ಮಂಡ್ಯದಲ್ಲಿ ತಯಾರಿಸಿದ ಆಹಾರಗಳನ್ನು ಗುಂಡಿಗೆ ಎಸೆದಿರುವುದು 
ರಾಜ್ಯ

ಮಂಡ್ಯ: ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆಂದು ಸಿದ್ದಪಡಿಸಿದ್ದ ಟನ್ ಗಟ್ಟಲೆ ಆಹಾರ ಮಣ್ಣುಪಾಲು!

ಮಂಡ್ಯದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗಾಗಿ ತಯಾರಿಸಿದ್ದ ಅಪಾರ ಪ್ರಮಾಣದ ಆಹಾರ ಪದಾರ್ಥವನ್ನು ಗುಂಡಿಗೆ ಎಸೆದಿರುವುದು ಪತ್ತೆಯಾಗಿದೆ. 

ಮೈಸೂರು: ಮಂಡ್ಯದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗಾಗಿ ತಯಾರಿಸಿದ್ದ ಅಪಾರ ಪ್ರಮಾಣದ ಆಹಾರ ಪದಾರ್ಥವನ್ನು ಗುಂಡಿಗೆ ಎಸೆದಿರುವುದು ಪತ್ತೆಯಾಗಿದೆ. 

15 ಬೃಹತ್ ಸ್ಟೀಲ್ ಬಕೆಟ್‌ಗಳು, 250 ಕೆಜಿ ತರಕಾರಿ ಬಾತ್, ಏಳು ಬಕೆಟ್ ಮೊಸರನ್ನ, 50,000 ಸಿಹಿತಿಂಡಿಗಳನ್ನು ಗುಂಡಿಯಲ್ಲಿ ಎಸೆದು ಮಣ್ಣಿನಿಂದ ಮುಚ್ಚಲಾಗಿದೆ. ಮಂಡ್ಯದ ಬಾಲಕರ ಕಾಲೇಜು ಬಳಿಯ ತೆರೆದ ಮೈದಾನದಲ್ಲಿ ಸಂಘಟಕರು ಅಗೆಯುವ ಯಂತ್ರ ಬಳಸಿ ಗುಂಡಿ ತೋಡಿದ್ದಾರೆ.

ಪಕ್ಷದ ಜನಸಂಕಲ್ಪ ಯಾತ್ರೆಗೆ ಶುಕ್ರವಾರ ಬಿಜೆಪಿ ಮುಖಂಡರು ಮಂಡ್ಯ ಮತ್ತು ನೆರೆಯ ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚು ಜನರನ್ನು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಲ್ಲಿ ಸ್ಥಳಕ್ಕೆ ಕರೆತಂದರು. ಸಂಘಟಕರು 1.5 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಊಟ ಬಡಿಸಲು ಆರಂಭಿಸಿದ್ದರು. ಕೆಲವೇ ನಿಮಿಷಗಳಲ್ಲಿ, ಆಹಾರ ಕೌಂಟರ್‌ಗಳಲ್ಲಿ ಜನರ ಸರತಿ ಸಾಲುಗಳು ಇದ್ದವು.

ಆದರೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಿಂದ ಡೇರಿ ಉದ್ಘಾಟನೆ ಮುಗಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಶಾ ತೆರಳುತ್ತಿದ್ದಂತೆ ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡರು ಪಕ್ಷದ ಕಾರ್ಯಕರ್ತರಿಗೆ ಊಟ ಬಡಿಸುವುದನ್ನು ನಿಲ್ಲಿಸಿ ಜನರನ್ನು ಕುರ್ಚಿಗೆ ಮರಳುವಂತೆ ಸೂಚಿಸಿದರು.

ಕಾರ್ಯಕ್ರಮದ ನಂತರ, ಹೆಚ್ಚಿನ ಜನರು ತಮ್ಮ ಹಳ್ಳಿಗಳಿಗೆ ಹಿಂತಿರುಗಲು ತಮ್ಮ ಬಸ್‌ಗಳತ್ತ ನಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT