ರಾಜ್ಯ

ಕಿಂಗ್ ಫಿಶರ್ ನಲ್ಲಿ ಅಪಾಯಕಾರಿ ಸೆಡಿಮೆಂಟ್ ಅಂಶ ಪತ್ತೆ: 25 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ

Lingaraj Badiger

ಮೈಸೂರು: ರಾಸಾಯನಿಕ ಪರೀಕ್ಷಾ ವರದಿಯಲ್ಲಿ ಪ್ರತಿಷ್ಠಿತ ಕಿಂಗ್ ಫಿಶರ್ ಬಿಯರ್‌ ಮಾನವ ಬಳಕೆಗೆ ಯೋಗ್ಯವಲ್ಲ ಎಂಬ ಅಂಶ ಪತ್ತೆಯಾಗಿದ್ದು, ರಾಜ್ಯ ಅಬಕಾರಿ ಇಲಾಖೆಯು 25 ಕೋಟಿ ರೂಪಾಯಿ ಮೌಲ್ಯದ ಎರಡು ಪ್ರಮುಖ ಬ್ರಾಂಡ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಪೊಲೀಸರು, ದಾಸ್ತಾನು ನಾಶಪಡಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂದು ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ಎ ರವಿಶಂಕರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ನ ನಂಜನಗೂಡು ಘಟಕದಲ್ಲಿ ತಯಾರಿಸಲಾಗಿದ್ದ ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ ಮತ್ತು ಕಿಂಗ್ ಫಿಶರ್ ಅಲ್ಟ್ರಾ ಲಾಗರ್ ಬಿಯರ್ ಬ್ಯಾಚ್ ನಂಬರ್ 7ಸಿ ಮತ್ತು 7ಇ 2023ರಂದು ಬಾಟಿಲಿಂಗ್ ಆದ ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಕಂಡುಬಂದಿದೆ.

ನಂಜನಗೂಡಿನ ಘಟಕದಲ್ಲಿ‌ ತಯಾರಿಸಲಾಗಿದ್ದ ಕಿಂಗ್​ಫಿಶರ್​ ಸ್ಟ್ರಾಂಗ್​ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಹೀಗಾಗಿ ಒಟ್ಟು‌ 78,678 ಬಿಯರ್ ಬಾಕ್ಸ್​ಗಳನ್ನು ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರಿಸದ ಹಿನ್ನೆಲೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ರಿಟೈಲ್​ನಲ್ಲೂ ಸೇಲ್ ಆಗದಂತೆ ತಡೆಹಿಡಿಯಲಾಗಿದೆ. ಮನುಷ್ಯರು ಕುಡಿಯಲು ಇದು ಯೋಗ್ಯವಲ್ಲ ಎಂದು ಇನ್​ಹೌಸ್ ಕೆಮಿಸ್ಟ್ ವರದಿ ನೀಡಿದೆ. ಈ ವರದಿ ಆಧರಿಸಿ ಕ್ರಮ ಕಗೊಳ್ಳಲಾಗಿದೆ ಎಂದು ಎ ರವಿಶಂಕರ್ ಅವರು ಮಾಹಿತಿ ನೀಡಿದ್ದಾರೆ.

SCROLL FOR NEXT