ರಾಜ್ಯ

ಜೋಳದ ಕೊರತೆ: 2 ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದ ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ 

Ramyashree GN

ವಿಜಯಪುರ: ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾದ ಜೋಳದ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (RARS) ಹೆಚ್ಚು ಇಳುವರಿ ನೀಡುವ ಎರಡು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. BGV-44 ಮತ್ತು CSV-29 ಎಂದು ಇವುಗಳನ್ನು ಹೆಸರಿಸಲಾಗಿದ್ದು, ಈ ಎರಡು ತಳಿಗಳು ಜೋಳದ ಉತ್ಪಾದನೆಗೆ ಉತ್ತೇಜನ ನೀಡುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸೀಮಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಹೊಸ ತಳಿಗಳ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಮತ್ತು ಸಾಮಾನ್ಯಕ್ಕಿಂತ ಕನಿಷ್ಠ ಶೇ 25 ರಷ್ಟು ಹೆಚ್ಚು ಧಾನ್ಯವನ್ನು ಇವು ನೀಡಬಹುದು ಎಂದು ಮುಖ್ಯ ವಿಜ್ಞಾನಿ ಹಾಗೂ ಜೋಳ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯಸ್ಥ ಎಸ್.ಎಸ್. ಕರ್ಭಂಟನಾಳ್ ತಿಳಿಸಿದ್ದಾರೆ. 

'BGV-44 ರ ಬಗ್ಗೆ, ಹೆಚ್ಚು ತೇವಾಂಶವನ್ನು ಹೊಂದಿರುವ ಕಪ್ಪು ಹತ್ತಿ ಮಣ್ಣಿಗೆ ಇದು ಸೂಕ್ತವಾಗಿರುತ್ತದೆ. CSV-29 ವಿಧದ ಗುಣಮಟ್ಟವೂ ಇದೇ ಆಗಿದೆ. ಹಿಂದಿನ M-35-1 ಗಿಂತ ಈ ಪ್ರಭೇದಗಳು ಉತ್ತಮವಾಗಿವೆ. ಹೊಸ ತಳಿಯು 8-10 ಕ್ವಿಂಟಾಲ್ ಧಾನ್ಯಗಳು ಮತ್ತು 22-25 ಕ್ವಿಂಟಾಲ್ ಮೇವು ನೀಡಬಹುದು. ಮೇವು ಹೆಚ್ಚು ತೇವಾಂಶವನ್ನು ಹೊಂದಿರುವ ಕಾರಣ, ಇದು ಜಾನುವಾರುಗಳಿಗೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ. ಹೆಚ್ಚಿನ ಇಳುವರಿ ನೀಡುವುದರ ಜೊತೆಗೆ, ತಳಿಗಳು ಕೀಟ-ನಿರೋಧಕವೂ ಆಗಿವೆ' ಎಂದು ಅವರು ಹೇಳಿದರು.

ಸದ್ಯ, ಹಿಟ್ಟಿನಹಳ್ಳಿ ಗ್ರಾಮದ ಬಳಿ ಇರುವ ಕೇಂದ್ರದಲ್ಲಿ ತಳಿಗಳು ಲಭ್ಯವಿದೆ. 

CSV-29 ತಳಿಯನ್ನು ಬೆಳೆಸಿರುವ ರೈತ ಸಿದ್ದರಾಮಪ್ಪ ನಾವಡಗಿ ಮಾತನಾಡಿ, ಸಾಂಪ್ರದಾಯಿಕ ತಳಿಗಿಂತ ಹೆಚ್ಚು ಕಾಳುಗಳನ್ನು ಈ ಗಿಡ ನೀಡುತ್ತದೆ. ಈ ತಳಿಯಿಂದ ಹೆಚ್ಚಿನ ಇಳುವರಿ ಪಡೆಯುವ ಭರವಸೆ ನನಗಿದೆ ಎಂದರು.

SCROLL FOR NEXT