ರಾಜ್ಯ

ಹುಲಿ ಗಣತಿ ವರದಿ: ದೇಶದ ಅಗ್ರ 12ರಲ್ಲಿ ಕರ್ನಾಟಕದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಸ್ಥಾನ

Nagaraja AB

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿರುವ ಭಾರತದ ಹುಲಿ ಸಂರಕ್ಷಿತ ವರದಿಯ ಐದನೇ ನಿರ್ವಹಣೆ ಪರಿಣಾಮಕಾರಿತ್ವ ಮೌಲ್ಯಮಾಪನದಲ್ಲಿ ಕರ್ನಾಟಕದ ಎಲ್ಲಾ ಐದು ಹುಲಿ ಸಂರಕ್ಷಿತ ಪ್ರದೇಶಗಳು ಅಗ್ರ 12ರಲ್ಲಿ ಸ್ಥಾನಪಡೆದಿವೆ. ಬಂಡೀಪುರ ಶೇ. 93.18  ಅಂಕಗಳೊಂದಿಗೆ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದೊಂದಿಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿದೆ.

ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶ ಶೇ. 94.38 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಶೇ. 92.42 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಕನ್ಹಾ ಶೇ. 91.67 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದೆ. ಹುಲಿ ಸಂರಕ್ಷಿತ ಪ್ರದೇಶಗಳನ್ನು ಅಂಶವಾರು ವಿಶ್ಲೇಷಿಸಲಾಗಿದೆ ಎಂದು ವರದಿ ತೋರಿಸಿದೆ.

ಬಂಡೀಪುರದಲ್ಲಿ ಸಫಾರಿಯಲ್ಲಿ ತೆರಳಿದ ಪ್ರಧಾನಿ

ಮಧ್ಯಪ್ರದೇಶದ ಸತ್ಪುರಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಒಡಿಶಾದ ಸಿಮಿಲಿಪಾಲ್ ಹುಲಿ ಸಂರಕ್ಷಿತ ಪ್ರದೇಶಗಳು  ಅತ್ಯುತ್ತಮ ಪ್ರದರ್ಶನದೊಂದಿಗೆ ರಿಪೂರ್ಣ ಅಂಕಗಳನ್ನು ಪಡೆದಿವೆ, ಆದರೆ ಮಹಾರಾಷ್ಟ್ರದ ಪೆಂಚ್ ಟೈಗರ್ ಹುಲಿ ಸಂರಕ್ಷಿತ ಪ್ರದೇಶ, ಕರ್ನಾಟಕದ ಬಿಆರ್ ಟಿ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ ಮತ್ತು ಅಸ್ಸಾಂನ ಮಾನಸ್ ಹುಲಿ ಸಂರಕ್ಷಿತ ಪ್ರದೇಶ ಯೋಜನೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದಿವೆ.

ಕರ್ನಾಟಕದ ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಇನ್ ಪುಟ್ ಅಡಿಯಲ್ಲಿ  ಅತಿ ಹೆಚ್ಚು ಅಂಕಗಳನ್ನು ಪಡೆದರೆ, ಪ್ರಕ್ರಿಯೆಯಲ್ಲಿ ಮಧ್ಯಪ್ರದೇಶದ ಸಾತ್ಪುರ ಮತ್ತು ಕನ್ಹಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕರ್ನಾಟಕದ ಬಂಡೀಪುರ ಗರಿಷ್ಠ ಸ್ಕೋರ್ ಗಳಿಸಿವೆ. ಕರ್ನಾಟಕದ ಕನ್ಹಾ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶವು ಉತ್ಪಾದನೆಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿವೆ. ಫಲಿತಾಂಶದಲ್ಲಿ ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ ನೂರು ಗಳಿಸಿದೆ.

ಮೌಲ್ಯಮಾಪನವನ್ನು 33 ಮಾನದಂಡಗಳ ಮೇಲೆ ಮಾಡಲಾಗಿದ್ದು, ಪ್ರತಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ವತಃ ಮೌಲ್ಯಮಾಪನ ಮಾಡಲು ಕೇಳಲಾಗಿತ್ತು. ನಂತರ ಮೀಸಲು ಮೌಲ್ಯಮಾಪನ ಮಾಡಲು ಮೂರು ಸದಸ್ಯರ ತಂಡವನ್ನು ಕಳುಹಿಸಲಾಗಿದೆ ಮತ್ತು ಕ್ಷೇತ್ರ ನಿರ್ದೇಶಕರು ಸಲ್ಲಿಸಿದ ವರದಿಯನ್ನು ಸಹ ಮೌಲ್ಯಮಾಪನ ಮಾಡಲಾಗಿದೆ.

ಹುಲಿ ಸಂರಕ್ಷಣಾ ಯೋಜನೆಯ ಸ್ಥಿತಿ, ಕೋರ್ ಪ್ರದೇಶವು ಮಾನವ ಮತ್ತು ಜೈವಿಕ ಹಸ್ತಕ್ಷೇಪದಿಂದ ಮುಕ್ತವಾಗಿದೆಯೇ, ಏಕೀಕೃತ ನಿಯಂತ್ರಣದಲ್ಲಿರುವ ಬಫರ್ ವಲಯಗಳು, ಆವಾಸಸ್ಥಾನ ನಿರ್ವಹಣಾ ಯೋಜನೆಯ ಸ್ಥಿತಿ, ಸಂಘರ್ಷ ತಗ್ಗಿಸುವ ಯೋಜನೆ ಇತ್ಯಾದಿಗಳನ್ನು ಈ ಮಾನದಂಡ ಒಳಗೊಂಡಿದೆ.

SCROLL FOR NEXT