ಸಾಂದರ್ಭಿಕ ಚಿತ್ರ 
ರಾಜ್ಯ

ಆಸ್ತಿ ವಿವಾದ: ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಆಸ್ತಿ ವಿವಾದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ನಡೆದಿದೆ.

ಉತ್ತರ ಕನ್ನಡ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ನಡೆದಿದೆ.

ಹತ್ಯೆಯಾದವರನ್ನು ಹಾಡವಳ್ಳಿ ನಿವಾಸಿ ಶಂಭು ಭಟ್(65), ಪತ್ನಿ ಮಾದೇವಿ ಭಟ್(40) ಮಗ ರಾಜೀವ್ ಭಟ್(34) ಸೊಸೆ ಕುಸುಮಾ ಭಟ್(30) ಎಂದು ಗುರುತಿಸಲಾಗಿದೆ.

ಒಂದೇ ಕುಟುಂಬದ ಈ ನಾಲ್ವರನ್ನು ಕತ್ತಿಯಲ್ಲಿ ಕಡಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. 

ಆಸ್ತಿ ವಿಚಾರಕ್ಕೆ ಈ ಸಾಮೂಹಿಕ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಕೊಲೆ ಮಾಡಿದವರು ಯಾರು? ಹತ್ಯೆಗೆ ನಿಖಕರ ಕಾರಣ ಏನು? ಎನ್ನುವುದು ಇನ್ನೂ ತಿಳಿದುಬಂದಿಲ್ಲ. 

ವಿಷಯ ತಿಳಿದು ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪದೇ ಪದೇ ಇರಾನ್ ದಾಳಿ: ಅಬುದಾಬಿಯಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು, ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಸಾವು!

ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಕಣದಲ್ಲಿ 34 ಅಭ್ಯರ್ಥಿಗಳು, 80 ಲಕ್ಷ ನಗದು, 1.74 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಕಾಮಕಾಂಡ: ಸಚಿವ ನರಹರಿ ಜಿರ್ವಾಲ್ 'ಅಶ್ಲೀಲ ವಿಡಿಯೋ' ವೈರಲ್!

ಕಾಡುಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರಿ ಉದ್ಯೋಗವಿಲ್ಲ: ಸಚಿವ ಈಶ್ವರ್ ಖಂಡ್ರೆ

News wrap 26-03-2026 | ಉಗ್ರ ನಂಟು: ಬಳ್ಳಾರಿ ಮೂಲದ ಯುವಕ ಸೇರಿ 12 ಮಂದಿ ಬಂಧನ; IPL: ನಮಗೆ ಒಂದೇ ಟಿಕೆಟ್ ಕೊಡ್ತಾರೆ, 5 ಬೇಕು- ಶಾಸಕರ ಆಗ್ರಹ; ಸಿಎಂ ಗೆ ಮತ್ತೆ ಮುಡಾ ತಲೆನೋವು!

SCROLL FOR NEXT