ರಾಜ್ಯ

ಕೆಆರ್ ಪುರಂನಲ್ಲಿ ಶೌಚಾಲಯ, ಅಂಗನವಾಡಿ ನಿರ್ಮಾಣದಲ್ಲಿ 97 ಕೋಟಿ ರೂ. ಹಗರಣ: ಟಿಜೆ ಅಬ್ರಾಹಂ

Ramyashree GN

ಬೆಂಗಳೂರು: ಕೆಆರ್ ಪುರಂ ವ್ಯಾಪ್ತಿಯ ಒಂಬತ್ತು ವಾರ್ಡ್‌ಗಳಲ್ಲಿ ಅಂಗನವಾಡಿ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಶ್ರೀಕಂಠೇಗೌಡ, ಗುತ್ತಿಗೆದಾರ ಕೆಎನ್ ಶ್ರೀನಿವಾಸ್, ಮಹದೇವಪುರದ ಮುಖ್ಯ ಎಂಜಿನಿಯರ್ ಸೇರಿ ಆರು ಮಂದಿ  97 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಆರೋಪಿಸಿದ್ದಾರೆ. 

ಅಬ್ರಹಾಂ ಅವರು ಬುಧವಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಹೊರಮಾವು, ರಾಮಮೂರ್ತಿನಗರ, ದೇವಸಂದ್ರ, ವಿಜಿನಾಪುರ, ವಿಜ್ಞಾನನಗರ, ಎಚ್‌ಎಎಲ್, ಬಸವನಪುರ, ಕೆಆರ್ ಪುರಂ, ಎ ನಾರಾಯಣಪುರ ವಾರ್ಡ್‌ಗಳಲ್ಲಿ ಅಂಗನವಾಡಿ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಕಲಿ ಕಡತಗಳನ್ನು ಸೃಷ್ಟಿಸಿ ನಿರ್ಮಾಣ ಮಾಡದ ಯೋಜನೆಗಳಿಂದ 97 ಕೋಟಿ ರೂ. ಲೂಟಿ ಮಾಡಲಾಗಿದೆ' ಎಂದರು.

400 ಕೋಟಿ ರೂ. ಗಳ 1,883 ಅಭಿವೃದ್ಧಿ ಕಾಮಗಾರಿಗಳ ಪೈಕಿ ಶೇ 20ರಷ್ಟು ಮಾತ್ರ ಕಾಗದದ ಮೇಲಿದ್ದು, ಉಳಿದವು ‘ಬೋಗಸ್’ ಎಂದು ಅಬ್ರಹಾಂ ಆರೋಪಿಸಿದ್ದಾರೆ.

ಆರೋಪಗಳು ಆಧಾರರಹಿತವಾಗಿದ್ದು, ರಾಜಕೀಯ ಪ್ರೇರಿತವಾಗಿವೆ. ಈ ಹಿಂದೆಯೂ ಅಬ್ರಹಾಂ ಇತರ ರಾಜಕೀಯ ಮುಖಂಡರ ಮೇಲೂ ಆರೋಪ ಮಾಡಿದ್ದು, ಇದೀಗ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದ ಜನರು ನಂಬುವವರೆಗೆ ಮತ್ತು ನನ್ನ ಬೆಂಬಲಕ್ಕೆ ನಿಲ್ಲುವವರೆಗೂ ನಾನು ಭಯಪಡಬೇಕಾಗಿಲ್ಲ ಎಂದು ಭೈರತಿ ಬಸವರಾಜ ಹೇಳಿದರು.

SCROLL FOR NEXT