ಪಿಒಪಿ ಗಣೇಶ ಮೂರ್ತಿಗಳೊಂದಿಗೆ ಪ್ರತಿಭಟನಾಕಾರರು 
ರಾಜ್ಯ

ಬೆಂಗಳೂರು: ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಪರಿಸರಕ್ಕೆ ಹಾನಿಯಾಗುವ ಕಾರಣದಿಂದಾಗಿ ನಿಷೇಧ ಹೇರಲಾಗಿದ್ದ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಬೆಂಗಳೂರು: ಪರಿಸರಕ್ಕೆ ಹಾನಿಯಾಗುವ ಕಾರಣದಿಂದಾಗಿ ನಿಷೇಧ ಹೇರಲಾಗಿದ್ದ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಗಣೇಶ ಚತುರ್ಥಿ (Ganesha Chaturthi) ಹಬ್ಬಕ್ಕೆ 28 ದಿವಸಗಳಷ್ಟೇ ಬಾಕಿ ಇರುವಾಗಲೇ ಗಣಪನ ವಿಗ್ರಹಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಒಂದಷ್ಟು ಮಂದಿ ಪರಿಸರ ಸ್ನೇಹಿ ವಿಗ್ರಹಕ್ಕಾಗಿ ಮೊರೆ ಹೋಗುತ್ತಿದ್ದು, ಮತ್ತಷ್ಟು ಮಂದಿ ಅಗ್ಗವಾಗಿ ದೊರೆಯುವ ಸುಲಭವಾಗಿ ಸಾಗಿಸಬಲ್ಲ, ಕೆಮಿಕಲ್ ಯುಕ್ತ ಬಣ್ಣಗಳಿಂದ ಕೂಡಿರುವ ಪಿಒಪಿ ಗಣೇಶನ ವಿಗ್ರಹಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಪಿಒಪಿ ಗಣೇಶ ವಿಗ್ರಹಗಳ (POP Ganesha Idol) ಮಾರಾಟಕ್ಕೆ ನಿಷೇಧ ಹೇರಿದ ಹಿನ್ನೆಲೆ ಆಕ್ರೋಶಗೊಂಡಿರುವ ಗ್ರಾಹಕರು ನಗರದ ಕುಂಬಳಗೋಡಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕುಂಬಳಗೊಡಿನಲ್ಲಿ ಗಣೇಶ ತಯಾರಿಕಾ ಗೋಡೌನ್ ಇದ್ದು ಇಲ್ಲಿ ಈ ಹಿಂದೆ ಪರಿಸರಕ್ಕೆ ಮಾರಕವಾಗುವ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದ ಆರೋಪದ ಮೇರೆದೆ ಖಾಸಗಿ ವಾಹಿನಿಯೊಂದು ಕುಟುಕು ಕಾರ್ಯಾಚರಣೆ ನಡೆಸಿ ವಿಚಾರ ಬಯಳಿಗೆಳೆದಿತ್ತು. ಈ ಬೆಳವಣಿಗೆ ಬಳಿಕ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಗೋಡೌನ್ ಗೆ ಬೀಗ ಜಡಿದಿದ್ದರು. ಇದೀಗ ಸ್ಥಳೀಯರು ಮತ್ತು ಗೋಡೌನ್ ಮಾಲೀಕರು ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. 

ಪಿಒಪಿ ಗಣೇಶ ವಿಗ್ರಹಗಳನ್ನು ಮರಾಟ ಮಾಡಬಾರದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯು ನಿನ್ನೆಯೇ ಕುಂಬಳಗೋಡಿನ ಗಣಪತಿ ಗೋಡೌನ್ ಮುಚ್ಚಿಸಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಹಕರು, ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಗೋಡೌನ್ ಮುಂದೆ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರದ ಬಾಂಬೆಯಲ್ಲಿ ಪಿಒಪಿ ಗಣೇಶ ವಿಗ್ರಹಗಳನ್ನು ಮಾರಲು ಅವಕಾಶ ನೀಡಲಾಗಿದೆ. ಅಲ್ಲಿಂದಲೇ 25 ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಬರುತ್ತಿವೆ. ಈ ವಿಗ್ರಹಗಳು ಒಂದು ವಾರದಲ್ಲಿ ಬೆಂಗಳೂರಿಗೆ ಬರುತ್ತವೆ. ಅವುಗಳನ್ನ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಡೆಯಲು ಆಗುತ್ತಾ? ಒಂದು ವೇಳೆ ಆ ವಿಗ್ರಹಗಳನ್ನು ತಡೆಯಲು ಅವಕಾಶ ನೀಡದಿದ್ದರೆ ನಾವು ಕೂಡ ಬಾಂಬೆಯಿಂದಲೇ ಮೂರ್ತಿಗಳನ್ನು ತರುತ್ತೇವೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತಕ್ಕೆ UNSC ಸದಸ್ಯತ್ವಕ್ಕೆ ಬ್ರಿಟನ್ ಪ್ರಧಾನಿ Starmer ಬೆಂಬಲ; 2030 ರ ವೇಳೆಗೆ ಬ್ರಿಟನ್ ಜೊತೆಗಿನ ವ್ಯಾಪಾರ ದ್ವಿಗುಣ- Modi

ಅನ್ನಭಾಗ್ಯ: 5 ಕೆಜಿ ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

'ನನ್ನ ಸ್ನೇಹಿತನೊಂದಿಗೆ ಮಾತನಾಡಿದೆ': ಮೋದಿ, ಟ್ರಂಪ್‌ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇಕೆ?

Ranthambore: 'ಇದು ನನ್ನದು, ಇಲ್ಲ ನನ್ನದು'; ದಟ್ಟ ಅರಣ್ಯದಲ್ಲಿ ಅಮ್ಮ-ಮಗಳ ಬಿಗ್ ಫೈಟ್! ದಂಗಾದ ಪ್ರವಾಸಿಗರು, ಅಪರೂಪದ Video

ಭಾರತವೇ ನಮಗೆ ಮಾದರಿ, ಅಕ್ರಮ ವಲಸೆ ತಡೆಗೂ ಸಹಕಾರಿ; ಬ್ರಿಟನ್ ನಲ್ಲೂ ಆಧಾರ್ ಜಾರಿಗೆ PM Keir Starmer ಉತ್ಸುಕ; Nandan Nilekani ಜೊತೆ ಸಭೆ!

SCROLL FOR NEXT