ರಾಜ್ಯ

ಬೆಳಗಾವಿ: 100 ಅಡಿ ಆಳದ ಬಾವಿಗೆ ಬಿದ್ದು ಮುಳುಗುತ್ತಿದ್ದ ಮೂರು ವರ್ಷದ ಬಾಲಕನನ್ನು ರಕ್ಷಿಸಿದ ಮೇಸ್ತ್ರಿ

Ramyashree GN

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಬೆಳಗಾವಿ ಸಮೀಪದ ಪಾಟ್ನೆ-ಫಟಾ ಗ್ರಾಮದಲ್ಲಿ ಸೋಮವಾರ ಆಕಸ್ಮಿಕವಾಗಿ 100 ಅಡಿ ಆಳದ ಬಾವಿಗೆ ಬಿದ್ದ ಮೂರು ವರ್ಷದ ಬಾಲಕನ ಜೀವವನ್ನು ಬೆಳಗಾವಿಯಲ್ಲಿ ಗಾರೆ ಕೆಲಸ ಮಾಡುವ 40 ವರ್ಷದ ಮೇಸ್ತ್ರಿಯೊಬ್ಬರು ರಕ್ಷಿಸಿದ್ದಾರೆ.
ಇದೇ ವಿಚಾರವಾಗಿ ಮೇಸ್ತ್ರಿ ರಾಹುಲ್ ಕಾಟ್ಕರ್ ಅವರನ್ನು ಪಟ್ನೆ-ಫಟಾ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಸನ್ಮಾನಿಸಿದರು. 

ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ಕಾಟ್ಕರ್ ಅವರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ನಿರತರಾಗಿದ್ದಾಗ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದರಿಂದ ಕೆಲವು ಮಕ್ಕಳು ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕೇಳಿದ್ದಾರೆ. ಆಯುಷ್ ಆನಂದ್ ತುಪಾರೆ ಎಂಬ ಬಾಲಕ ನೀರಿನಿಂದ ಮೇಲೇರಲು ಹರಸಾಹಸ ಪಡುತ್ತಿದ್ದ.

ಈ ವೇಳೆ ಕಟ್ಟಡದ ಮೊದಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾಟ್ಕರ್, ನಿರ್ಮಾಣ ಸ್ಥಳದ ಪಕ್ಕದಲ್ಲಿದ್ದ ಮರಳಿನ ರಾಶಿಯ ಮೇಲೆ ಹಾರಿ, ಬಾವಿಯ ಸಮೀಪ ತೆರಳಿದ್ದಾರೆ. ಅದಾಗಲೇ ಕಟ್ಟಿದ್ದ ಹಗ್ಗದ ಮೂಲಕ ಬಾವಿಯ ಕೆಳಗಿಳಿದು ಆಯುಷ್‌ನನ್ನು ನೀರಿನಿಂದ ಹೊರತೆಗೆದಿದ್ದಾರೆ. ಹಗ್ಗವನ್ನು ಬಳಸಿ, ಬಾಲಕನನ್ನು ಹಿಡಿದುಕೊಂಡು ಮೇರೇರುತ್ತಿರುವಾಗ, ಹಗ್ಗವು ತುಂಡಾಗಿದೆ. ಆಗ ಕಾಟ್ಕರ್ ಮತ್ತು ಆಯುಷ್ ಇಬ್ಬರೂ ನೀರಿಗೆ ಬಿದ್ದಿದ್ದಾರೆ.

ಅಷ್ಟೊತ್ತಿಗಾಗಲೇ ಕೆಲವು ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ. ಗ್ರಾಮದವರಲ್ಲಿ ಒಬ್ಬರಾದ ರಾಹುಲ್ ಕಾಂಬಳೆ ಅವರು ಬಾವಿಗೆ ಇಳಿದು ಮಗುವನ್ನು ಸುರಕ್ಷಿತವಾಗಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಕಾಟ್ಕರ್ ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ನೀರಿನಲ್ಲಿ ಅವರ ಮೊಬೈಲ್ ಫೋನ್ ಕೂಡ ಕಳೆದುಹೋಗಿದೆ. ಕಾಟ್ಕರ್‌ಗೆ ಮೊಬೈಲ್ ಖರೀದಿಸಲು ಬಾಲಕನ ಪೋಷಕರು ಮತ್ತು ಗ್ರಾಮಸ್ಥರು ನಗದನ್ನು ನೀಡಲು ಮುಂದಾದರು. ಆದರೆ, ಮಗುವನ್ನು ಉಳಿಸುವುದು ಮಾತ್ರ ತನ್ನ ಕರ್ತವ್ಯ ಎಂದು ಹೇಳಿ ಅದನ್ನು ತೆಗೆದುಕೊಳ್ಳಲು ಕಾಟ್ಕರ್ ನಿರಾಕರಿಸಿದರು.

SCROLL FOR NEXT