ಸಂಗ್ರಹ ಚಿತ್ರ 
ರಾಜ್ಯ

ಕಾರವಾರ: ಪತ್ನಿ ಕೊಂದು ಬ್ಯಾರೆಲ್ ನಲ್ಲಿ ಬಚ್ಚಿಟ್ಟಿದ್ದ ಪತಿಯ ಬಂಧನ

ಪತ್ನಿಯನ್ನು ಹತ್ಯೆ ಮಾಡಿದ ಪತಿಯೊಬ್ಬ ನಂತರ ಶವವನ್ನು ನೀರು ತುಂಬುವ ಬ್ಯಾರಲ್ ನಲ್ಲಿ ಇಟ್ಟು ಕಾಡಿಗೆ ಎಸೆದಿರವ ದಾರುಣ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರಗಾಂವನಲ್ಲಿ ನಡೆದಿದೆ.

ಕಾರವಾರ: ಪತ್ನಿಯನ್ನು ಹತ್ಯೆ ಮಾಡಿದ ಪತಿಯೊಬ್ಬ ನಂತರ ಶವವನ್ನು ನೀರು ತುಂಬುವ ಬ್ಯಾರಲ್ ನಲ್ಲಿ ಇಟ್ಟು ಕಾಡಿಗೆ ಎಸೆದಿರವ ದಾರುಣ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರಗಾಂವನಲ್ಲಿ ನಡೆದಿದೆ.

ಘಟನೆ ಸಂಬಂಧ ಹಳಿಯಾಳ-ದಾಂಡೇಲಿ ಪೊಲೀಸರು ಆರೋಪಿ ಹಾಗೂ ಶವ ವಿಲೇವಾರಿಗೆ ಸಹಕರಿಸಿದ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ.

ಮೃತ ಮಹಿಳೆಯನ್ನು ಶಾಂತಕುಮಾರಿ ಎಂದು ಗುರ್ತಿಸಲಾಗಿದೆ. ತನಗಿಂತ 10 ವರ್ಷ ಕಿರಿಯವನಾದ ತುಕಾರಾಂ ಎಂಬಾತನನ್ನು ಶಾಂತಕುಮಾರಿ ವಿವಾಹವಾಗಿದ್ದರು. ತನಗೆ ದ್ರೋಹ ಬಗೆದಿರುವುದಾಗಿ ಶಾಂತಕುಮಾರಿ ಆಗಾಗ್ಗೆ ಪತಿಯೊಂದಿಗೆ ಜಗಳ ಮಾಡುತ್ತಿದ್ದಳು. ಈ ಗಲಾಟೆ ವಿಕೋಪಕ್ಕೆ ತಿರುಗಿದಾಗ, ತುಕಾರಾಮ್, ಶಾಂತಕುಮಾರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಪತ್ನಿಯ ಶವವನ್ನು ನೀರು ತುಂಬುವ ಬ್ಯಾರಲ್​​ನಲ್ಲಿ ಬಚ್ಚಿಟ್ಟಿದ್ದಾನೆ.

ಬಳಿಕ ಮನೆ ಖಾಲಿ ಮಾಡುವ ನೆಪದಲ್ಲಿ ಇಬ್ಬರ ಸಹಾಯದೊಂದಿಗೆ ಟಾಟಾ ಎಸ್​ ಬಾಡಿಗೆ ಪಡೆದು ಶವ ತುಂಬಿದ ಬ್ಯಾರಲ್​​'ನ್ನು ವಾಹನದಲ್ಲಿ ಇರಿಸಿದ್ದಾನೆ. ಇದನ್ನು ಗಮನಿಸಿದ ಮನೆ ಮಾಲೀಕರು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತುಕಾರಾಂ ಗೋವಾಗೆ ಹೋಗಬೇಕೆಂದು ಉತ್ತರಿಸಿದ್ದಾನೆ. ನಂತರ ಶವವನ್ನು ಕಾಡೊಂದರಲ್ಲಿ ಎಸೆದಿದ್ದಾನೆ. ಈ ನಡುವೆ ಮಾಹಿತಿ ತಿಳಿದಿದ್ದ ಪೊಲೀಸರು ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ಆರಂಭಿಸಿದ್ದಾರೆ.

ವಾಹನದ ಬಗ್ಗೆ ವಿವರಗಳು ನಮಗೆ ತಿಳಿದಿರಲಿಲ್ಲ. ಆದರೆ, ವಾಹನದಲ್ಲಿ ಮೂವರು ಇರುತ್ತಾರೆಂಬ ಮಾಹಿತಿ ಮಾತ್ರ ತಿಳಿದಿತ್ತು. ತೇರ್ಗಾಂವ್ ಗ್ರಾಮದ ಬಳಿ ವಾಹನವೊಂದು ಕಂಡು ಬಂದಿತ್ತು. ಆದರೆ, ವಾಹನದಲ್ಲಿ ಏನೂ ಇರಲಿಲ್ಲ. ಈ ವೇಳೆ ವಾಹನವನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಆರೋಪಿಗಳು ಹತ್ಯೆ ಕುರಿತು ಬಾಯ್ಬಿಟ್ಟಿದ್ದರು. ಬಳಿಕ ಶವ ಎಸೆದ ಸ್ಥಳಕ್ಕೆ ನಮ್ಮನ್ನು ಕರೆದೊಯ್ದಿದ್ದರು. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಮಹಿಳೆಗಿದು ಎರಡನೇ ವಿವಾಹವಾಗಿತ್ತು. ಬಂಧಿತರಾಗಿರುವ ಇಬ್ಬರನ್ನು ರಿಜ್ವಾನ್ ಮತ್ತು ಸಮೀರ್ ಪಂತೋಜಿ ಎಂದು ಗುರ್ತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ: 6 ಅಂತಸ್ತಿನ ಕಟ್ಟಡ ಕುಸಿತ; ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

ಹಿಂದೂ ದೇವತೆಗಳಿಗೆ ಅಪಮಾನ: ನಿಶು ಆಜಾದ್ ವಿರುದ್ಧ ದೂರು ದಾಖಲಿಸಿದ ಸುಪ್ರೀಂ ಕೋರ್ಟ್ ವಕೀಲ!

ನೇಪಾಳದಲ್ಲಿ ಮತ್ತೆ ಪ್ರವಾಹ ಆತಂಕ; ಬುಧಿಗಂಡಕಿ ನದಿ ತೀರದಲ್ಲಿ ಹೈ ಅಲರ್ಟ್, ಆಗಿದ್ದೇನು?

ಉಡುಪಿ: ವಿಟ್ಲಪಿಂಡಿ ಉತ್ಸವದ ವೇಳೆ ಸ್ವಾಮೀಜಿಗಳ ಕೈಯಿಂದ ಜಾರಿದ ಶ್ರೀಕೃಷ್ಣನ ಉತ್ಸವ ಮೂರ್ತಿ, ಭಕ್ತರಲ್ಲಿ ಹೆಚ್ಚಿದ ಆತಂಕ!

ಮಧ್ಯಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 12 ಮಂದಿ ಸಾವು, ಹಲವರ ಸ್ಥಿತಿ ಗಂಭೀರ! ಕಠಿಣ ಕ್ರಮಕ್ಕೆ ಸಿಎಂ ಆದೇಶ