ಸಾಂದರ್ಭಿಕ ಚಿತ್ರ 
ರಾಜ್ಯ

ನಾಸಾಗೆ ಹೊರಟ ಬೆಂಗಳೂರಿನ ವಿದ್ಯಾರ್ಥಿನಿಯರಿಗೆ ತ್ವರಿತವಾಗಿ ಅತ್ಯಲ್ಪ ಸಮಯದಲ್ಲಿ ಪಾಸ್ ಪೋರ್ಟ್ ವಿತರಣೆ!

ಮೇ 25ರಿಂದ 28ರವರೆಗೆ ನಡೆಯಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳನ-2023ಕ್ಕೆ ತಮ್ಮ ಮಕ್ಕಳು ಆಯ್ಕೆಯಾಗಿದ್ದಾರೆ ಎಂದು ವಾರದ ಹಿಂದೆ ಪೋಷಕರಿಗೆ ಗೊತ್ತಾಯಿತು.

ಬೆಂಗಳೂರು: ಮೇ 25ರಿಂದ 28ರವರೆಗೆ ನಡೆಯಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳನ-2023ಕ್ಕೆ ತಮ್ಮ ಮಕ್ಕಳು ಆಯ್ಕೆಯಾಗಿದ್ದಾರೆ ಎಂದು ವಾರದ ಹಿಂದೆ ಪೋಷಕರಿಗೆ ಗೊತ್ತಾಯಿತು. ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳ ಪಾಲಕರಿಗೆ ಏನು ಮಾಡುವುದೆಂದೇ ಗೊತ್ತಾಗಲಿಲ್ಲ. ಮಕ್ಕಳ ಕೈಯಲ್ಲಿ ಪಾಸ್ ಪೋರ್ಟ್ ಕೂಡ ಇರಲಿಲ್ಲ. 

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಪ್ರಾಂಶುಪಾಲೆ ಬಿ ಇ ಶಶಿಕಲಾ ಬಾಯಿ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೆ ಕೃಷ್ಣ ಮತ್ತು ಡೆಪ್ಯೂಟಿ ಪಾಸ್‌ಪೋರ್ಟ್ ಅಧಿಕಾರಿ ಎ ರಾಜೇಶ್ವರಿ ಅವರ ಕ್ಷಿಪ್ರ ಕೆಲಸ ಬುದ್ದಿವಂತಿಕೆಯಿಂದ ಮಕ್ಕಳಿಗೆ ಅತ್ಯಲ್ಪ ಸಮಯದಲ್ಲಿ ಪಾಸ್ ಪೋರ್ಟ್ ಸಿಕ್ಕಿದೆ. ಈಗ ತಮ್ಮ ಮಕ್ಕಳನ್ನು ಯುಎಸ್ ಗೆ ವೀಸಾದೊಂದಿಗೆ ಪೋಷಕರು ಕಳುಹಿಸಲು ಸಜ್ಜಾಗಿದ್ದಾರೆ. 

8ನೇ ತರಗತಿ ವಿದ್ಯಾರ್ಥಿನಿ ಡಿ ಬೆಲಿಟಾ ರಾಸ್ ಮತ್ತು 9 ನೇ ತರಗತಿ ವಿದ್ಯಾರ್ಥಿನಿ ಶಶಿಕಾ ರಾಮಸ್ವಾಮಿ ಅವರ ಕುಟುಂಬಸ್ಥರು ಖುಷಿಯಾಗಿದ್ದಾರೆ. 

ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಬೆಲಿಟಾ ಪಾಸ್‌ಪೋರ್ಟ್ ಪಡೆದರು. ಆಕೆಯ ತಾಯಿ, ಗೃಹಿಣಿ ನಿನಿತಾ ಅಶ್ವಿನಿ, “ಅಧಿಕಾರಿಗಳ ಪಾರದರ್ಶಕ ದಕ್ಷತೆಯ ಕೆಲಸವನ್ನು ಶ್ಲಾಘಿಸಲು ನನಗೆ ಪದಗಳೇ ಸಿಗುತ್ತಿಲ್ಲ, ಪಾಸ್‌ಪೋರ್ಟ್ ಕಚೇರಿಯಲ್ಲಿದ್ದ ಎಲ್ಲರೂ ನಮಗೆ ಸಹಾಯ ಮಾಡಿದ್ದಾರೆ ಎಂದರು. 

ಸೀರೆಗೆ ಡೈಯಿಂಗ್ ಹಾಕುವ ವ್ಯಾಪಾರ ಮಾಡುತ್ತಿರುವ ಶಶಿಕಾ ಅವರ ತಂದೆ ಸೋಮವಾರ ಮಗಳೊಂದಿಗೆ ಪಾಸ್‌ಪೋರ್ಟ್ ಕಚೇರಿಗೆ ಹೋಗಿದ್ದರು. ಆಗ ಶಾಲೆಯ ಪ್ರಾಂಶುಪಾಲರು ಕರೆ ಮಾಡಿ ನಮಗೆ ಸಹಾಯ ಮಾಡುವಂತೆ ಸ್ಥಳೀಯ ಪಾಸ್ ಪೋರ್ಟ್ ಅಧಿಕಾರಿಗೆ ಮನವಿ ಮಾಡಿದರು. RPO ನಮಗೆ ತಕ್ಷಣದ ಅಪಾಯಿಂಟ್ಮೆಂಟ್ ನೀಡಿದರು. ಇವತ್ತು ನಮಗೆ ಪಾಸ್‌ಪೋರ್ಟ್ ಸುಲಭವಾಗಿ ಸಿಕ್ಕಿದೆ ಎಂದರು. 

ಆಕೆಯ ತಾಯಿ ಸುದಾಮಣಿ ಆರ್, “ಪಾಸ್‌ಪೋರ್ಟ್ ಇಲ್ಲದೆ ಈ ಸುವರ್ಣಾವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ ಎಂಬ ಚಿಂತೆಯಾಗಿತ್ತು. ಮಗಳು 6 ನೇ ತರಗತಿಯಲ್ಲಿದ್ದಾಗೆ ಒಮ್ಮೆ ಆಯ್ಕೆಯಾದಳು, ಆದರೆ ಕೋವಿಡ್‌ನಿಂದಾಗಿ ಹೋಗಲು ಸಾಧ್ಯವಾಗಿರಲಿಲ್ಲ ಎಂದರು. 

ಸಮೂಹ ಯೋಜನೆಯನ್ನು ವಿವರಿಸಿದ ಶಶಿಕಾ, “ನಾಸಾ ಬಾಹ್ಯಾಕಾಶಕ್ಕೆ ಕಳುಹಿಸುವ ಉಪಗ್ರಹಗಳನ್ನು ನಾವು ಪ್ರದರ್ಶಿಸಿದ್ದೇವೆ. ಕೆಲಸದಲ್ಲಿ ತೊಡಗಿರುವ ಶ್ರೇಷ್ಠ ವಿಜ್ಞಾನಿಗಳನ್ನು ಭೇಟಿಯಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎನ್ನುತ್ತಾಳೆ. 

ಸತತ ಮೂರನೇ ಬಾರಿ ಪ್ರಯತ್ನದಲ್ಲಿ ಆಯ್ಕೆಯಾಗಿದ್ದೇನೆ ಎಂದು ಬೆಲಿಟಾ ಹೇಳುತ್ತಾಳೆ. ಈ ಇಬ್ಬರು ವಿದ್ಯಾರ್ಥಿನಿಯರ ಜೊತೆಗೆ ಇತರ ಆರು ಮಂದಿ - ಏಂಜಲ್ ದಧಿಚ್, ಆಶಿತಾ ಆರ್, ಅದ್ವಿಕ್ ಶುಕ್ಲಾ, ದಿನೇಶ್ ಕಾರ್ತಿಕೇಯ, ಗಾಲಿ ಕೌಶಿಕ್ ರೆಡ್ಡಿ ಮತ್ತು ಎಲ್ ಪಿ ಅವಿಕ್ಷಿತ್ ತಮ್ಮ ಪ್ರಾಂಶುಪಾಲರೊಂದಿಗೆ ನಾಸಾ ಸಮ್ಮೇಳನಕ್ಕೆ ಹೋಗುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT