ಪ್ರತ್ಯಕ್ಷ ದೃಶ್ಯ 
ರಾಜ್ಯ

ಕಾರವಾರ: ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು!

ಹೊಳೆಯಲ್ಲಿ ಈಜಲು ಹೋದವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲಾಗಿರುವಂತಹ  ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಬಳಿಯ ಭೂತದಗುಂಡಿಯಲ್ಲಿ ನಡೆದಿದೆ.

ಕಾರವಾರ: ಹೊಳೆಯಲ್ಲಿ ಈಜಲು ಹೋದವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲಾಗಿರುವಂತಹ  ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಬಳಿಯ ಭೂತದಗುಂಡಿಯಲ್ಲಿ ನಡೆದಿದೆ. 

ಮೃತರು ರಾಮನಬೈಲಿನ ನಿವಾಸಿಗಳು ಎಂದು ತಿಳಿದುಬಂದಿದೆ. 44 ವರ್ಷದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್, 22 ವರ್ಷದ ನಬಿಲ್ ನೂರ್ ಅಹ್ಮದ್‌, 20 ವರ್ಷದ ನಾದಿಯಾ ನೂರ್, 14 ವರ್ಷದ ಉಮರ್ ಸಿದ್ದಿಕ್ ಮತ್ತು 17 ವರ್ಷದ ಮಿಸ್ಬಾ ತಬಸುಮ್ ಮೃತ ದುರ್ದೈವಿಗಳು.

ಭಾನುವಾರ ರಜೆ ಹಿನ್ನೆಲೆಯಲ್ಲಿ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ತೆರಳಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯ ಓರ್ವನ ಮೃತ ದೇಹ ಪತ್ತೆಯಾಗಿದ್ದು ಉಳಿದವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಮೇಲೆ ಇಂದು ತುಂಬಾ 'ಪ್ರಬಲ ದಾಳಿ': ಟ್ರಂಪ್ ವಾರ್ನಿಂಗ್; ಹಿಜ್ಬುಲ್ಲಾ ನಿಶ್ಯಸ್ತ್ರಗೊಳಿಸಿ- ಲೆಬನಾನ್‌ಗೆ ಇಸ್ರೇಲ್ ಎಚ್ಚರಿಕೆ!

'ರಷ್ಯಾ ತೈಲ ಖರೀದಿಗೆ 30 ದಿನಗಳ ಅನುಮತಿ ಕೊಡ್ತೀವಿ'; ಅಮೆರಿಕ ಉದ್ಧಟತನಕ್ಕೆ ಕೆರಳಿದ ಭಾರತ ಹೇಳಿದ್ದೇನು!

ಅಮೆರಿಕಾದ 300 ಮಿಲಿಯನ್ ಡಾಲರ್ ಮೌಲ್ಯದ THAAD ರಡಾರ್ ವ್ಯವಸ್ಥೆ ಇರಾನ್ ದಾಳಿಯಲ್ಲಿ ಧ್ವಂಸ!

TVK ಅಧಿಕಾರಕ್ಕೆ ಬಂದ್ರೆ ಮದುವೆಗೆ 8 ಗ್ರಾಂ ಚಿನ್ನ, ಉಚಿತ ಬಸ್, ತಿಂಗಳಿಗೆ 2,500 ರೂ.; ಭರವಸೆಗಳ ಸರಮಾಲೆಯನ್ನೇ ಘೋಷಿಸಿದ ವಿಜಯ್

'ನನ್ನ ಮೇಲೆ ಏಕೆ ಕೋಪವಿದೆಯೋ ಗೊತ್ತಿಲ್ಲ': ಮಮತಾ ವಿರುದ್ಧ ರಾಷ್ಟ್ರಪತಿ ಮುರ್ಮು ಗರಂ ಆಗಿದ್ದೇಕೆ?

SCROLL FOR NEXT