ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ 
ರಾಜ್ಯ

ಸಾರ್ವಜನಿಕರಿಂದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ವ್ಯಾಪಕ ದೂರು ಬಂದ ಹಿನ್ನೆಲೆ ಲೋಕಾಯುಕ್ತ ಸಾಮೂಹಿಕ ದಾಳಿ

ಬಿಬಿಎಂಪಿ ವ್ಯಾಪ್ತಿಯ 45 ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ ಹಲವು ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 45 ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ ಹಲವು ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. 45 ತಂಡಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಬಿಬಿಎಂಪಿಯ ಕಂದಾಯ ಮತ್ತು ನಗರ ಯೋಜನಾ ಕಚೇರಿಗಳಲ್ಲಿನ ಹಲವಾರು ಕಡತಗಳನ್ನು ಪರಿಶೀಲಿಸಿದರು.

ಸಾರ್ವಜನಿಕರಿಂದ ಬಿಬಿಎಂಪಿ ಅಧಿಕಾರಿಗಳ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದರಿಂದ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದ್ದೇಶಪೂರ್ವಕವಾಗಿ ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ಸಿಬ್ಬಂದಿ ವಿಳಂಬ ಧೋರಣೆ ಅನುಸರಿಸುತ್ತಾರೆ ಎಂದು ದೂರಲಾಗಿತ್ತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಮತ್ತು ಪಟ್ಟಣ ಯೋಜನಾ ಇಲಾಖೆಗಳ 45 ಕಚೇರಿಗಳ ಮೇಲೆ ನಡೆಸಿದ ದಾಳಿ ವೇಳೆ ಸಾರ್ವಜನಿಕರಿಗೆ ನೀಡಲಾದ ಕಿರುಕುಳದ ಸತ್ಯಾಸತ್ಯತೆಯನ್ನು ಗಮನಿಸಿ, ಕರ್ನಾಟಕ ಲೋಕಾಯುಕ್ತವು ಪ್ರತಿ ವಲಯದ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸಲು ಚಿಂತನೆ ನಡೆಸುತ್ತಿದೆ.  

ಮೂಲಗಳ ಪ್ರಕಾರ, ಗುರುವಾರ ಸಂಜೆ ಬಿಬಿಎಂಪಿಯ 45 ಕಚೇರಿಗಳಲ್ಲಿ ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ಕಂಡುಬಂದ ಅಕ್ರಮಗಳ ಕುರಿತು ಶುಕ್ರವಾರ ನ್ಯಾಯಾಂಗ ಮತ್ತು ಪೊಲೀಸ್ ವಿಭಾಗಗಳ ಅಧಿಕಾರಿಗಳು ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರಿಗೆ ವಿವರವಾದ ವರದಿ ಸಲ್ಲಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಮತ್ತು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಅವರ ಜಂಟಿ ನೇತೃತ್ವದಲ್ಲಿ ಈ ದೊಡ್ಡ ದಾಳಿ ನಡೆಸಲಾಗಿದೆ.

ಲೆಕ್ಕಕ್ಕೆ ಸಿಗದ ಹಣ, ಕ್ಷುಲ್ಲಕ ಕಾರಣಕ್ಕೆ  ಖಾತೆಗಳ ನಿರಾಕರಣೆ, ಸಕಾಲ ಯೋಜನೆಯಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ದಾಖಲು ಮಾಡದಿರುವುದು, ವಿಚಾರಣೆಗೆ ಮಾಡದರೆ ಬಾಕಿ ಉಳಿಸಿರುವ ಕಡತಗಳು,  ಹಾಜರಾತಿಯನ್ನು ಗುರುತಿಸುವಲ್ಲಿ ವಿಫಲತೆ, ಮುಂತಾದ ಹಲವಾರು ಅಕ್ರಮಗಳು, ದಾಳಿಯ ಸಮಯದಲ್ಲಿ ಕಂಡುಬಂದಿವೆ ಎಂದು ಮೊದಲ ಬಾರಿಗೆ ನಡೆಸಿದ ಸಾಮೂಹಿಕ ದಾಳಿಯಲ್ಲಿ ಲೋಕಾಯುಕ್ತ ತಂಡಕ್ಕೆ ತಿಳಿದು ಬಂದಿದೆ.

ಬಿಬಿಎಂಪಿಯ ಪ್ರತಿ ಕಂದಾಯ ಮತ್ತು ನಗರ ಯೋಜನಾ ಕಚೇರಿಯಲ್ಲಿ ಸಾರ್ವಜನಿಕರಿಗೆ ಕಿರುಕುಳದ ಬಗ್ಗೆ ನಮಗೆ ಸಾಕಷ್ಟು ದೂರುಗಳು ಬಂದಿವೆ. ಆದ್ದರಿಂದ, ನ್ಯಾಯಾಂಗ ಅಧಿಕಾರಿಗಳನ್ನು ದಾಳಿ ತಂಡದ ಭಾಗವಾಗಿದ್ದಾರೆ. ಏಕೆಂದರೆ ಅವರು ಕಾನೂನು ಪಟ್ಟಣ ಮತ್ತು ದೇಶ ಯೋಜನೆ ನಿಬಂಧನೆಗಳನ್ನು ಚೆನ್ನಾಗಿ ತಿಳಿದಿರುತ್ತಾರೆ, ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳು ಬಾಕಿ ಇರುವ ಕೆಲಸಗಳಿಗಾಗಿ ಅವರನ್ನು ಪ್ರಶ್ನಿಸಿದಾಗ ಬೇರೆ ಉತ್ತರಗಳನ್ನು ನೀಡಿ ತಪ್ಪಿಸಿಕೊಳ್ಳಬಾರದು. ನಾವು ಕೇವಲ ತಪ್ಪು ಮಾಡಿದವರನ್ನು ಹಿಡಿದು ಶಿಕ್ಷಿಸುವುದಿಲ್ಲ ಆದರೆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ದಾಳಿಯ ತಂಡದಲ್ಲಿದ್ದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT