ರಾಜ್ಯ

ಭಾರತ ರಾಮ ಭಕ್ತರಿಗೆ ಮಾತ್ರ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್

Lingaraj Badiger

ಕೊಪ್ಪಳ: ಟಿಪ್ಪು ಸುಲ್ತಾನ್ ವಂಶಸ್ಥರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲ್ ಅವರು, "ನಾವು ಶ್ರೀರಾಮ ಮತ್ತು ಹನುಮಂತನ ಭಕ್ತರು. ನಮ್ಮದು ಟಿಪ್ಪುವಿನ ಸಂತತಿಯಲ್ಲ. ಅವರ ವಂಶಸ್ಥರನ್ನು ನಾವು ವಾಪಸ್ ಕಳುಹಿಸುತ್ತೇವೆ ಎಂದರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಕಟೀಲ್, ಈ ರಾಜ್ಯಕ್ಕೆ ಟಿಪ್ಪು ಸಂತಾನ ಬೇಕಾ? ಅಥವಾ ಹನುಮಂತ, ಶ್ರೀರಾಮನ ಭಕ್ತರು ಬೇಕಾ? ಎಂಬ ಯೋಚನೆ ಮಾಡಿ ಯಲಬುರ್ಗಾ ಜನರನ್ನು ಕೇಳುತ್ತೇನೆ ಎಂದರು.

ನಾನು ಹನುಮಂತನ ನೆಲದಲ್ಲಿ ಸವಾಲು ಹಾಕುತ್ತೇನೆ -- ಟಿಪ್ಪುವನ್ನು ಪ್ರೀತಿಸುವ ಜನರು ಇಲ್ಲಿ ಉಳಿಯಬಾರದು. ಭಗವಾನ್ ರಾಮನ ಭಜನೆಗಳನ್ನು ಹಾಡುವ ಮತ್ತು ಭಗವಾನ್ ಹನುಮಂತನನ್ನು ಆಚರಿಸುವ ಜನರು ಮಾತ್ರ ಇಲ್ಲಿ ವಾಸಿಸಬೇಕು ಎಂದು ಕಟೀಲ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿಗೆ ಹನುಮಮಾಲೆ, ದತ್ತಮಾಲೆ ಮೇಲೆ ನಂಬಿಕೆ ಇದೆ. ಆದರೆ ಕಾಂಗ್ರೆಸ್‌ಗೆ ಟಿಪ್ಪು ಮಾಲೆ ಮೇಲೆ ನಂಬಿಕೆ ಇದೆ. ರಾಜ್ಯದ ಬೇರೆಡೆಯಂತೆ ಯಲಬುರ್ಗಾ ಕ್ಷೇತ್ರವೂ ಕಾಂಗ್ರೆಸ್ ಮುಕ್ತ ಆಗುತ್ತದೆ ಎಂದು ಗುಡುಗಿದರು.

ಈ ಹಿಂದೆ ರಸ್ತೆ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ. ಆದರೆ ಲವ್ ಜಿಹಾದ್‌ನಂತಹ ದೊಡ್ಡ ವಿಷಯಗಳ ಬಗ್ಗೆ ಮಾತನಾಡಿ ಎಂದು ಹೇಳುವ ಮೂಲಕ ಕಟೀಲ್ ಹೊಸ ವಿವಾದವನ್ನು ಹುಟ್ಟುಹಾಕಿದ್ದರು.

SCROLL FOR NEXT