ರಾಜ್ಯ

2023ಕ್ಕೆ ವಿದಾಯ... ಹೊಸ, ಕನಸು, ಆಶಯದೊಂದಿಗೆ 2024ಕ್ಕೆ ಭರ್ಜರಿ ಸ್ವಾಗತ

Nagaraja AB

ಬೆಂಗಳೂರು: ಆ ಕ್ಷಣ ಬಂದೇ ಬಿಟ್ಟಿತ್ತು. ವಿಶ್ವದಾದ್ಯಂತ ಜನರು 2023ಕ್ಕೆ ಗುಡ್ ಬೈ ಹೇಳಿ. ಹೊಸ ವರ್ಷ 2024ಕ್ಕೆ ಸಡಗರ- ಸಂಭ್ರಮ ಹಾಗೂ ಹೊಸ ಕನಸು, ಆಶಯದೊಂದಿಗೆ ಸ್ವಾಗತಿಸಿದರು. ಬೆಂಗಳೂರು, ನವದೆಹಲಿ, ಮುಂಬೈ, ಕೋಲ್ಕತ್ತಾ, ಸೇರಿದಂತೆ ದೇಶಾದ್ಯಂತ ಜನರು ಚಿತ್ತಾಕರ್ಷಕ ಬಾಣ ಬಿರುಸುಗಳನ್ನು ಸಿಡಿಸಿ, ಮೋಜು-ಮಸ್ತಿಯೊಂದಿಗೆ ಅದ್ದೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಂಡರು. 

ಹೊಸ ವರ್ಷಾಚರಣೆಯ ಪ್ರಮುಖ ಸ್ಥಳವಾದ ಬೆಂಗಳೂರಿನ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌ ರಸ್ತೆ ಜಂಕ್ಷನ್‌ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಸರಿಯಾಗಿ 12 ಗಂಟೆ ಆಗುತ್ತಿದ್ದಂತೆಯೇ ಹರ್ಷೋದ್ಗಾರ ಮುಗಿಲು ಮುಟ್ಟಿತು. ಆಗಸದಲ್ಲಿ ಬಾಣ ಬಿರುಸುಗಳ ಚಿತ್ತಾರದೊಂದಿಗೆ  ಸಹಸ್ರಾರು ಮಂದಿ ಒಮ್ಮೆಲೆ 'ಹ್ಯಾಪಿ ನ್ಯೂ ಇಯರ್‌' ಎಂದು ಘೋಷಣೆ ಕೂಗಿ 2023ಕ್ಕೆ ವಿದಾಯ ಹೇಳಿದರು.

ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹೊಸ ವರ್ಷಾಚರಣೆ ಜೋರಾಗಿ ಸಾಗಿತು. ಹೋಟೆಲ್‌, ಪಬ್‌, ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಿವಿಗಡಚಿಕ್ಕುವ ಸಂಗೀತದ ಅಬ್ಬರದಲ್ಲಿ ಯುವ ಜನರು ಕುಣಿದು ಕುಪ್ಪಳಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು, ಮಹಿಳೆಯರು ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡರು.

ಹೊಸ ವರ್ಷಕ್ಕೆ ಮುನ್ನ ತಮಿಳುನಾಡಿನ ಮರೀನಾದ ಕಾಮರಾಜರ ಸಲೈನಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು

ಉತ್ತರ ಪ್ರದೇಶದ ಲಖನೌದ ಹಜರತ್‌ಗಂಜ್‌ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿದ್ದ ಜಮಾಯಿಸಿದ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು

SCROLL FOR NEXT