ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘದ ಸದಸ್ಯರ ಬೇಡಿಕೆ ಆಲಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ 
ರಾಜ್ಯ

'ನಮ್ಮನ್ನು ಕುಡುಕರು ಎಂದು ಕರೆಯಬೇಡಿ, ಮದ್ಯ ಪ್ರಿಯರು ಅನ್ನಿ', ಮದ್ಯಪಾನ ಪ್ರಿಯರ ಸಂಘದ ಸದಸ್ಯರ ಬೇಡಿಕೆ ಹೀಗಿದೆ....

ಹೆಸರಲ್ಲೇನಿದೆ ಎಂದು ನೀವು ಕೇಳುತ್ತೀರಾ, ಖಂಡಿತಾ ಇದೆ,  ಇಲ್ಲಿ ನೋಡಿ, ಇವರನ್ನು ಆ ಹೆಸರಿನಿಂದ ಕರೆದರೆ ಬೇಸರವಾಗುತ್ತದಂತೆ, ಹಾಗಂತ ಪ್ರತಿಭಟನೆ ನಡೆಸಿ ಸರ್ಕಾರದ ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಿದವರು 'ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘ'ದ ಸದಸ್ಯರು.

ಬೆಳಗಾವಿ: ಹೆಸರಲ್ಲೇನಿದೆ ಎಂದು ನೀವು ಕೇಳುತ್ತೀರಾ, ಖಂಡಿತಾ ಇದೆ,  ಇಲ್ಲಿ ನೋಡಿ, ಇವರನ್ನು ಆ ಹೆಸರಿನಿಂದ ಕರೆದರೆ ಬೇಸರವಾಗುತ್ತದಂತೆ, ಹಾಗಂತ ಪ್ರತಿಭಟನೆ ನಡೆಸಿ ಸರ್ಕಾರದ ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಿದವರು 'ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘ'ದ ಸದಸ್ಯರು.

ನಮ್ಮನ್ನು ಕುಡುಕರು ಎಂದು ಕರೆದು ಅವಮಾನಿಸಬೇಡಿ, 'ಮದ್ಯ ಪ್ರಿಯರು' ಎಂದು ಮರ್ಯಾದೆಯಿಂದ ಕರೆದು ನಮಗೂ ಸ್ವಲ್ಪ ಮರ್ಯಾದೆ ಕೊಡಿ. ಸರ್ಕಾರಕ್ಕೆ ಅತ್ಯಧಿಕ ತೆರಿಗೆ ನೀಡುವ ಗ್ರಾಹಕರು ನಾವು ನಮ್ಮ ಬೇಡಿಕೆಯನ್ನು ಮನ್ನಿಸಿ ಈಡೇರಿಸಿ ಎಂದು ತಮ್ಮ ಬೇಡಿಕೆಗಳನ್ನು ಮಂಡಿಸಲು ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿಯ ಪ್ರತಿಭಟನಾ ಟೆಂಟ್‌ನಲ್ಲಿ ನಿನ್ನೆ ಈ ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. 

'ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘ' (ಕರ್ನಾಟಕ ಮದ್ಯಪ್ರಿಯರ ಸಂಘ) ತಾವೇ ಹೆಸರಿಟ್ಟುಕೊಂಡಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಪತ್ರ ಸಲ್ಲಿಸಿ, 20 ಬೇಡಿಕೆಗಳನ್ನು ಪಟ್ಟಿ ಮಾಡಿದ್ದು, ಮೊದಲನೆಯದು, ಇನ್ನು ಮುಂದೆ ಅವರನ್ನು 'ಕುಡುಕರು' ಎಂದು ಕರೆಯಬಾರದು. ಗೌರವಯುತವಾಗಿ 'ಮದ್ಯ ಪ್ರಿಯರು' ಎಂದು ಕರೆಯಬೇಕೆಂಬುದು ಮುಖ್ಯವಾಗಿತ್ತು.

ಮದ್ಯ ಮಾರಾಟದಿಂದ ಬರುವ ವಾರ್ಷಿಕ ಆದಾಯದಲ್ಲಿ ಶೇ 10 ರಷ್ಟು ಮದ್ಯ ಗ್ರಾಹಕರ ಕಲ್ಯಾಣಕ್ಕಾಗಿ ಮೀಸಲಿಡಬೇಕು, ಮದ್ಯಪಾನ ಮಾಡುವವರ ಪ್ರತಿಭಾವಂತ ಮಕ್ಕಳಿಗೆ ಮಾಸಿಕ ವಿದ್ಯಾರ್ಥಿ ವೇತನ ನೀಡಬೇಕು, ಸಮುದಾಯಕ್ಕೆ ಮಂಡಳಿ ಸ್ಥಾಪಿಸಬೇಕು, 10 ಲಕ್ಷ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಮದ್ಯ ಪ್ರಿಯರು ಕುಡಿತದ ಚಟದಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ, ಅವರ ಕುಟುಂಬದ ಸದಸ್ಯರ ಮದುವೆ ಸಮಾರಂಭಗಳಿಗೆ 2 ಲಕ್ಷ ರೂಪಾಯಿ ನೀಡಬೇಕೆಂದು ಬೇಡಿಕೆ ಮುಂದಿಟ್ಟರು. 

ಇದಲ್ಲದೆ, ಗುಣಮಟ್ಟದ ಆಹಾರ ಮತ್ತು ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛ ಶೌಚಾಲಯದಂತಹ ಹಲವಾರು ಬೇಡಿಕೆಗಳ ಜೊತೆಗೆ ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಸರ್ಕಾರವು ಮದ್ಯದ ಬೆಲೆಯನ್ನು ಹೆಚ್ಚಿಸಬೇಕು. ಮದ್ಯದ ಬಾಟಲಿಗಳ ಮೇಲೆ ಎಂಆರ್‌ಪಿಗಿಂತ ಹೆಚ್ಚಿನ ಹಣ ಕೇಳುವ ಬಾರ್ ಮತ್ತು ಮದ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಇವರು ಮಾಡಿರುವ ಇನ್ನೊಂದು ಮುಖ್ಯ ಬೇಡಿಕೆಯೆಂದರೆ, ಕೆಲವು ಸ್ಥಳಗಳಲ್ಲಿ ದೇವಾಲಯ ಮತ್ತು ಶಾಲಾ ಆವರಣದಲ್ಲಿ ಬಾರ್‌ಗಳನ್ನು ತೆರೆಯಲಾಗಿದೆ. ಈ ಸ್ಥಳಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ತಕ್ಷಣವೇ ಮುಚ್ಚಬೇಕು. ಇದಲ್ಲದೆ, ಮದ್ಯದಂಗಡಿ ತೆರೆಯುವಾಗ ಸೂಕ್ತವಾದ ಭೂಮಿಯನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 

ಸಚಿವ ಸಂತೋಷ್ ಲಾಡ್ ಮನವಿ ಪತ್ರ ಸ್ವೀಕರಿಸಿ, ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT