ರಾಜ್ಯ

ಏರ್ ಶೋ 2023: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ, ರಾತ್ರಿ ರಾಜಭವನದಲ್ಲೇ ವಾಸ್ತವ್ಯ

Srinivasamurthy VN

ಬೆಂಗಳೂರು: 2023ರ ಬೆಂಗಳೂರು ಏರ್ ಶೋ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ. 

ಭಾನುವಾರ ಸಂಜೆ ತಮ್ಮ ವಿಶೇಷ ವಿಮಾನದಲ್ಲಿ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ತ್, ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ ರಾಜಭವನದಲ್ಲೇ ವಾಸ್ತವ್ಯ ಹೂಡಲಿದ್ದು, ನಾಳೆ ಬೆಳಗ್ಗೆ 8:50ಕ್ಕೆ ರಾಜಭವನದಿಂದ ಪ್ರಧಾನಿ ನರೇಂದ್ರ ಮೋದಿ ಹೊರಡಲಿದ್ದಾರೆ. ಮೇಖ್ರಿ ಸರ್ಕಲ್ ಬಳಿಕ HQTC ಹೆಲಿಪ್ಯಾಡ್‌ಗೆ ಮೋದಿ ತೆರಳಲಿದ್ದು, ಅಲ್ಲಿಂದ MI-17 ಹೆಲಿಕಾಪ್ಟರ್ ಮೂಲಕ ಯಲಹಂಕ ಏರ್‌ಪೋರ್ಸ್ ತಲುಪಲಿದ್ದಾರೆ.

ನಾಳೆ ಬೆಳಗ್ಗೆ 9:30 ಕ್ಕೆ ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏರ್ ಶೋ ಗೆ ಚಾಲನೆ ನೀಡಲಿದ್ದು, 9.30ರಿಂದ 11.30ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದಾದ ಬಳಿಕ ಮೋದಿ, ಏರೋ ಇಂಡಿಯಾದ ವೈಮಾನಿಕ ಪ್ರದರ್ಶನ ವೀಕ್ಷಿಸಲಿದ್ದಾರೆ. 11:30ಕ್ಕೆ ಏರ್ ಶೋ ಸ್ಥಳದಿಂದ ಹೊರಟು, ಯಲಹಂಕ ಏರ್‌ಫೋರ್ಸ್‌ಗೆ ಆಗಮಿಸಲಿರುವ ನರೇಂದ್ರ ಮೋದಿ ಅಲ್ಲಿಂದ ನೇರವಾಗಿ IAF BBJ ವಿಮಾನದಲ್ಲಿ ತ್ರಿಪುರಾಗೆ ತೆರಳಲಿದ್ದಾರೆ.

SCROLL FOR NEXT