ರಾಜ್ಯ

ಬೆಂಗಳೂರು: ಜನವರಿ 15ರವರೆಗೆ ಮಾಲ್ ಆಫ್ ಏಷ್ಯಾ ಬಂದ್

Manjula VN

ಬೆಂಗಳೂರು: ಯಲಹಂಕ ಹೋಬಳಿ ಬ್ಯಾಟರಾಯನಪುರದ (ಬಳ್ಳಾರಿ ರಸ್ತೆ) ಮಾಲ್‌ ಆಫ್‌ ಏಷ್ಯಾವನ್ನು ಜನವರಿ 15ರವರೆಗೆ ಬಂದ್‌ ಮಾಡುವಂತೆ ನಗರ ಪೊಲೀಸ್‌ ಆಯುಕ್ತರು ಆದೇಶಿಸಿದ್ದಾರೆ.

ಇತ್ತೀಚೆಗಷ್ಟೇ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಅಕ್ಷರ ಬಳಸದ ಆರೋಪದ ಮೇಲೆ ಫೋನಿಕ್ಸ್‌ ಮಾಲ್ ಆಫ್ ಏಷ್ಯಾ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಾಲ್‌ಗೆ ನುಗ್ಗಿ ಗಲಾಟೆ ನಡೆಸಲಾಗಿತ್ತು.

ಘಟನೆ ಬೆನ್ನಲ್ಲೇ ಸಾರ್ವಜನಿಕ ಶಾಂತಿ ಕಾಪಾಡುವುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಿಸುವ ದೃಷ್ಟಿಯಿಂದ ಮಾಲ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಈ ಆದೇಶ ಹೊರಡಿಸಿದ್ದಾರೆ.

ಈ ನಡುವ ಮಾಲ್ ನಿರ್ಮಾಣದಿಂದ ಸಂಚಾರಕ್ಕೆ ಅನಾನೂಕೂಲ ಆಗಿದೆ ಸಾರ್ವಜನಿಕರು ಪ್ರತಿಭಟನೆ ಸಹ ನಡೆಸಿದ್ದರು.

ಮಾಲ್​ ಭಾಗದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಆಗುತ್ತಿಲ್ಲ. ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು, ಅಂಬುಲೆನ್ಸ್ ಗಳ ಓಡಾಟಕ್ಕೂ ಕಷ್ಟ ಆಗಲಿದೆ ಎಂಬ ದೂರುಗಳ ಮಾಲ್ ವಿರುದ್ಧ ದಾಖಲಾಗಿದ್ದವು. ಸಾಲು ಸಾಲು ದೂರುಗಳು ದಾಖಲಾದ ಹಿನ್ನೆಲೆ ಪೊಲೀಸ್ ಆಯುಕ್ತ ದಯಾನಂದ್ ಅವರೇ ಮಾಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪಾರ್ಕಿಂಗ್ ಸೇರಿದಂತೆ ಕೆಲವು ನ್ಯೂನ್ಯತೆಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮಾಲ್‌ ಆಫ್‌ ಏಷಿಯಾವನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲು ಆದೇಶಿಸಿದ್ದಾರೆ.

ಮಾಲ್‌ ಆಫ್‌ ಏಷ್ಯಾಗೆ 16 ದಿನ ಸಾರ್ವಜನಿಕರ ನಿರ್ಬಂಧ ವಿಧಿಸಿ ಆಯುಕ್ತರು ಪ್ರತಿಬಂಧಕಾಜ್ಞೆ ವಿಧಿಸಿದ್ದಾರೆ. ಆದರೆ, ಮಾಲ್‌ ಸಿಬ್ಬಂದಿ ಹಾಗೂ ಮಳಿಗೆಗಳ ಸಿಬ್ಬಂದಿ ಕಾರ್ಯಚಟುವಟಿಕೆ ನಡೆಸಬಹುದು ಎಂದು ತಿಳಿಸಿದ್ದಾರೆ.

SCROLL FOR NEXT