ರಾಜ್ಯ

ಗಾಂಧಿವಾದ ಕಿತ್ತೊಗೆಯಬೇಕು: ನಟ ಚೇತನ್ ಅಹಿಂಸಾ ಹೇಳಿಕೆ

Shilpa D

ಬೆಂಗಳೂರು: ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ಹೇಳಿಕೆ ನೀಡುವ ಮೂಲಕ ನಟ ಚೇತನ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಗಾಂಧಿವಾದ ಕುರಿತು  ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು, ಗಾಂಧೀಜಿಯವರ ‘ಧಾರ್ಮಿಕ ಸಾಮರಸ್ಯ’ ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವಗಳು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಖಾಸಗಿಯಾಗಿ, ನಾವೆಲ್ಲರೂ ಧರ್ಮದ ಹಕ್ಕನ್ನು ಹೊಂದಿದ್ದೇವೆ. ಸಾರ್ವಜನಿಕವಾಗಿ, ನಾವು ಜಾತ್ಯತೀತ ರಾಷ್ಟ್ರ –ಅಂದರೆ ಧರ್ಮದಿಂದ ದೂರ ಉಳಿಯುವುದಾಗಿದೆ. ‘ಧಾರ್ಮಿಕ ಸಾಮರಸ್ಯ’ ಎಂದರೆ ಅಸಮಾನತೆಯ ಸಂರಕ್ಷಣೆ. ಇದರಿಂದಾಗಿ ಗಾಂಧಿವಾದವನ್ನು ಕಿತ್ತೊಗೆಯಬೇಕು’ ಎಂದು ಚೇತನ್ ಬರದುಕೊಂಡಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ವಿ.ಡಿ ಸಾವರ್ಕರ್ ಜೊತೆಗೆ ಮಹಾತ್ಮಾ ಗಾಂಧೀಜಿ ಫೋಟೊವನ್ನು ತೆರವು ಮಾಡಬೇಕು ಎಂದು ಈಚೆಗೆ ಚೇತನ್ ಹೇಳಿಕೆ ನೀಡಿದ್ದರು.

SCROLL FOR NEXT