ಶಾಲೆಯ ಕೊಠಡಿಯ ಬಾಗಿಲುಗಳು ಕಪ್ಪು ಹಲಗೆಯಾಗಿ ಬಳಕೆ 
ರಾಜ್ಯ

ಕೊಠಡಿಯ ಬಾಗಿಲೇ ಬ್ಲ್ಯಾಕ್ ಬೋರ್ಡ್; ಕಾರಿಡಾರ್ ನಲ್ಲಿ ಕುಳಿತು ವಿದ್ಯಾರ್ಥಿಗಳ ಕಲಿಕೆ: ಬಳ್ಳಾರಿ ಸರ್ಕಾರಿ ಶಾಲೆಯ ದುಸ್ಥಿತಿ!

ಬಳ್ಳಾರಿ ಜಿಲ್ಲೆಯ ಸಿರಾವರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಕೊಠಡಿಯ ಬಾಗಿಲುಗಳು ಕಪ್ಪು ಹಲಗೆಯಾಗಿ ಮಾರ್ಪಟ್ಟಿವೆ.

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರಾವರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಕೊಠಡಿಯ ಬಾಗಿಲುಗಳು ಕಪ್ಪು ಹಲಗೆಯಾಗಿ ಮಾರ್ಪಟ್ಟಿವೆ.

ಹೊಸ ಕಟ್ಟಡ ನಿರ್ಮಾಣವಾಗಿದ್ದರೂ ಶಿಕ್ಷಣ ಇಲಾಖೆ ಎಲ್ಲ ಕೊಠಡಿಗಳನ್ನು ತರಗತಿಗಳಿಗೆ ಬಳಸಲು ಅನುಮತಿ ನೀಡದ ಕಾರಣ ಈ ಸಮಸ್ಯೆ ಸೃಷ್ಠಿಯಾಗಿದೆ.  ಇದು ಜಿಲ್ಲಾಡಳಿತ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿಗೂ ಕಾರಣವಾಗಿದೆ.

ಶಾಲೆಯಲ್ಲಿ 793 ವಿದ್ಯಾರ್ಥಿಗಳಿದ್ದು, ಹಳೆಯ ಕಟ್ಟಡದಲ್ಲಿ ಎಲ್ಲರಿಗೂ ಕೂತು ಪಾಠ ಕೇಳಲು ಸಾಕಾಗುವಷ್ಟು ತರಗತಿ ಕೊಠಡಿಗಳಿಲ್ಲ. ಹೀಗಾಗಿ ಶಿಕ್ಷಕರು ಈಗ ಕೊಠಡಿಗಳ ಹೊರಗೆ ತರಗತಿಗಳನ್ನು ನಡೆಸುತ್ತಿದ್ದಾರೆ ಮತ್ತು ಕೆಲವರು ಬಾಗಿಲುಗಳನ್ನು ಕಪ್ಪು ಹಲಗೆಯಾಗಿ ಬಳಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು 18 ಕೊಠಡಿಗಳ ಶಾಲಾ ಕಟ್ಟಡವನ್ನು ಇತ್ತೀಚೆಗೆ ನಿರ್ಮಿಸಿದೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.  ಇದುವರೆಗೂ10 ಕೊಠಡಿಗಳನ್ನು ಹಸ್ತಾಂತರಿಸಲಾಗಿದ್ದು, ಉಳಿದ ಕೊಠಡಿಗಳನ್ನು ಬಳಸಲು ಅನುಮತಿ ನೀಡಿಲ್ಲ.

ಸಾಮಾನ್ಯವಾಗಿ ಶಿಕ್ಷಕರು ಕಪ್ಪು ಹಲಗೆಗಳನ್ನು ಒಯ್ಯುತ್ತಾರೆ. ಇತ್ತೀಚೆಗೆ, ಶಿಕ್ಷಕರೊಬ್ಬರು ಬಾಗಿಲನ್ನು ಕಪ್ಪು ಹಲಗೆಯಾಗಿ ಬಳಸಿ 4 ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪಾಠ ಕಲಿಸಿದ್ದಾರೆ. ಉಳಿದ ತರಗತಿ ಕೊಠಡಿಗಳನ್ನು ಬಳಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ  ಅಲ್ಲದೆ, ಕೆಲವು ಕೊಠಡಿಗಳಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ಸರಿಪಡಿಸಬೇಕಾಗಿದೆ. ಅದು ಮುಗಿದ ನಂತರ, ಕೊಠಡಿಗಳನ್ನು ನಮಗೆ ಹಸ್ತಾಂತರಿಸಲಾಗುತ್ತದೆ ಎಂದು ಶಿಕ್ಷಕರುೊಬ್ಬರು ವಿವರಿಸಿದ್ದಾರೆ.

ಸರಕಾರಿ ಶಾಲೆಯ ದುಸ್ಥಿತಿ ನೋಡಿದರೆ ನಾಚಿಕೆಯಾಗುತ್ತಿದೆ ಎಂದು ಗ್ರಾಮದ ರಮೇಶ್ ಬಿ. ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ಬಾಗಿಲನ್ನು ಕಪ್ಪು ಹಲಗೆಯಾಗಿ ಬಳಸಿದ್ದು ಶಿಕ್ಷಕರ ತಪ್ಪು ಅಲ್ಲ. ಕನಿಷ್ಠ ಸಮಯ ವ್ಯರ್ಥ ಮಾಡುವ ಬದಲು ವಿದ್ಯಾರ್ಥಿಗಳಿಗೆ ಕಲಿಸಲು ಪ್ರಯತ್ನಿಸಿದರು. ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. 

ಸರಿಯಾದ ಶೌಚಾಲಯಗಳಿಲ್ಲ, ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇತ್ತೀಚೆಗೆ ಸುರಿದ ಮಳೆಯಿಂದ ಶಾಲಾ ಆವರಣ ಕೆರೆಯಂತಾಗಿತ್ತು. ಆದರೆ ಇದ್ಯಾವುದನ್ನು  ಲೆಕ್ಕಿಸದೆ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಲೇ ಇದ್ದಾರೆ. ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT