ಸಾಂದರ್ಭಿಕ ಚಿತ್ರ 
ರಾಜ್ಯ

ಮಾನವ- ವನ್ಯಜೀವಿ ಸಂಘರ್ಷ: ಪ್ರತ್ಯೇಕ ಪರಿಹಾರ ಮಾರ್ಗಗಳಿಗಾಗಿ ಸರ್ಕಾರ ಹುಡುಕಾಟ!

ಈ ವರ್ಷದ ನವೆಂಬರ್ ತಿಂಗಳೊಂದರಲ್ಲೇ ವನ್ಯಜೀವಿಗಳ ಜೊತೆಗೆ ಘರ್ಷಣೆಗೆ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಏಪ್ರಿಲ್‌ನಿಂದ ನವೆಂಬರ್ 24ರವರೆಗೆ 42 ಮಂದಿ ವನ್ಯಜೀವಿ ದಾಳಿಗೆ ಬಲಿಯಾಗಿದ್ದಾರೆ. ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷಗಳನ್ನು ತಗ್ಗಿಸಲು, ಅರಣ್ಯ ಇಲಾಖೆಯು ಬಹುವಿಧದ ವಿಶಿಷ್ಟ ಪರಿಹಾರಗಳನ್ನು ಹುಡುಕುತ್ತಿದೆ.  

ಬೆಂಗಳೂರು: ಈ ವರ್ಷದ ನವೆಂಬರ್ ತಿಂಗಳೊಂದರಲ್ಲೇ ವನ್ಯಜೀವಿಗಳ ಜೊತೆಗೆ ಘರ್ಷಣೆಗೆ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಏಪ್ರಿಲ್‌ನಿಂದ ನವೆಂಬರ್ 24ರವರೆಗೆ 42 ಮಂದಿ ವನ್ಯಜೀವಿ ದಾಳಿಗೆ ಬಲಿಯಾಗಿದ್ದಾರೆ. ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷಗಳನ್ನು ತಗ್ಗಿಸಲು, ಅರಣ್ಯ ಇಲಾಖೆಯು ಬಹುವಿಧದ ವಿಶಿಷ್ಟ ಪರಿಹಾರಗಳನ್ನು ಹುಡುಕುತ್ತಿದೆ.  

ಬಯಲು ಶೌಚವನ್ನು ಕಡಿಮೆ ಮಾಡುವುದು, ರೇಡಿಯೋ ಕಾಲರಿಂಗ್ ಹುಲಿಗಳು, ಕಾಡು ಬೆಕ್ಕುಗಳನ್ನು ಸ್ಥಳಾಂತರಿಸುವುದು ಮತ್ತು ಕಾಫಿ ಎಸ್ಟೇಟ್‌ಗಳಲ್ಲಿ ವಾಸಿಸುವ ಮರಿ ಆನೆಗಳ ಸಂಖ್ಯೆ ಹೆಚ್ಚಾಗದಂತೆ ನಿಯಂತ್ರಣ ಕ್ರಮ ಒಳಗೊಂಡಿದೆ. ಆದರೆ ತಜ್ಞರು ಎಚ್ಚರಿಕೆಯಿಂದ ಸಲಹೆ ನೀಡಿದ್ದಾರೆ. ಅರಣ್ಯಗಳ ಬಗ್ಗೆ ವಿವರವಾದ ವೈಜ್ಞಾನಿಕ ಅಧ್ಯಯನವನ್ನು ಕೈಗೊಳ್ಳಲು ಮತ್ತು ಪ್ರಾಯೋಗಿಕ ಪರಿಹಾರ ಸೂಚಿಸಲು ತಜ್ಞರು, ವಿಜ್ಞಾನಿಗಳು ಮತ್ತು ನಿವೃತ್ತ ಅರಣ್ಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲು ಇಲಾಖೆ ಪರಿಶೀಲಿಸುತ್ತಿದೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾತನಾಡಿದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು,  ಕರ್ನಾಟಕದಲ್ಲಿ ಹುಲಿ, ಆನೆಗಳು ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಘರ್ಷಣೆಯೂ ಹೆಚ್ಚಾಗಿದೆ. ಸುಮಾರು 200 ಆನೆಗಳು ಕಾಫಿ ಎಸ್ಟೇಟ್ ಗಳಲ್ಲಿ ಶಾಶ್ವತವಾಗಿ ನೆಲೆಸಿದ್ದು, ಅಲಿಯೇ ಮರಿಗಳು ಜನ್ಮ ನೀಡುತ್ತವೆ. ಅವುಗಳು ಕಾಡುಗಳನ್ನು ನೋಡಿಲ್ಲ. ಅವುಗಳ ಸಂಖ್ಯೆ ಹೆಚ್ಚಾಗದಂತೆ ಕ್ರಮ ವಹಿಸಿದ್ದೇವೆ. ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಬೆಳಿಗ್ಗೆ 5 ರಿಂದ 7.30 ರವರೆಗೆ ಮತ್ತು ಸಂಜೆ 5 ರಿಂದ 7 ರವರೆಗೆ ಜನರು ಮನೆಯಿಂದ ಹೊರಗೆ ಅಲೆದಾಡದಂತೆ  ವಿನಂತಿಸಿದ್ದೇವೆ. ಈ ಸಂದರ್ಭದಲ್ಲಿ ಪ್ರಾಣಿಗಳು ಕಾಡುಗಳಿಗೆ ಹೋಗುವ ಸಮಯವಾಗಿದ್ದು, ಜನರು ಅವರೊಂದಿಗೆ ಸಂಪರ್ಕಕ್ಕೆ ಬರುವ ಹೆಚ್ಚಿನ ಅವಕಾಶಗಳಿರುತ್ತವೆ ಎಂದರು. 

ಗ್ರಾಮೀಣ ಜನರು ಇನ್ನೂ ಬಯಲು ಶೌಚಕ್ಕೆ ವನ್ಯಜೀವಿಗಳ ಸಂಘರ್ಷಕ್ಕೆ ಬಲಿಯಾಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. "ಶೌಚಾಲಯಗಳನ್ನು ನಿರ್ಮಿಸಿದರೂ, ಜನರು ಇನ್ನೂ ಬಯಲು ಶೌಚಕ್ಕೆ ಹೋಗಿ, ಅರಣ್ಯದ ಗಡಿಯಲ್ಲಿರುವ ಹೊಲಗಳು ಮತ್ತು ಪೊದೆಗಳಲ್ಲಿ ಕಾಡು ಪ್ರಾಣಿಗಳ ದಾಳಿಗೆ ಒಳಗಾಗುತ್ತಾರೆ ಎಂದು ಅಧಿಕಾರಿ ಹೇಳಿದರು.

ಅರಣ್ಯ ಇಲಾಖೆಯು ಹುಲಿಗಳಿಗೆ ರೇಡಿಯೋ ಕಾಲರ್‌ಗಳನ್ನು ಸಹ ಖರೀದಿಸುತ್ತಿದೆ. "ಸಂಘರ್ಷದಲ್ಲಿ ಬರುವ ಹುಲಿಗಳು,  ಮನುಷ್ಯರನ್ನು ಕೊಲ್ಲುವುದಿಲ್ಲ, ವಯಸ್ಸಾದ ಮತ್ತು ಬಫರ್ ಪ್ರದೇಶಗಳಲ್ಲಿ ವಾಸಿಸುತ್ತವೆ, ಸೆರೆಹಿಡಿಯಲ್ಪಟ್ಟಾಗಲೆಲ್ಲಾ ರೇಡಿಯೊ ಕಾಲರ್ ಮಾಡಲಾಗುತ್ತದೆ. ಆ ಹುಲಿಗಳ ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿ, ಅವುಗಳನ್ನು ರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತದೆ ಅಂದು ಅಧಿಕಾರಿಯೊಬ್ಬರು ತಿಳಿಸಿದರು. 

ಖ್ಯಾತ ಹುಲಿ ತಜ್ಞ ಕೆ ಉಲ್ಲಾಸ್ ಕಾರಂತ್ ಮಾತನಾಡಿ, ಈ ಹಿಂದೆ ಪ್ರತಿಕೂಲ ಪ್ರಕರಣಗಳು ಇದ್ದ ಕಾರಣ ಹುಲಿಗಳನ್ನು ಸ್ಥಳಾಂತರಿಸುವುದು ಸೂಕ್ತವಲ್ಲ, ಜಾನುವಾರುಗಳನ್ನು ಕೊಂದಾಗ ಇಲಾಖೆ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು ಮತ್ತು ಅವರ ಬಳಿ ಸಾಕಷ್ಟು ಹಣವಿದೆ. ಆದರೆ ಅದು ಮನುಷ್ಯನನ್ನು ಕೊಂದರೆ, ಅದನ್ನು ತಕ್ಷಣವೇ ಕೊಲ್ಲಬೇಕು. ಹುಲಿ ಮತ್ತು ಚಿರತೆಗಳನ್ನು ಮನುಷ್ಯರು ಮೂಲೆಗುಂಪು ಮಾಡಿದಾಗ ಅವರೊಂದಿಗೆ ಸಂಘರ್ಷ ಹೆಚ್ಚಾಗುತ್ತದೆ. ಅವರನ್ನು ಸುಮ್ಮನೆ ಬಿಟ್ಟರೆ ಮತ್ತೆ ಕಾಡಿಗೆ ಹೋಗುತ್ತವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT