ರಾಜ್ಯ

ಕೋವಿಡ್ ಆತಂಕ: ಹೊಸವರ್ಷ ಸಂಭ್ರಮಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ

Manjula VN

ಬೆಂಗಳೂರು: ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ತಲೆದೋರಿದ್ದು, ಈ ಬೆಳವಣಿಗೆ ಭಾರತದಲ್ಲಿಯೂ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸುವಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಕೋವಿಡ್ ಸೋಂಕು ಭೀತಿಯಿಂದಾಗಿ ಕೆಲವರು ಮನೆಗಳಲ್ಲಿಯೇ ಆಚರಣೆ ಮಾಡಿದ್ದಾರೆ, ಇನ್ನೂ ಕೆಲವರು ಹೊರಬಂದು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

ಇದಲ್ಲದೆ, ಪೊಲೀಸರು ಕೇವಲ 1 ಗಂಟೆಯವರೆಗೆ ಮಾತ್ರ ಆಚರಣೆಗೆ ಅವಕಾಶ ನೀಡಿದ್ದು ಹಾಗೂ ಕೆಲವು ನಿರ್ಬಂಧಗಳನ್ನು ಹೇರಿದ್ದು ಕೂಡ ಜನರು ಮನೆಯಿಂದ ಹೊರಬರದಿರಲು ಕಾರಣವಾಯಿತು.

ದೆಹಲಿ ಮೂಲದ ಗಾಯತ್ರಿ ಪಿಪ್ಲಾನಿ ಎಂಬುವವರು ಮಾತನಾಡಿ, ಭಾನುವಾರ ಕೂಡ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದೆ. ಬೆಂಗಳೂರಿಗೆ ಹೋಲಿಕೆ ಮಾಡಿದರೆ, ಹೊಸ ವರ್ಷ ಸಂಭ್ರಮ ದೆಹಲಿಯಲ್ಲಿಯೇ ಉತ್ತಮವಾಗಿದೆ. ಏಕೆಂದರೆ, ಬೆಂಗಳೂರಿನಲ್ಲಿ ಕೇವಲ 1 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಇದು ಕೂಡ ಮನೆಯಲ್ಲಿರುವಂತೆ ಮಾಡುತ್ತಿದೆ. ಹೊರಗೆ ಪಾರ್ಟಿ ಮಾಡಿ ಸಂಕಷ್ಟ ಎದುರಿಸುವ ಬದಲು ಕುಟುಂಬಸ್ಥರೊಂದಿಗೆ ಸಮಯ ಕಳೆಯುವುದು ಉತ್ತಮ ಎಂದು ತಿಳಿಸಿದ್ದಾರೆ.

ಹೊಸ ವರ್ಷ ಹಿನ್ನೆಲೆಯಲ್ಲಿ ನಾವು ಒಟ್ಟಿಗೆ ಕಾಲ ಕಳೆದವು. ಇದೀಗ ಮನೆಗಳಿಗೆ ಹಿಂತಿರುಗುತ್ತಿದ್ದೇವೆಂದು ಇಂದಿನಾಗರದ ರಸ್ತೆಯಲ್ಲಿ ನಡೆದುುಹೋಗುತ್ತಿದ್ದ ಮೂವರು ಸ್ನೇಹಿತರು ಹೇಳಿದ್ದಾರೆ.

ನಗರದಾದ್ಯಂತ ವಿವಿಧ ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಭಾರಿ ಜನಸಂದಣಿ ಇದ್ದರೂ, ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಹೊರಡಿಸಿರುವ ಕೋವಿಡ್ -19 ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿರಾನಗರದ ಟೊಯಿಟ್ ಬ್ರೂಪಬ್‌ನ ಆಡಳಿತ ಮಂಡಳಿಯು ಪಬ್‌ನಲ್ಲಿ ಮಾಸ್ಕ್ ಧರಿಸಿರುವವರಿಗೆ ಮಾತ್ರ ಅವಕಾಶ ನೀಡುತ್ತಿದೆ. ತ್ರೀ ಡಾಟ್ಸ್ ಕೂಡ ಎಲ್ಲಾ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿರುವುದಾಗಿ ಹೇಳಿದೆ.

ರೆಸ್ಟೋರೆಂಟ್‌ನ ವಿವಿಧ ಸ್ಥಳಗಳಲ್ಲಿ ಸ್ಯಾನಿಟೈಸರ್‌ಗಳನ್ನು ಒದಗಿಸಲಾಗಿದೆ ಮತ್ತು ಪ್ರತೀ ಹೊಸ ಗ್ರಾಹಕರು ಬರುವ ಮುನ್ನವೇ ಟೇಬಲ್‌ಗಳನ್ನು ಸಿಬ್ಬಂದಿಗಳು ಸ್ಯಾನಿಟೈಜ್ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

SCROLL FOR NEXT