ಕಬ್ಬನ್ ಪಾರ್ಕ್ 
ರಾಜ್ಯ

ಕಬ್ಬನ್ ಪಾರ್ಕ್ ನಲ್ಲಿ ಪ್ರೇಮಿಗಳ ಅಸಭ್ಯ ವರ್ತನೆಗೆ ಬ್ರೇಕ್! ತಿಂಡಿ ತಿನಿಸು ಒಯ್ಯುವಂತಿಲ್ಲ: ಇದಕ್ಕೆ ಅಧಿಕಾರಿಗಳು ಏನಂತಾರೆ?ಏನಂತಾರೆ? 

ಕಬ್ಬನ್ ಪಾರ್ಕ್ ಒಳಗೆ ತಿಂಡಿ-ತೀರ್ಥ ತೆಗೆದುಕೊಂಡು ಹೋಗುವ ಹಾಗಿಲ್ಲ, ಫೋಟೋಗ್ರಾಫರ್ ಗಳು ಫೋಟೋ ತೆಗೆಯುವ ಹಾಗಿಲ್ಲ,  ಲವರ್ಸ್ ಬೇಕಾಬಿಟ್ಟಿ ವರ್ತಿಸುವ ಹಾಕಿಲ್ಲ ಎಂಬಿತ್ಯಾದಿ ಕಠಿಣ ನಿಯಮಗಳನ್ನು ಸಾರ್ವಜನಿಕರಿಗೆ ತೋಟಗಾರಿಕೆ ಇಲಾಖೆ ತಂದಿದೆ ಎಂಬ ಸುದ್ದಿಯನ್ನು ಇತ್ತೀಚೆಗೆ ಕೇಳಿದ್ದೆವು.

ಬೆಂಗಳೂರು: ಕಬ್ಬನ್ ಪಾರ್ಕ್ ಒಳಗೆ ತಿಂಡಿ-ತೀರ್ಥ ತೆಗೆದುಕೊಂಡು ಹೋಗುವ ಹಾಗಿಲ್ಲ, ಫೋಟೋಗ್ರಾಫರ್ ಗಳು ಫೋಟೋ ತೆಗೆಯುವ ಹಾಗಿಲ್ಲ,  ಲವರ್ಸ್ ಬೇಕಾಬಿಟ್ಟಿ ವರ್ತಿಸುವ ಹಾಕಿಲ್ಲ ಎಂಬಿತ್ಯಾದಿ ಕಠಿಣ ನಿಯಮಗಳನ್ನು ಸಾರ್ವಜನಿಕರಿಗೆ ತೋಟಗಾರಿಕೆ ಇಲಾಖೆ ತಂದಿದೆ ಎಂಬ ಸುದ್ದಿಯನ್ನು ಇತ್ತೀಚೆಗೆ ಕೇಳಿದ್ದೆವು. ಮಾರ್ಷಲ್ ಗಳು, ಭದ್ರತಾ ಸಿಬ್ಬಂದಿ ಕಬ್ಬನ್ ಪಾರ್ಕ್ ಒಳಗೆ ಕಟ್ಟುನಿಟ್ಟಿನ ಶಿಸ್ತು ನಿಯಮ ತಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. 

ಇದಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾರಣ ನೀಡುತ್ತಾರೆ: ಹುಲ್ಲುಹಾಸು ಹೊದಿಕೆಗಳು ಹಾಳಾಗುವುದರಿಂದ ಅದರ ಮೇಲೆ ನಡೆಯುವುದು, ಮಕ್ಕಳು ಆಟವಾಡಬಾರದು ಮಾಡಬಾರದು. ಪೊದೆಗಳ ಮೂಲೆಯಲ್ಲಿ ಜನರು ಕುಳಿತುಕೊಳ್ಳಬಾರದು, ತಿಂಡಿ ತಿನಿಸುಗಳನ್ನು ಒಳಗೆ ತೆಗೆದುಕೊಂಡು ಹೋಗಬಾರದು ಹಾವುಗಳು ಬರುವ ಅಪಾಯವಿದೆ. ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಬಿಸಾಕುವುದರಿಂದ ಇಲಿಗಳು, ಹಾವುಗಳ ಸಂತತಿ ಹೆಚ್ಚಾಗಿ ಜನರ ಓಡಾಟಕ್ಕೆ, ಜೀವಕ್ಕೆ ಅಪಾಯವಿದೆ. ಇದರಿಂದ ಕಬ್ಬನ್ ಪಾರ್ಕ್ ಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಹೀಗಾಗಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯಾಗಿ ಸೂಚನಾ ಫಲಕಗಳನ್ನು ಅಲ್ಲಲ್ಲಿ ಪ್ರದರ್ಶಿಸಿದ್ದೇವೆ, ಈ ನಿಯಮಗಳು ಹಿಂದಿನಿಂದಲೂ ಇದ್ದವು ಎಂದು ಕಬ್ಬನ್ ಪಾರ್ಕ್ ನ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಾಲಕೃಷ್ಣ ಹೆಚ್ ಟಿ ಹೇಳುತ್ತಾರೆ.

ಕಬ್ಬನ್ ಪಾರ್ಕ್‌ನಲ್ಲಿ ಅಸಭ್ಯ ವರ್ತಿಸುವವರಿಗೆ ದಂಡ ಹಾಕುವುದಾಗಿ ಎಚ್ಚರಿಸಿ ಸೂಚನಾ ಫಲಕ ಹಾಕಲಾಗಿದೆ.

ಕಬ್ಬನ್ ಪಾರ್ಕ್ ಸಾಮಾನ್ಯವಾಗಿ ಲವರ್ಸ್ ಗಳ ಹಾಟ್ ಸ್ಪಾಟ್. ಎಲ್ಲೆಂದರಲ್ಲಿ ಜೋಡಿ ಕುಳಿತುಕೊಂಡಿರುವಾಗ ಸಾರ್ವಜನಿಕರು ಕುಟುಂಬಸ್ಥರು ಮಕ್ಕಳ ಜೊತೆ ಓಡಾಡಲು ಮುಜುಗರವಾಗುತ್ತದೆ. ಇದರಿಂದಾಗಿ ಸಾರ್ವಜನಿಕವಾಗಿ ಗಾಂಭೀರ್ಯದಿಂದ ವರ್ತಿಸುವಂತೆ ಭದ್ರತಾ ಸಿಬ್ಬಂದಿ ಹೇಳುತ್ತಾರೆ. ನೈತಿಕ ಪೊಲೀಸ್ ಗಿರಿ ನಮ್ಮ ಕೆಲಸವಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ. ಆದರೆ ಯಾವುದೇ ಹೊಸ ನಿರ್ದೇಶನಗಳು ಅಥವಾ ಮಾರ್ಗಸೂಚಿಗಳಿಲ್ಲ ಎಂದು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳುತ್ತಾರೆ. 

ಛಾಯಾಗ್ರಹಣವನ್ನು ನಿಷೇಧಿಸಿದ್ದಕ್ಕಾಗಿ ಅನೇಕ ನೆಟಿಜನ್‌ಗಳು ಇಲಾಖೆಯನ್ನು ದೂಷಿಸುತ್ತಾರೆ, ಒಂದು ದಶಕದಿಂದ ವೃತ್ತಿಪರ ಫೋಟೋ ಮತ್ತು ವೀಡಿಯೊ ಶೂಟ್‌ಗಳನ್ನು ನಿಷೇಧಿಸಲಾಗಿದೆ. ಅನೇಕ ಪಕ್ಷಿವೀಕ್ಷಕರು ಮತ್ತು ಪಕ್ಷಿಶಾಸ್ತ್ರಜ್ಞರು ಫ್ಲ್ಯಾಷ್ ನ್ನು ಬಳಸುವುದರಿಂದ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತಿದೆ.ನಾಗರಿಕರು ಈಗಲೂ ಕ್ಯಾಮೆರಾ ಮತ್ತು ಮೊಬೈಲ್ ಫೋನ್ ಬಳಸುತ್ತಾರೆ, ಅವರಿಗೇನು ಸಮಸ್ಯೆಯಿಲ್ಲವಲ್ಲ ಎಂದು ಬಾಲಕೃಷ್ಣ ಹೇಳುತ್ತಾರೆ.

ಆದರೆ ಪ್ರೇಮಿಗಳು, ಲವರ್ಸ್ ಗಳು ಸಾರ್ವಜನಿಕರ ಮುಂದೆ ಗಾಂಭೀರ್ಯದಿಂದ ವರ್ತಿಸಬೇಕು, ಜನರಿಗೆ ಮುಜುಗರ ತರುವಂತೆ ಮಾಡಬಾರದು ಎಂಬುದು ಅನೇಕರ ಅಭಿಪ್ರಾಯವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT