ರಾಜ್ಯ

ಮುಂದಿನ 25 ವರ್ಷಗಳ ಅಮೃತ ಕಾಲಕ್ಕೆ ಈ ಬಜೆಟ್ ಅಡಿಪಾಯವಾಗಿದೆ: ಕೇಂದ್ರ ಸಚಿವ ಪಿಯೂಷ್ ಗೋಯಲ್

Sumana Upadhyaya

ಬೆಂಗಳೂರು: ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಈ ವರ್ಷ ಮಂಡಿಸಿದ ಬಜೆಟ್ ಮುಂದಿನ 25 ವರ್ಷಗಳಿಗೆ ಅಡಿಪಾಯ ಹಾಕಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. 

ಭಾರತೀಯ ಜನತಾ ಪಕ್ಷ (BJP) ನಿನ್ನೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಅಮೃತ ಕಾಲ ಬಜೆಟ್’ ಎಂಬ ಸಂವಾದಾತ್ಮಕ ಸಭೆಯಲ್ಲಿ ಅವರು ಮಾತನಾಡಿದರು, ಇದರಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಜನರು ಭಾಗವಹಿಸಿದ್ದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಸ್ತವಿಕ ಬಜೆಟ್‌ಗೆ ಒತ್ತು ನೀಡಿದೆ, ಹಿಂದಿನ ಆಡಳಿತದಲ್ಲಿ ಜನರನ್ನು ಮೆಚ್ಚಿಸಲು ಉಚಿತ ಘೋಷಣೆಗಳು ಮತ್ತು ಹುಸಿ ಯೋಜನೆಗಳು ತುಂಬಿಕೊಂಡು ಅವು ಈಡೇರುವಲ್ಲಿ ವಿಫಲವಾಗಿದ್ದವು ಎಂದರು. 

"ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಚಿವರೊಂದಿಗಿನ ತಮ್ಮ ಮೊದಲ ಸಭೆಯಲ್ಲಿ ಚುನಾವಣೆ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಎಲ್ಲರಿಗೂ ನಿರ್ದೇಶನ ನೀಡಿದರು. ಅವರು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸಲು ಮತ್ತು ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ಯುವ ನೀತಿಗಳನ್ನು ಹೊರತರುವಂತೆ ಸೂಚಿಸಿದ್ದರು. ಕಳೆದ 9 ವರ್ಷಗಳಲ್ಲಿ ಬಜೆಟ್ ನ್ನು ಅದೇ ರೀತಿ ರೂಪಿಸಲಾಗಿದೆ ಎಂದರು.

ಬಜೆಟ್‌ನಲ್ಲಿ ಆರೋಗ್ಯಕ್ಕೆ ಮೀಸಲಿಟ್ಟಿರುವುದು ಕಡಿಮೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪಿಯೂಷ್, “2014 ರಿಂದ 11,000 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಜನೌಷದಿ ಕೇಂದ್ರಗಳ ಮೂಲಕ ಸ್ಯಾನಿಟರಿ ಪ್ಯಾಡ್‌ಗಳನ್ನು 1 ರೂಪಾಯಿಗೆ ನೀಡಲಾಗುತ್ತಿದೆ. ಈ ಕ್ರಮವು ಹೆಣ್ಣುಮಕ್ಕಳಿಗೆ ಅತ್ಯಂತ ವರದಾನವಾಗಿದೆ. ಇತ್ತೀಚೆದೆ ಜನರಲ್ಲಿ ನೈರ್ಮಲ್ಯ ಮನೋಭಾವ ಹೆಚ್ಚಾಗಿದ್ದು, ಗರ್ಭಕಂಠದ ಕ್ಯಾನ್ಸರ್‌ನಲ್ಲಿ ಸಾಕಷ್ಟು ಇಳಿಕೆಯಾಗಿದೆ. ಭಾರತದಲ್ಲಿನ ಅರ್ಧದಷ್ಟು ರೋಗಗಳು ನೀರಿನಿಂದ ಹರಡುತ್ತವೆ. ನಾವು ಎಲ್ಲಾ ಹಳ್ಳಿಗಳಿಗೆ ಶುದ್ಧ ನೀರನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದರು. 

ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಸಾಕಷ್ಟು ಹೂಡಿಕೆ ಮಾಡಿದೆ. ಮುಂಬರುವ ವರ್ಷಗಳಲ್ಲಿ ಈ ಬಜೆಟ್ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ರೂಪಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT