ರಾಜ್ಯ

ಶೇ.50 ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ: ಎರಡೇ ದಿನದಲ್ಲಿ 13.81 ಕೋಟಿ ದಂಡ ವಸೂಲಿ!

Lingaraj Badiger

ಬೆಂಗಳೂರು: ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ರಾಜ್ಯ ಸಾರಿಗೆ ಇಲಾಖೆ ಘೋಷಿಸಿದ ಶೇ.50 ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟ್ರಾಫಿಕ್ ಪೊಲೀಸ್ ಖಜಾನೆಗೆ ಕೋಟಿ ಕೋಟಿ ರೂಪಾಯಿ ಹರಿದು ಬರುತ್ತಿದೆ.

ಸಾವಿರಾರು ರೂಪಾಯಿ ದಂಡ ಅರ್ಧದಷ್ಟು ಕಡಿಮೆ ಆಗುತ್ತೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಲು ಇಂದು ಸಹ ಮುಗಿಬಿದ್ದಿದ್ದು, ಒಟ್ಟಾರೆ ಕಳೆದ ಎರಡು ದಿನಗಳಲ್ಲಿ 13.81 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ.

ಶೇ.50 ರಷ್ಟು ರಿಯಾಯಿತಿ ಘೋಷಿಸಿದ ಮೊದಲ ದಿನ ನಿನ್ನೆ 5 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಎರಡನೇ ದಿನವಾದ ಇಂದು ಸಂಜೆ 5 ಗಂಟೆ ವೇಳೆ 2,52,520 ಪ್ರಕರಣಗಳಲ್ಲಿ 6.80 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಇದರೊಂದಿಗೆ ಒಟ್ಟು 4.77 ಲಕ್ಷ ಕೇಸ್ ಗಳಲ್ಲಿ 13 ಕೋಟಿ 81 ಲಕ್ಷ 13 ಸಾವಿರದ 621 ರೂಪಾಯಿ ದಂಡ ವಸೂಲಿಯಾಗಿದೆ.

SCROLL FOR NEXT