ಕಾರವಾರದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ 
ರಾಜ್ಯ

ತೇಜಸ್‌ ಉತ್ತಮ ವಿಮಾನ, ಅದರ ಮುಂದುವರಿದ ಆವೃತ್ತಿ ಎದುರು ನೋಡುತ್ತಿದ್ದೇನೆ: ನೌಕಾಪಡೆ ಮಖ್ಯಸ್ಥ

ಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಅವರು, ಅದರ ಮುಂದುವರಿದ ಆವೃತ್ತಿ, ಟ್ವಿನ್ ಇಂಜಿನ್ ಡೆಕ್ ಆಧಾರಿತ...

ಕಾರವಾರ: ಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಅವರು, ಅದರ ಮುಂದುವರಿದ ಆವೃತ್ತಿ, ಟ್ವಿನ್ ಇಂಜಿನ್ ಡೆಕ್ ಆಧಾರಿತ ಯುದ್ಧವಿಮಾನ(TEDBF) ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

“ತೇಜಸ್ ಒಂದು ಉತ್ತಮ ವಿಮಾನ. ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಕೆಲವು ಮೂಲಮಾದರಿಗಳನ್ನು ಖರೀದಿಸಿದ್ದೇವೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ನಾವು ಅದರಲ್ಲಿ ಹೂಡಿಕೆ ಮಾಡಿದ್ದೇವೆ ಮತ್ತು ಅದು ತನ್ನ ಮೌಲ್ಯವನ್ನು ಸಾಬೀತುಪಡಿಸಿದೆ. ನಾವು ಈಗ TEDBF ಗಾಗಿ ಕಾಯುತ್ತಿದ್ದೇವೆ. ಭಾರತೀಯ ನೌಕಾಪಡೆಯ ಅಗತ್ಯಕ್ಕೆ ತಕ್ಕಂತೆ ಇದನ್ನು ತಯಾರಿಸಬೇಕು'' ಎಂದು ನೌಕಾಪಡೆಯ ಮುಖ್ಯಸ್ಥ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

TEDBF ವಿಮಾನದ ನೌಕಾ ಆವೃತ್ತಿಯಾಗಿದ್ದು, ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಅಭಿವೃದ್ಧಿಪಡಿಸುತ್ತಿದೆ. 2040 ರ ವೇಳೆಗೆ ನೌಕಾಪಡೆಯಲ್ಲಿ 45 ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.

ಮೂಲಮಾದರಿಯು 2026 ರ ವೇಳೆಗೆ ಸಿದ್ಧವಾಗಲಿದೆ ಮತ್ತು ಉತ್ಪಾದನೆಯು 2031-32 ರ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ. GE-414 ಇಂಜಿನ್‌ನಿಂದ ಚಾಲಿತವಾಗಿರುವ 26-ಟನ್ ದರ್ಜೆಯ ವಿಮಾನವು ಮಡಚಬಹುದಾದ ರೆಕ್ಕೆಗಳಂತಹ ವಿಶೇಷಣಗಳನ್ನು ಹೊಂದಿರುತ್ತದೆ ಮತ್ತುಇದು  MiG 29 ವಿಮಾನಗಳನ್ನು ಬದಲಾಯಿಸುವ ಸಾಧ್ಯತೆಯಿದೆ.

ಹೊಸದಾಗಿ ಕಾರ್ಯಾರಂಭ ಮಾಡಿದ ಐಎನ್‌ಎಸ್ ವಿಕ್ರಾಂತ್‌ ಬಗ್ಗೆ ಮಾತನಾಡಿದ ಹರಿಕುಮಾರ್ ಅವರು, ವಿಮಾನವಾಹಕ ನೌಕೆಯು ಪ್ರಸ್ತುತ ಮಿಗ್ 29 ಗಳನ್ನು ಹೊಂದಿದೆ. ಆದರೆ ಶೀಘ್ರದಲ್ಲೇ ಅದರಲ್ಲಿ ರಫೇಲ್‌ಗಳನ್ನು ಹೋಸ್ಟ್ ಮಾಡಲಾಗುವುದು ಎಂದು ಹೇಳಿದರು.

ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ವಸತಿ ಸಮುಚ್ಚಯವನ್ನು ಉದ್ಘಾಟಿಸಲು ಕಾರವಾರಕ್ಕೆ ಬಂದಿದ್ದ ಹರಿಕುಮಾರ್ ಅವರು, ಇದು (ಕಾರವಾರ) ಸ್ಮಾರ್ಟ್ ನೇವಲ್ ಬೇಸ್ ಆಗಿದೆ. ಭದ್ರತಾ ಅಂಶವನ್ನು ಪರಿಗಣಿಸಿದರೆ ಇದು ಬಹಳ ಮಹತ್ವದ್ದಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT