ರಾಖಿ ಸಾವಂತ್ 
ರಾಜ್ಯ

'ನಾನೂ ಕೂಡ ಫ್ರಿಡ್ಜ್ ನಲ್ಲಿ ಹೆಣವಾಗಬೇಕಿತ್ತು': ಮೈಸೂರು ಕೋರ್ಟ್ ಗೆ ರಾಖಿ ಸಾವಂತ್ ಹಾಜರು; ಪತಿಗೆ ಜಾಮೀನು ಸಿಗಬಾರದು ಎಂದ ಬಾಲಿವುಡ್ ನಟಿ

ಕೌಟುಂಬಿಕ ಕಲಹ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಖಿ ಸಾವಂತ್ ಇಂದು ಮೈಸೂರಿನ ಕೋರ್ಟ್ ಗೆ ಹಾಜರಾಗಿದ್ದು, ಈ ವೇಳೆ ನಾನೂ ಕೂಡ ಫ್ರಿಡ್ಜ್ ನಲ್ಲಿ ಹೆಣವಾಗಬೇಕಿತ್ತು.. ಆದರೆ ದೇವದ ದಯೆಯಿಂದ ಪಾರಾದೆ ಎಂದು ಹೇಳಿಕೆ ನೀಡಿದ್ದಾರೆ.

ಮೈಸೂರು: ಕೌಟುಂಬಿಕ ಕಲಹ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಖಿ ಸಾವಂತ್ ಇಂದು ಮೈಸೂರಿನ ಕೋರ್ಟ್ ಗೆ ಹಾಜರಾಗಿದ್ದು, ಈ ವೇಳೆ ನಾನೂ ಕೂಡ ಫ್ರಿಡ್ಜ್ ನಲ್ಲಿ ಹೆಣವಾಗಬೇಕಿತ್ತು.. ಆದರೆ ದೇವದ ದಯೆಯಿಂದ ಪಾರಾದೆ ಎಂದು ಹೇಳಿಕೆ ನೀಡಿದ್ದಾರೆ.

ಪತಿ ಅದಿಲ್ ಜೊತೆಗಿನ ವಿವಾಹ ಮತ್ತು ಆ ಬಳಿಕದ ವಿವಾದಗಳಿಂದ ಸುದ್ದಿಗೆ ಗ್ರಾಸವಾಗುತ್ತಿರುವ ನಟಿ ರಾಖಿ ಸಾವಂತ್ ಇಂದು ಮೈಸೂರು ಕೋರ್ಟ್ ಗೆ ಹಾಜರಾದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ನನ್ನ ಪತಿಯನ್ನು (Adil) ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ‌. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು.. ಆದಿಲ್ ನನ್ನನ್ನು ಯಾಕೆ ಪ್ರೀತಿಸಿದ ಎಂದು ಈಗ ಗೊತ್ತಾಗಿದೆ. ಅವನ ಉದ್ದೇಶ ನನ್ನನ್ನು ಕೊಂದು ನನ್ನ ಹೆಣವನ್ನು ಫ್ರಿಡ್ಜ್ ನಲ್ಲಿ ತುಂಬುವುದೇ ಆಗಿತ್ತು. ದೇವರು ದೊಡ್ಡವನು ನನ್ನನ್ನು ಹಾಗೆ ಆಗಲು ಬಿಡಲಿಲ್ಲ. ಹಾಗಾಗಿ ನಾನು ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ. ನಾನು ಇಂದು ಬೆಳಿಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ‌. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ 1.65 ಕೋಟಿ ಹಣ ಪಡೆದಿದ್ದಾನೆ‌. ಆದರೆ ನನಗೆ ಒಂದು ಪೈಸೆ ವಾಪಸ್ ಕೊಟ್ಟಿಲ್ಲ‌. ಆದಿಲ್ ಮೈಸೂರು ಜನ ಸರಿ ಇಲ್ಲ ಎಂದು ನನ್ನ ಬಳಿ ಹೇಳಿದ. ಇದಕ್ಕಾಗಿಯೇ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ. ನನಗೆ ನ್ಯಾಯ ಕೊಡಿಸಿ’ ಎಂದು ಮನವಿ ಮಾಡಿದ್ದಾರೆ.

ಕೋರ್ಟ್ ಆವರಣದಲ್ಲಿ ಮತ್ತೆ ರಾಖಿ ಹೈಡ್ರಾಮಾ; ತಲೆ ಚಚ್ಚಿಕೊಂಡ ನಟಿ
ಇನ್ನು ಮೈಸೂರು ಕೋರ್ಟ್ ಆವರಣದಲ್ಲೇ ಮತ್ತೆ ಹೈಡ್ರಾಮಾ ಮಾಡಿದ ನಟಿ ರಾಖಿ ಸಾವಂತ್, ದೆಹಲಿಯ ಲಿವ್ ಇನ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ, 'ನಾನೂ ಕೂಡ ಫ್ರಿಡ್ಜ್ ನಲ್ಲಿ ಹೆಣವಾಗಬೇಕಿತ್ತು.. ಆದರೆ ದೇವದ ದಯೆಯಿಂದ ಪಾರಾದೆ.. ಆದಿಲ್‍ನಿಂದ ಆದ ಮೋಸಕ್ಕೆ ನನಗೆ ನ್ಯಾಯ ಬೇಕು, ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು. ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಈಗ ಕೋರ್ಟ್ ಹಾಲ್ ನಲ್ಲೇ ತಮಗೆ ಆದಿಲ್ ಜೀವ ಬೆದರಿಕೆ ಹಾಕಿದ್ದಾನೆ.. ಆದಿಲ್ ಖಾನ್ ಜೈಲಿನಲ್ಲಿ ಇದ್ದುಕೊಂಡೇ ರೌಡಿಗಳನ್ನು ಭೇಟಿ ಮಾಡಿದ್ದಾನೆ. ಅದು ಹೇಗೆ ಬದುಕುತ್ತೀಯಾ ನೋಡುತ್ತೇನೆ ಎಂದು ನನಗೆ ಸವಾಲು ಹಾಕಿದ್ದಾನೆ. ನನ್ನ ಜೀವ ಅಪಾಯದಲ್ಲಿದೆ ಎಂದು ರಾಖಿ ಸಾವಂತ್ ಕಣ್ಣೀರು ಹಾಕಿ ತಲೆ ಚಚ್ಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!