ಎಚ್.ಡಿ ಕುಮಾರಸ್ವಾಮಿ 
ರಾಜ್ಯ

ದಾರಿ ತಪ್ಪಿದ ಎಚ್.ಡಿ.ಕೆ ಹೆಲಿಕಾಪ್ಟರ್: 30 ನಿಮಿಷ ಆಗಸದಲ್ಲೇ ಹಾರಾಟದ ನಂತರ ಜೋಯಿಡಾದಲ್ಲಿ ಲ್ಯಾಂಡಿಂಗ್!

ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿಗೆ ಕಾರಣಾಂತರಗಳಿಂದ ಕಾರ್ಯಕ್ರಮಗಳಿಗೆ ತಡವಾಗಿ ಬರುವುದು ಹೊಸದೇನಲ್ಲ. ಮಂಗಳವಾರ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಾರಿ ತಪ್ಪಿದ ಕಾರಣ ಕಾರ್ಯಕ್ರಮಕ್ಕೆ ತಡವಾಗಿ ಬಂದರು.

ಉತ್ತರ ಕನ್ನಡ: ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿಗೆ ಕಾರಣಾಂತರಗಳಿಂದ ಕಾರ್ಯಕ್ರಮಗಳಿಗೆ ತಡವಾಗಿ ಬರುವುದು ಹೊಸದೇನಲ್ಲ. ಮಂಗಳವಾರ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಾರಿ ತಪ್ಪಿದ ಕಾರಣ ಕಾರ್ಯಕ್ರಮಕ್ಕೆ ತಡವಾಗಿ ಬಂದರು.

ಹೆಲಿಕಾಪ್ಟರ್ ಲ್ಯಾಂಡಿಂಗ್ ನೋಡಲು ಜೋಯಿಡಾ ಕಾಲೇಜು ಮೈದಾನದಲ್ಲಿ ನೂರಾರು ಜನರು ಕಾದು ನಿಂತಿದ್ದರು.  ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸವದತ್ತಿಯಿಂದ ಜೋಯಿಡಾದ ದುರ್ಗಾದೇವಿ ಮೈದಾನದಲ್ಲಿ  ಲ್ಯಾಂಡಿಂಗ್ ಆಗಬೇಕಿತ್ತು. ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್‌ನಲ್ಲಿ ಗಂಧಕದ ಹೊಗೆ ಹಾಕಿ ಸಿಗ್ನಲ್ ನೀಡಬೇಕಿತ್ತು.

ಆದರೆ ಇದು ತಡವಾಗಿದ್ದರಿಂದ ಹೆಲಿಕಾಪ್ಟರ್ ಆಕಾಶದಲ್ಲೇ ಹಾರಾಡಿದೆ. ನಂತರ ಲ್ಯಾಂಡಿಗ್ ಮಾಡಲು ಸ್ಥಳ ಸಿಗದೆ ಬೆಳಗಾವಿಯತ್ತ ಹೋಗಿದೆ. ಈ ವಿಷಯ ಗಮನಕ್ಕೆ ಬಂದ ನಂತರ ವೈರ್‌ಲೆಸ್ ಸಿಗ್ನಲ್ ಕಳುಹಿಸಿ ಹೆಲಿಕಾಪ್ಟರನ್ನು ಮರಳಿ ಕರೆಸಿ ಲ್ಯಾಂಡಿಂಗ್ ಮಾಡಲಾಯಿತು.

ಈ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಸ್ಯೆಯಿಂದ ಜೋಯಿಡಾಗೆ ಬರಲು 30 ನಿಮಿಷ ತಡವಾಯಿತು. ಇದರಿಂದಾಗಿ ಏನೂ ಸಮಸ್ಯೆಯಾಗಿಲ್ಲ ಎಂದರು.

ಜೋಯಿಡಾದಲ್ಲಿ ಸ್ಥಳವನ್ನು ಕಂಡುಹಿಡಿಯುವ ಮೊದಲು ಹೆಲಿಕಾಪ್ಟರ್ ರಾಮನಗರವನ್ನು ಏಳು ಬಾರಿ ಸುತ್ತು ಹಾಕಿತು ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು. ಇದು ಅರಣ್ಯ ಪ್ರದೇಶವಾದ್ದರಿಂದ ಸ್ವಲ್ಪ ಗೊಂದಲ ಉಂಟಾಗಿ, ನಿಮ್ಮ ಊರನ್ನು ಪತ್ತೆ ಹಚ್ಚುವುದು ಕಷ್ಟವಾಯಿತು  ಎಂದು ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಕುಮಾರಸ್ವಾಮಿ ತಮಾಷೆಯಾಗಿ ಮಾತನಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT