ರಾಜ್ಯ

ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ರೋಹಿಣಿ ಪತಿ ದೂರು: ಅಳಿಸಿದ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ ಎಂದು ರೂಪಾ ಟಾಂಗ್!

Sumana Upadhyaya

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ ರೂಪಾ ಅವರ ವೈಯಕ್ತಿಕ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳ ಮುಂದೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಅವರ ಪತಿ ಸುಧೀರ್ ರೆಡ್ಡಿ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು.ಇದನ್ನು ಇಲ್ಲಿಗೇ ಬಿಡುವುದಿಲ್ಲ, ತೇಜೋವಧೆ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಕೂಡ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಅಷ್ಟಾಗಿ ಇಂದು ನೇರವಾಗಿ ಬೆಂಗಳೂರಿನ ಬಾಗಲಗುಂಟೆಯ ಪೊಲೀಸ್ ಠಾಣೆಗೆ ತೆರಳಿ ರೋಹಿಣಿ ಸಿಂಧೂರಿ ಪತಿ ರೂಪಾ ವಿರುದ್ಧ ದೂರು ದಾಖಲಿಸಿದ್ದಾರೆ. ಇಂದು ಮಾಧ್ಯಮದವರು ಮನೆ ಮುಂದೆ ಬಂದು ಪ್ರಶ್ನೆಗಳನ್ನು ಕೇಳಿದ್ರೆ ಉತ್ತರ ಹೇಳಲು ಆಗಲ್ಲ. ಎಲ್ಲೆಂದರಲ್ಲಿ ಆ ಬಗ್ಗೆ ಮಾತನಾಡೋದು ಬೇಡ. ಶೀಘ್ರದಲ್ಲಿಯೇ ಇದಕ್ಕೆಲ್ಲಾ ಉತ್ತರ ಕೊಡುವೆ ಎಂದ ರೋಹಿಣಿ ಸಿಂಧೂರಿ, ಈ ರೀತಿ ಮಾತನಾಡೋದು ಸರಿಯಲ್ಲ. ಈ ಎಲ್ಲಾ ವಿಷಯಗಳನ್ನು ಸರ್ಕಾರದ ಮುಂದೆ ತರಬೇಕು. ಮಾತನಾಡುವ ವೇದಿಕೆಯೂ ಇದಲ್ಲ ಎಂದು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

ಈ ರೀತಿ ವೈಯಕ್ತಿಕ ತೇಜೋವಧೆ ಮಾಡೋದು ತಪ್ಪು. ಕೆಲಸದ ಬಗ್ಗೆ ಏನಾದ್ರೂ ಮಾತನಾಡಿಲ್ಲ. ಇದನ್ನೆಲ್ಲಾ ಸುಮ್ನೆ ಬಿಡಲ್ಲ ಎಂದು ಡಿ ರೂಪಾ ಅವರಿಗೆ ಎಚ್ಚರಿಕೆ ನೀಡಿದರು.

ಡಿ ರೂಪಾ ವಿರುದ್ಧ ದೂರು ದಾಖಲು: ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಡಿ ರೂಪಾ ವಿರುದ್ಧ ಕಾನೂನು ಸಮರ ನಡೆಸುತ್ತೇವೆ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ  ಹೇಳಿದ್ದರು. ತಮ್ಮ ಹೇಳಿಕೆಯಂತೆ ಬಾಗಲಗುಂಟೆ ಪೊಲೀಸ್ ಠಾಣೆಗೆ ತೆರಳಿ ಸುಧೀರ್ ರೆಡ್ಡಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಏನೆಲ್ಲಾ ಉಲ್ಲೇಖಿಸಲಾಗಿದೆ ಎಂಬುದರ ಮಾಹಿತಿ ಮಾಧ್ಯಮಗಳಿಗೆ ಲಭಿಸಿಲ್ಲ. 

ರೋಹಿಣಿ ಸಿಂಧೂರಿಗೆ ಮತ್ತೆ ರೂಪಾ ಟಾಂಗ್: Get well soon ಅಂತ ಹೇಳಿದ್ದಾರಲ್ಲ ಇವತ್ತು ರೋಹಿಣಿ ಸಿಂಧೂರಿ. ಅವರ ಡಿಲಿಟೆಡ್ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ? ನಂಬರ್ ಅವರದ್ದೇ ಅಲ್ವಾ? ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ ಎಂದು ಪ್ರಶ್ನೆ ಮಾಡಿರುವ ಡಿ ರೂಪಾ ಸ್ಕ್ರೀನ್​ಶಾಟ್ ಹಂಚಿಕೊಂಡಿದ್ದಾರೆ.

SCROLL FOR NEXT