ರಾಜ್ಯ

ಬೆಳಗಾವಿ: ಬಿಜೆಪಿ ನಾಯಕನ ಮೇಲೆ ಹಲ್ಲೆ ಆರೋಪ; ಕಾಂಗ್ರೆಸ್ ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಎಫ್ಐಆರ್ 

Srinivas Rao BV

ಬೆಳಗಾವಿ: ಬಿಜೆಪಿ ನಾಯಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಕಾಂಗ್ರೆಸ್ ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
 
ಬಿಜೆಪಿ ನಾಯಕ ಪೃಥ್ವಿಸಿಂಗ್‌ ಅವರ ಮೇಲೆ ಸೋಮವಾರ ಸಂಜೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆರೋಪಿ ಚನ್ನರಾಜ್ ಹಟ್ಟಿಹೊಳಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ. 

ಘಟನೆಯೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ಹಾಗೂ ಆಕೆಯ ಸಹೋದರ ಹೇಳಿದ್ದಾರೆ. ಪೃಥ್ವಿ ಸಿಂಗ್ ಅವರ ಮೇಲೆ ಬೆಳಗಾವಿಯ ಜಯನಗರ ಹಿಂಡಲಗ ನಿವಾಸದ ಬಳಿ ಮಾರಣಾಂತಿಕ ಹಲ್ಲೆ ನಡೆದಿತ್ತು.

ಸಂತ್ರಸ್ತ ವ್ಯಕ್ತಿ ಎಂಎಲ್‌ಸಿ ಹಟ್ಟಿಹೊಳಿ, ಅವರ ಇಬ್ಬರು ಗನ್‌ಮನ್‌ಗಳು, ಅವರ ಸಹಾಯಕ ಸದಾಮ್ ಮತ್ತು ಇನ್ನೊಬ್ಬ ಸಹಾಯಕ ಸುಜಿತ್ ಜಾಧವ್ ವಿರುದ್ಧ ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಮೂವರು ಮತ್ತು ಇಬ್ಬರು ಅನಾಮಧೇಯ ಬಂದೂಕುಧಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಗ್ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತರಾಗಿದ್ದಾರೆ.  ಘಟನೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು

SCROLL FOR NEXT