ರಾಜ್ಯ

ದಸರಾ ಆನೆ ಅರ್ಜುನ ಸಾವು ಪ್ರಕರಣ: ಒತ್ತಡಕ್ಕೆ ಮಣಿದ ಸರ್ಕಾರ, ತನಿಖೆಗೆ ತಜ್ಞರ ಸಮಿತಿ ರಚನೆಗೆ ಮುಂದು

Manjula VN

ಬೆಂಗಳೂರು: ಕಾಡಾನೆ ಸೆರೆ ಮತ್ತು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಸಾವನ್ನಪ್ಪಿರುವ ಕುರಿತು ಎಲ್ಲೆಯಿಂದ ಬಂದ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಆನೆ ಸಾವಿಗೆ ಕಾರಣ ಪತ್ತೆಗೆ ತಜ್ಞರ ಸಮಿತಿ ರಚಿಸಲು ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

ಸಮಿತಿಯಲ್ಲಿ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ ಮತ್ತು ಖ್ಯಾತ ಆನೆ ತಜ್ಞ ಆರ್ ಸುಕುಮಾರ್ ಹಾಗೂ ಪಶು ಸಂಗೋಪನಾ ಇಲಾಖೆಯ ಪಶುವೈದ್ಯರೂ ಇರಲಿದ್ದಾರೆಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ಕೆಲ ತಜ್ಞರು ಹಾಗೂ ಪಶುವೈದ್ಯರ ಲಭ್ಯತೆ ಇನ್ನೂ ಖಚಿತವಾಗಿಲ್ಲ. ಹೀಗಾಗಿ ಆದೇಶ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ.

ಸಮಿತಿಯ ನೀಡಬೇಕಿರುವ ನಿಯಮಗಳು ಇನ್ನೂ ಅಂತಿಮಗೊಂಡಿಲ್ಲ, ಆದರೆ, ಮಾವುತರ ವಿರೋಧ, ಗುಂಡೇಟು, ಮರಣೋತ್ತರ ಪರೀಕ್ಷೆ, ಮಾದರಿ ವಿವರಗಳು, ಪ್ರತ್ಯಕ್ಷದರ್ಶಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು, ಪಶುವೈದ್ಯರ ಹೇಳಿಕೆಗಳು, ಆನೆ ಸಾವಿಗೆ ನಿಖರವಾದ ಕಾರಣ ಮತ್ತು ಅದಕ್ಕೆ ಯಾರು ಹೊಣೆಗಾರರೆಂದು ವಿವರವಾದ ವರದಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT