ರಕರಣಗಳು ವರದಿಯಾಗಿವೆ.

2018 ರಲ್ಲಿ 1,536ಗಳಷ್ಟಿದ್ದ ಪ್ರಕರಣಗಳ ಸಂಖ್ಯೆಯು 2022 ರಲ್ಲಿ 2,167 ಕ್ಕೆ ಏರಿಕೆಯಾಗಿದೆ, ಇದರೊಂದಿಗೆ ಎಸ್‌ಸಿ-ಎಸ್‌ಟಿ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶೇ.41 ರಷ್ಟು ಏರಿಕೆಯಾಗಿರುವುದು ಕಂಡು ಬಂದಿದೆ. ಪ್ರಕರಣಗಳ ಏರಿಕೆಗೆ ವಿವಿಧ ಅಂಶಗಳಿಗೆ ಕಾರಣವಾಗಿದೆ. ಅಂತಹ ಅಂಶಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರುವುದೂ ಕೂಡ ಒಂದು ಎಂದು ಹೇಳಲಾಗುತ್ತಿದೆ.

ಶಿಕ್ಷ ಪ್ರಮಾಣ ಕಡಿಮೆ ಇರುವುದರಿಂದ ಅಪರಾಧಿಗಳು ಪದೇ ಪದೇ ಅಪರಾಧಗಳನ್ನು ಎಸಗುತ್ತಿದ್ದಾರೆ ಎಂದು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಾಜ್ಯ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿಯ ಮಾಜಿ ಸದಸ್ಯರೊಬ್ಬರು ತಿಳಿಸಿದ್ದಾರೆ.

2022 ರಲ್ಲಿ ದಾಖಲಾಗಿರುವ 2167 ಪ್ರಕರಣಗಳು ದಾಳಿ, ಕೊಲೆ ಯತ್ನ ಮತ್ತು ಗಲಭೆಗಳಿಗೆ ಸಂಬಂಧಿಸಿವೆ, ಆದರೆ ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲೆ ಕೊಲೆ, ಅತ್ಯಾಚಾರ ಮತ್ತು ಕಿರುಕುಳ ನೀಡಿದ ಪ್ರಕರಣಗಳಿವೆ ಎಂದು ಹೇಳಿದ್ದಾರೆ.

ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದರೆ, 2018 ರಲ್ಲಿ 130 ಪ್ರಕರಣಗಳು ವರದಿಯಾಗಿದ್ದರೆ, ಈ ಸಂಖ್ಯೆ 2019ರ ವೇಳೆಗೆ 210ಕ್ಕೆ ಏರಿಕೆಯಾಗಿರುವುದು ಕಂಡು ಬಂದಿತ್ತು. 2020 ರಲ್ಲಿ ಈ ಸಂಖ್ಯೆ 153ಕ್ಕೆ ಇಳಿದಿತ್ತು. 2021 ರಲ್ಲಿ 188 ಮತ್ತು 2022 ರಲ್ಲಿ 222 ಪ್ರಕರಣಗಳು ದಾಖಲಾಗಿದ್ದವು.

ಈ ವರ್ಷದ ಫೆಬ್ರವರಿ ತಿಂಗಳವರೆಗೆ 28 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಈ ಸಮುದಾಯಗಳನ್ನು ಹೊರತುಪಡಿಸಿ ಇತರೆ ಪ್ರಕರಣಗಳನ್ನು ಗಮನಿಸಿದರೆ ಫೆಬ್ರವರಿ ಅಂತ್ಯವರೆಗೆ 299 ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

SCROLL FOR NEXT