ರಾಜ್ಯ

ಕೊಳಚೆ ನೀರು ದುರ್ನಾತ: ಮರದಡಿ ಕುಳಿತು ಪಾಠ ಕೇಳುವ ದುಸ್ಥಿತಿಯಲ್ಲಿ ಉ.ಕ ಜಿಲ್ಲೆಯ ಹಳ್ಳೂರು ಸರ್ಕಾರಿ ಶಾಲೆ ಮಕ್ಕಳು!

Sumana Upadhyaya

ಮುಂಡಗೋಡ (ಉತ್ತರ ಕನ್ನಡ): ತಾಲ್ಲೂಕಿನ ಹಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ ಹೊರಗೆ ಮರದಡಿಯಲ್ಲಿ ಶಿಕ್ಷಕರ ಪಾಠ ಕೇಳಬೇಕಾದ ಪರಿಸ್ಥಿತಿಯಿದೆ. ಶಾಲೆಯ ಬಳಿಯಿರುವ ತೆರೆದ ಜಾಗದಿಂದ ದುರ್ವಾಸನೆ ಬರುತ್ತಿದ್ದು, ಭವಿಷ್ಯದ ಪ್ರಜೆಗಳಾದ ಮಕ್ಕಳ ಬದುಕು ಶೋಚನೀಯವಾಗಿದೆ. 

ತರಗತಿಗಳು ನಡೆಯದ ಕಾರಣ ಇಲ್ಲಿ ಶಾಲೆಯನ್ನು ಮುಚ್ಚಲಾಗಿದೆ. "ನಮಗೆ ಸರಿಯಾಗಿ ಉಸಿರಾಡಲು ಸಹ ಸಾಧ್ಯವಾಗುತ್ತಿಲ್ಲ, ಚರಂಡಿಯನ್ನು ಸ್ಥಳಾಂತರ ಮಾಡದೆ ದುರ್ವಾಸನೆ ಹೊಡೆಯುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳದ ಕಾರಣ ತರಗತಿಯೊಳಗೆ ಕುಳಿತುಕೊಳ್ಳಲು ಸಾಧ್ಯವಾಗದೆ ನಾವು ಶಿಕ್ಷಕರಿಗೆ ಹೊರಗಡೆ ಪಾಠ ಮಾಡುವಂತೆ ಮನವಿ ಮಾಡಿಕೊಂಡೆವು ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. 

ಶಾಲೆಯಲ್ಲಿ ನಾಲ್ವರು ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯ ಹಿಂದಿನ ಪ್ರದೇಶ ಮೊಹಮ್ಮದ್ ಘೌಸ್‌ ಎಂಬುವವರಿಗೆ ಸೇರಿದೆ. ಅವರ ಮನೆಯ ಕೊಳಚೆ ನೀರು ಮತ್ತು ಇತರ ತ್ಯಾಜ್ಯವು ಇಲ್ಲಿ ತೆರೆದ ಜಾಗಕ್ಕೆ ಬರುತ್ತದೆ. ನಾವು ಅವರಿಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ ಅವರು ಯಾವುದನ್ನೂ ತಲೆಗೆ ಹಾಕಿಕೊಳ್ಳುತ್ತಿಲ್ಲ. ಈ ಬಗ್ಗೆ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಅವರು ಕೂಡ ಏನೂ ಮಾಡಲಿಲ್ಲ. ನಮಗೆ ಸಾಕಾಗಿ ಹೋಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ನಾಗರಾಜ್ ಕಲಕೊಂಡ್. 

ಈ ಸಮಸ್ಯೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ. ನಾವು ಮೊದಲು 200 ವಿದ್ಯಾರ್ಥಿಗಳನ್ನು ಹೊಂದಿದ್ದೆವು. ಈಗ ನಮ್ಮಲ್ಲಿ 120 ವಿದ್ಯಾರ್ಥಿಗಳಿದ್ದಾರೆ ಎಂದರು. 

ಮುಖ್ಯಾಧಿಕಾರಿ ಚಂದ್ರಶೇಖರ್ ಬಿ, ಶಾಲೆಯ ಹಿಂಭಾಗದಲ್ಲಿರುವ ಖಾಸಗಿ ಬಡಾವಣೆಗೆ ಚರಂಡಿ ಇಲ್ಲ. ಹೆಚ್ಚೆಂದರೆ, ನಾವು ಒಳಚರಂಡಿಯ ನೀರು ಹರಿದುಹೋಗುವ ದಾರಿಯನ್ನು ಬೇರೆಡೆಗೆ ತಿರುಗಿಸಬಹುದು. ಆ ಕೆಲಸವನ್ನು ಶೀಘ್ರದಲ್ಲೇ ಮಾಡುತ್ತೇವೆ ಎಂದರು. 

SCROLL FOR NEXT