ರಾಜ್ಯ

ಬೆಂಗಳೂರು: ಹೊಸ ವರ್ಷ ಆಚರಣೆ ವೇಳೆ 78 ಡ್ರಂಕ್​ ಆಂಡ್​ ಡ್ರೈವ್​ ಪ್ರಕರಣ ದಾಖಲು

Manjula VN

ಬೆಂಗಳೂರು: ಹೊಸ ವರ್ಷ ಮುನ್ನಾ ದಿನ ನಗರದ ಎಂ.ಜಿ ರೋಡ್​, ಬ್ರಿಗೇಡ್​​ ರೋಡ್ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಜನಸಂದಣಿ ಸೇರಿತ್ತು. ಈ ಬಾರಿಯ ಹೊಸ ವರ್ಷವನ್ನು ಸಿಲಿಕಾನ್ ಸಿಟಿ ಜನತೆ ಸಂಭ್ರಮದಿಂದ ಸ್ವಾಗತಿಸಿದರು. ಶನಿವಾರ ಮಧ್ಯಾಹ್ನದಿಂದಲೇ ಸಾಕಷ್ಟು ಜನರು ಪಾರ್ಟಿಗಳನ್ನು ಆರಂಭಿಸಿದ್ದರು. ಪಾರ್ಟಿಯಲ್ಲಿ ಹಲವು ಪಾನಮತ್ತರಾಗಿದ್ದು, ಮತ್ತಿನಲ್ಲಿ ವಾಹನಗಳನ್ನು ಚಲಾಯಿಸಿ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ತಡರಾತ್ರಿ ಕುಡಿದು ವಾಹನ ಚಲಾಯಿಸುತ್ತಿದ್ದ 78 ಮಂದಿಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ನಿಯಮ ಉಲ್ಲಂಘಿಸಿದವರಿಂದ ದಂಡ ಸಂಗ್ರಹಿಸಿದ್ದಾರೆ.

ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಅವರು ಈ ಸಂಬಂಧ ಮಾಹಿತಿ ನೀಡಿದ್ದು, ಹೊಸ ವರ್ಷಾಚರಣೆ ನಿಮಿತ್ತ ನಗರ ಸಂಚಾರಿ ಪೊಲೀಸರು ಡಿ.31 2022 ರಿಂದ ಜನವರಿ 1 2023ರ ವರೆಗೆ ಬೈ ಸವಾರರನ್ನು ತಪಾಸಣೆ ಮಾಡಿದ್ದಾರೆ. ಹೀಗೆ ತಪಾಸಣೆ ಮಾಡಿದವರಲ್ಲಿ 78 ಜನರು ಕುಡಿದು ವಾಹನ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.

“ತಡರಾತ್ರಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘನೆಗಾಗಿ 78 ಜನರಿಗೆ ದಂಡ ವಿಧಿಸಲಾಗಿದೆ. ಇನ್ನೂ ಜವಾಬ್ದಾರಿಯುತವಾಗಿ ಚಾಲನೆ ಮಾಡಿದ್ದಕ್ಕಾಗಿ ಬೆಂಗಳೂರಿಗರಿಗೆ ಧನ್ಯವಾದಗಳು! ನಿಮ್ಮೆಲ್ಲರಿಗೂ ಸಂತೋಷ, ಸುರಕ್ಷಿತ ಮತ್ತು ಸಮೃದ್ಧ ಹೊಸ ವರ್ಷವನ್ನು ಹಾರೈಸುತ್ತೇನೆ” ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲ ಮತ್ತು ಇಂದಿರಾನಗರದ ಬಳಿ ಸಾವಿರಾರು ಜನರು ಜಮಾಯಿಸಿದರೂ ಹೆಚ್ಚಿನ ಉಲ್ಲಂಘನೆ ಕಂಡುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT