ಸಂಗ್ರಹ ಚಿತ್ರ 
ರಾಜ್ಯ

ಸರ್ಕಾರ ನಾಗರಿಕರ ಭೂಮಿ ಲೂಟಿಕೋರನ ರೀತಿ ಸರ್ಕಾರ ವರ್ತಿಸಲಾಗದು: ಹೈಕೋರ್ಟ್‌

ಕೈಗಾರಿಕೆ ಅಭಿವೃದ್ಧಿಯ ದೃಷ್ಟಿಯಿಂದ ಒಂದೂವರೆ ದಶಕದ ಹಿಂದೆ ಖಾಸಗಿಯವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದರೂ ಭೂಮಿಯ ಮಾಲೀಕರಿಗೆ ಪರಿಹಾರ ವಿತರಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಜನರ ಭೂಮಿಯ ಲೂಟಿಕೋರನ ರೀತಿ ಸರ್ಕಾರ ವರ್ತಿಸಲಾಗದು” ಎಂದು ಹೇಳಿದೆ.

ಬೆಂಗಳೂರು: ಕೈಗಾರಿಕೆ ಅಭಿವೃದ್ಧಿಯ ದೃಷ್ಟಿಯಿಂದ ಒಂದೂವರೆ ದಶಕದ ಹಿಂದೆ ಖಾಸಗಿಯವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದರೂ ಭೂಮಿಯ ಮಾಲೀಕರಿಗೆ ಪರಿಹಾರ ವಿತರಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಜನರ ಭೂಮಿಯ ಲೂಟಿಕೋರನ ರೀತಿ ಸರ್ಕಾರ ವರ್ತಿಸಲಾಗದು” ಎಂದು ಹೇಳಿದೆ.

ಬೆಂಗಳೂರಿನ ಜೆ ಪಿ ನಗರದ ನಿವಾಸಿಗಳಾದ ಎಂ ವಿ ಗುರುಪ್ರಸಾದ್‌ ಮತ್ತು ನಂದಿನಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ದವ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

“ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ಅದರ ಅಧಿಕಾರಿಗಳ ನಡತೆಯು ನ್ಯಾಯಸಮ್ಮತ ಮಾನದಂಡಕ್ಕೆ ಅನುಗುಣವಾಗಿಲ್ಲ. ಈ ನಡವಳಿಕೆಯು ಸಂವಿಧಾನಕ್ಕೆ ವಿರುದ್ಧವಾಗಿ ಊಳಿಗಮಾನ್ಯ ಧೋರಣೆಯ ಸಂಕೋಲೆಗಳನ್ನು ಬಲಪಡಿಸುವಂತಿದೆ” ಎಂದು ಪೀಠವು ಆದೇಶದಲ್ಲಿ ಕಿಡಿಕಾರಿದೆ.

“ಅರ್ಜಿದಾರರು ಭೂಮಿ ಮಾಲೀಕತ್ವವನ್ನು ತಾವು ಹೊಂದಿರುವುದಾಗಿ ತಿಳಿಸಿದ್ದರೂ ಕೆಐಎಡಿಬಿಯು ಭೂಮಿ ಮಾರಾಟ ಮಾಡಿರುವವರ ಹೆಸರನ್ನು ಅಧಿಸೂಚನೆಯಲ್ಲಿ ಪ್ರಕಟಿಸಿತ್ತು. ಆನಂತರ ಸಾಕಷ್ಟು ಪ್ರಯತ್ನದ ಬಳಿಕ ಭೂಮಿ ಸ್ವಾಧೀನಪಡಿಸಿಕೊಂಡ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಿ ಅರ್ಜಿದಾರರ ಹೆಸರು ಸೇರಿಸಿ, ತಿದ್ದುಪಡಿ ಅಧಿಸೂಚನೆ ಪ್ರಕಟಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

“ಅರ್ಜಿದಾರರ ಭೂಮಿಯನ್ನು ವಶಪಡಿಸಿಕೊಂಡು ಅದನ್ನು ಕೈಗಾರಿಕಾ ಪ್ಲ್ಯಾಟ್‌ಗಳನ್ನಾಗಿ ಅಭಿವೃದ್ಧಿಪಡಿಸಿ ಶೇ.50ರಷ್ಟು ರಿಯಾಯತಿ ನೀಡಿ ಅದನ್ನು ಹಂಚಿಕೆ ಮಾಡುವ ಮೂಲಕ 7.5 ಕೋಟಿ ರೂಪಾಯಿಗಳನ್ನು ಕೆಐಎಡಿಬಿ ಸಂಗ್ರಹಿಸಿದೆ. ಇಷ್ಟಾದರೂ 15 ವರ್ಷಗಳು ಕಳೆದರೂ ಏತಕ್ಕಾಗಿ ಪರಿಹಾರವನ್ನು ತಡೆಹಿಡಿಯಲಾಗಿದೆ ಎಂಬುದರ ಕುರಿತು ನಂಬಲರ್ಹ ವಿವರಣೆಯನ್ನು ಕೆಐಎಡಿಬಿ ನೀಡಿಲ್ಲ” ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

ಒಂದೂವರೆ ದಶಕವಾದರೂ ಪರಿಹಾರ ಪಾವತಿಸದಿರುವುದರಿಂದ ಕೆಐಎಡಿಬಿಯು ಭೂ ಆರ್ಜನೆಯಲ್ಲಿ ಯೋಗ್ಯ ಪರಿಹಾರ ಮತ್ತು ಪಾರದರ್ಶಕತೆ ಹಾಗೂ ಪುನರ್ವಸತಿ ಮತ್ತು ಪುನರ್‌ವ್ಯವಸ್ಥೆ ಅಧಿಕಾರ ಅಧಿನಿಯಮ 2013ರ ಅಡಿ ಪರಿಹಾರದ ಜೊತೆಗೆ ಹೆಚ್ಚಿನ ಪರಿಹಾರ (ಸೊಲಾಟಿಯಮ್)‌, ಬಡ್ಡಿ ಮತ್ತು ಇತರೆ ಲಾಭವನ್ನು ಅರ್ಜಿದಾರರಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

2013ಕ್ಕೂ ಮುನ್ನ ವಶಪಡಿಸಿಕೊಂಡಿರುವ ಭೂಮಿಗೆ 2013ರ ಕಾಯಿದೆ ಅಡಿ ಪರಿಹಾರ ಪಾವತಿಸುವ ಕುರಿತಾದ ಮೇಲ್ಮನವಿಯು ಪ್ರತ್ಯೇಕ ಪ್ರಕರಣದಲ್ಲಿ ವಿಭಾಗೀಯ ಪೀಠದಲ್ಲಿ ಇನ್ನಷ್ಟೇ ನಿರ್ಧಾರವಾಗಬೇಕಿರುವುದರಿಂದ 2013ರ ಕಾಯಿದೆ ಅಡಿ ಶೇ.50ರಷ್ಟು ಪರಿಹಾರವನ್ನು ಪುನರ್‌ ನಿಗದಿ ಮಾಡಿ, ಆ ಹಣವನ್ನು ಎಂಟು ವಾರಗಳಲ್ಲಿ ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಒಂದೊಮ್ಮೆ ಮೇಲ್ಮನವಿ ಇತ್ಯರ್ಥಪಡಿಸಿ 2013ರ ಕಾಯಿದೆ ಅಡಿ ಪರಿಹಾರ ವಿತರಿಸಬೇಕು ಎಂದು ವಿಭಾಗೀಯ ಪೀಠ ಹೇಳಿದರೆ ಈಗ ಪಾವತಿಸುವ ಶೇ.50ರಷ್ಟು ಹಣವನ್ನು ತೆಗೆದು ಬಾಕಿ ಹಣವನ್ನು ಪಾವತಿಸಬೇಕು. ಇದಲ್ಲದೇ ಕೆಐಎಡಿಬಿಯು ಒಟ್ಟಾರೆ ಮೊತ್ತಕ್ಕೆ ವಾರ್ಷಿಕ ಶೇ.12ರ ಬಡ್ಡಿ ಪಾವತಿಸಬೇಕು ಎಂದೂ ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.  

ಪ್ರಕರಣದ ಹಿನ್ನೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜೊನ್ನಹಳ್ಳಿಯಲ್ಲಿ 2006 ಡಿಸೆಂಬರ್‌ ಮತ್ತು 2007ರ ಜನವರಿಯಲ್ಲಿ ಅರ್ಜಿದಾರರು ಸುಮಾರು ಆರು ಎಕರೆ ಭೂಮಿ ಖರೀದಿಸಿದ್ದರು. 2007ರ ಮೇನಲ್ಲಿ ಈ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡಿತ್ತು.

2018ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದ ಅರ್ಜಿದಾರರು ಭೂಮಿ ವಶಪಡಿಸಿಕೊಂಡಿರುವುದು ಮತ್ತು ಅದಕ್ಕೆ ಪರಿಹಾರ ಪಾವತಿಸದಿರುವುದನ್ನು ಪ್ರಶ್ನಿಸಿದ್ದರು. ಇದಕ್ಕೆ 2021ರಲ್ಲಿ ಆಕ್ಷೇಪಣೆ ಸಲ್ಲಿಸಿದ್ದ ಕೆಐಎಡಿಬಿಯು ಪರಿಹಾರ ಪಾವತಿಸಲು ವಿಳಂಬವಾಗಿದ್ದು, ತಕ್ಷಣ ಪರಿಹಾರ ಪಾವತಿ ಮಾಡಲಾಗುವುದು ಎಂದು ಹೇಳಿತ್ತು. ಅಲ್ಲದೇ, ವಶಪಡಿಸಿಕೊಂಡಿರುವ ಆಕ್ಷೇಪಾರ್ಹ ಭೂಮಿಯನ್ನು ಕೈಗಾರಿಕಾ ಪ್ಲ್ಯಾಟ್‌ಗಳನ್ನಾಗಿಸಿ, ಅದನ್ನು 2019ರಲ್ಲಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT